ಸೌತ್ ನಟಿ ಸಮಂತಾ (Samantha) ಅವರು ತಮ್ಮ ಆರೋಗ್ಯದ ಚೇತರಿಕೆಗಾಗಿ ಒಂದು ವರ್ಷ ಬ್ರೇಕ್ ತೆಗೆದುಕೊಂಡಿದ್ದಾರೆ. ಸದ್ಯ ಬಾಲಿಯಲ್ಲಿ (Baali) ಬೀಡು ಬಿಟ್ಟಿರೋ ಸಮಂತಾ, ಎಂಜಾಯ್ ಮಾಡ್ತಾರೆ ಎಂದೆಲ್ಲಾ ಅಭಿಮಾನಿಗಳು ಊಹಿಸಿದ್ದರು. ಆದರೆ ಅಲ್ಲೂ ಕೂಡ ಜಿಮ್ ವರ್ಕೌಟ್ ಅಂತಾ ನಟಿ ಬ್ಯುಸಿಯಾಗಿದ್ದಾರೆ. ಸದ್ಯ ಐಸ್‌ಬಾತ್‌ನಲ್ಲಿ ಕುಳಿತಿರುವ ವಿಡಿಯೋ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಕೀರ್ತಿ ಪಾತ್ರಕ್ಕೆ ಗುಡ್ ಬೈ ಹೇಳಿದ ತನ್ವಿ ರಾವ್
Advertisement
ಸಿನಿಮಾಗೆ ಬ್ರೇಕ್ ನೀಡಿ, ತಮ್ಮ ಆರೋಗ್ಯದ ಕಡೆ ಗಮನ ಕೊಡುತ್ತಿರೋ ಸ್ಯಾಮ್ ಈಗ ಬಾಲಿಯಲ್ಲಿದ್ದಾರೆ. ಮಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿರೋ ನಟಿ, ಉತ್ತಮ ಆರೋಗ್ಯಕ್ಕಾಗಿ ಏನು ಬೇಕೋ ಅದನ್ನ ಮಾಡ್ತಿದ್ದಾರೆ. ಇದೀಗ ಸಮಂತಾ ತಾವು 4 ಡಿಗ್ರಿ ಸೆಲ್ಶಿಯಸ್‌ನ ಐಸ್‌ಬಾತ್ ತೆಗೆದುಕೊಂಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಐಸ್‌ಗಳಿಂದ ತುಂಬಿದ ಟಬ್‌ನಲ್ಲಿ ಬರೋಬ್ಬರಿ 6 ನಿಮಿಷ ಕೂತಿದ್ದಾರೆ ಹಾಗಂತ ಖುದ್ದು ಸಮಂತಾನೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.
Advertisement
Advertisement
ಐಸ್‌ಬಾತ್ ಮಾಡುವ ಪದ್ಧತಿ ಇತ್ತೀಚೆಗೆ ತುಸು ಹೆಚ್ಚಾಗಿದೆ. ಹೀಗೆ ವಿಪರೀತ ಕೊರೆಯುವ ನೀರಿನಲ್ಲಿ ಸುಮ್ಮನೆ ಕೂರುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ. ವ್ಯಾಯಾಮದಿಂದ ದಣಿದ ಮಾಂಸಖಂಡಗಳು ತ್ವರಿತವಾಗಿ ವಿಶ್ರಾಂತ ಸ್ಥಿತಿಗೆ ಹೋಗುತ್ತವೆ ಮತ್ತು ಮತ್ತೊಮ್ಮೆ ವ್ಯಾಯಾಮ ಮಾಡಲು ದೇಹ ಅಣಿಯಾಗುತ್ತದೆ. ಅಲ್ಲದೆ ಇದರಿಂದ ರಕ್ತಪರಿಚಲನೆ ಬೇಗ ಸುಲಲಿತವಾಗಿ ವ್ಯಾಯಾಮದಿಂದ ಎದುರಾಗುವ ಹೃದಯ ಸ್ಥಂಭನ ಸಾಧ್ಯತೆಗಳು ಬಹುಮಟ್ಟಿಗೆ ನಿವಾರಣೆಯಾಗುತ್ತದೆ.
Advertisement
ದೇಹದ ಮೇಲಿನ ಹಿಡಿತ ಇದರಿಂದ ಹೆಚ್ಚಾಗುತ್ತದೆ. ಕೊರೆಯುವ ನೀರಿನಲ್ಲಿ ಕೂತಾಗ ಆಗುವ ನಡುಕದ ಅನುಭವ, ಉಸಿರಾಟದ ಏರಿಳಿತ, ಹೃದಯ ಬಡಿತಗಳು ಹೆಚ್ಚುತ್ತವೆ. ಹಾಗಾಗಿ ನಿಯಮಿತವಾಗಿ ಐಸ್‌ಬಾತ್ ತೆಗೆದುಕೊಳ್ಳುವುದರಿಂದ ಇವುಗಳನ್ನು ನಿಯಂತ್ರಿಸುವ ಕ್ಷಮತೆ ಹೆಚ್ಚುತ್ತದೆ ಆ ಮೂಲಕ ದೇಹದ ಮೇಲಿನ ವಿಶೇಷವಾಗಿ ಉಸಿರಾಟದ ಮೇಲಿನ ನಿಯಂತ್ರಣ ಹೆಚ್ಚುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ನಟಿ ಐಸ್‌ಬಾತ್ ಮೊರೆ ಹೋಗಿದ್ದಾರೆ.