CinemaLatestMain PostSouth cinema

ಸಮಂತಾ – ವಿಜಯ್‌ ದೇವರಕೊಂಡ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್!

ಸೌತ್ ಬ್ಯೂಟಿ ಸಮಂತಾ ಮತ್ತೆ ವಿಜಯ್‌ ದೇವರಕೊಂಡ ನಟನೆಯ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಶಿವ ನಿರ್ವಾಣ ನಿರ್ದೇಶನದಲ್ಲಿ ಮೂಡಿ ಬರಲಿರುವ `ಖುಷಿ’ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ.

`ಮಹಾನಟಿ’ ಚಿತ್ರದ ಮೂಲಕ ಸಿನಿಪ್ರಿಯರ ಮನಗೆದ್ದ ಜೋಡಿ ಸಮಂತಾ ಮತ್ತು ವಿಜಯ್‌ ದೇವರಕೊಂಡ ಮತ್ತೆ ತೆರೆಯ ಮೇಲೆ ಒಟ್ಟಿಗೆ ನಟಿಸಲಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ ಅಭಿನಯದ `ಖುಷಿ’ ಅನ್ನೋ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದೀಗ ಇದೇ ಟೈಟಲ್ ಮೂಲಕ ಮತ್ತೆ ತೆರೆಯ ಮೇಲೆ ರಂಜಿಸಲು ಸಮಂತಾ ವಿಜಯ್ ರೆಡಿಯಾಗಿದ್ದಾರೆ.

`ಮಜಿಲಿ’ ಖ್ಯಾತಿಯ ಶಿವಾ ನಿರ್ವಾಣ ನಿರ್ದೇಶನದ `ಖುಷಿ’ ಚಿತ್ರವು ಇದೇ ಏಪ್ರಿಲ್ 21ಕ್ಕೆ ಮುಹೂರ್ತ ನೆರವೇರಲಿದ್ದು, ಏಪ್ರಿಲ್ 23ರಿಂದ ಚಿತ್ರೀಕರಣ ಶುರುವಾಗಲಿದೆ. ಇದನ್ನೂ ಓದಿ:ಕನ್ನಡದಲ್ಲೂ ಬಂತು ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

ಸಮಂತಾ ಮತ್ತು ವಿಜಯ್‌ ದೇವರಕೊಂಡ `ಖುಷಿ’ ಚಿತ್ರದ ಮೂಲಕ ವಿಭಿನ್ನ ಲವ್‌ಸ್ಟೋರಿ ಜತೆ ಕಮಾಲ್ ಮಾಡಲು ಸಜ್ಜಾಗಿದ್ದಾರೆ. `ಮಹಾನಟಿ’ ಸಿನಿಮಾ ನಂತರ ಮತ್ತೆ ಒಂದಾಗ್ತಿರೋ ಜೋಡಿನ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Leave a Reply

Your email address will not be published.

Back to top button