ಸೌತ್ ಬ್ಯೂಟಿ ಸಮಂತಾ (Samantha) ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ಭಾರೀ ಸುದ್ದಿಯಾಗ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ನಿರ್ಮಾಪಕ ರಾಜ್ ನಿಡಿಮೋರು (Raj Nidimoru) ಜೊತೆ ಸಮಂತಾ ಕಾಣಿಸಿಕೊಂಡಿದ್ದು, ಇಬ್ಬರ ಬಾಂಧವ್ಯದ ಬಗ್ಗೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:24 ಜೋಡಿಗೆ ಮಾಂಗಲ್ಯ ವಿತರಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಮಂತಾ ಭಾಗಿಯಾಗಿದ್ದರು. ಚೆಂದದ ಸೀರೆಯುಟ್ಟು ಸಮಂತಾ ನಿರ್ಮಾಪಕ ರಾಜ್ ನಿಡಿಮೋರು ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಜೊತೆಯಾಗಿ ಕಾರ್ಯಕ್ರಮಕ್ಕೆ ಬಂದಿರುವ ಫೋಟೋ ಈಗ ವೈರಲ್ ಆಗಿದೆ. ಇಬ್ಬರ ಡೇಟಿಂಗ್ ವದಂತಿಗೆ ಪುಷ್ಠಿ ಸಿಕ್ಕಂತಾಗಿದೆ. ಇಬ್ಬರ ನಡುವೆ ಲವ್ ಇದ್ಯಾ? ಎಂಬುಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿರೋದಂತೂ ಗ್ಯಾರಂಟಿ.
ನಾಗಚೈತನ್ಯ ಜೊತೆ ಸಮಂತಾ ಡಿವೋರ್ಸ್ ಪಡೆದುಕೊಂಡ ಮೇಲೆ ಒಬ್ಬಂಟಿಯಾಗಿದ್ದಾರೆ. ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಡೈರೆಕ್ಟರ್ ರಾಜ್ ಜೊತೆ ಸಮಂತಾ ಹೆಸರು ಆಗಾಗ ಸುದ್ದಿಯಾಗುತ್ತಲೇ ಇತ್ತು. ಇಬ್ಬರ ಕಡೆಯಿಂದಲೂ ಡೇಟಿಂಗ್ ಸುದ್ದಿ ಬಗ್ಗೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಈಗ ಮತ್ತೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿರೋದು ಇಂಟರ್‌ನೆಟ್‌ನಲ್ಲಿ ಹಾಟ್ ಟಾಪಿಕ್ ಆಗಿದೆ.
ಇನ್ನೂ ನಿರ್ಮಾಪಕ ರಾಜ್ ಅವರಿಗೆ ಮದುವೆ ಆಗಿದೆ. ಶ್ಯಾಮಲಿ ಡೇ ಅವರೊಂದಿಗೆ ಮದುವೆ ಆಗಿದ್ದಾರೆ. ಮೊದಲ ಪತ್ನಿಗೆ ಡಿವೋರ್ಸ್ ನೀಡಿ ಸಮಂತಾ ಜೊತೆ ರಾಜ್ 2ನೇ ಮದುವೆ ಆಗುವ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.