ಫ್ಲಾಪ್ ನಟಿ ಅಂದವ್ರಿಗೆ ಸಮಂತಾ ಖಡಕ್ ಉತ್ತರ

Public TV
1 Min Read
samantha akkineni 1

ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ತಮ್ಮನ್ನು ಫ್ಲಾಪ್ ನಟಿ ಎಂದು ಕಮೆಂಟ್ ಮಾಡಿದವರಿಗೆ ಖಾರವಾಗಿ ಉತ್ತರಿಸಿದ್ದಾರೆ.

ಫೆಬ್ರವರಿ 7ರಂದು ಬಿಡುಗಡೆಯಾಗಿದ್ದ ‘ಜಾನು’ ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ವಿಯಾಗಿಲ್ಲ. ಈ ಹಿನ್ನೆಲೆ ಸಮಂತಾ ಅವರನ್ನು ಫ್ಲಾಪ್ ನಟಿ ಎಂದು ಹಲವರು ಟೀಕಿಸಿದ್ದರು. ಇದಕ್ಕೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಸಮಂತಾ ಸಖತ್ ತಿರುಗೇಟು ನೀಡಿದ್ದಾರೆ. ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆದರೂ ಅವರನ್ನು ಸಿನಿಪ್ರಿಯರು ಒಪ್ಪುತ್ತಾರೆ. ಸಿನಿಮಾದಲ್ಲಿ ಸ್ಟಾರ್ ನಟರು ನಡೆದುಕೊಂಡು ಬಂದರೆ ಸಾಕು ಪ್ರೇಕ್ಷಕರು ಸೂಪರ್ ಎನ್ನುತ್ತಾರೆ. ಆದರೆ ನಟಿಯರು ಕಷ್ಟಪಟ್ಟು ಸಿನಿಮಾ ಮಾಡಿದರೂ ಯಾರೂ ಪ್ರಶಂಸೆ ಮಾಡಲ್ಲ. ಸಿನಿಮಾ ಫ್ಲಾಪ್ ಆದರೆ ಆ ಚಿತ್ರದ ನಟಿಯರೇ ಕಾರಣ ಎಂದು ದೋಷಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Samantha ruthprabhu

ಒಂದು ವೇಳೆ ತಮ್ಮ ನೆಚ್ಚಿನ ಸ್ಟಾರ್ ನಟರ ಮೂರು ಸಿನಿಮಾಗಳು ಫ್ಲಾಪ್ ಆದರೂ ಅವರ ನಾಲ್ಕನೇ ಸಿನಿಮಾವನ್ನು ನೋಡಲು ಅಭಿಮಾನಿಗಳು ಹೋಗುತ್ತಾರೆ. ಅದೇ ಒಂದು ಸಿನಿಮಾ ಫ್ಲಾಪ್ ಆದರೂ ನಟಿಯನ್ನು ಫ್ಲಾಪ್ ನಟಿ ಎನ್ನುತ್ತಾರೆ ಎಂದು ಸಮಂತಾ ಕಿಡಿಕಾರಿದ್ದಾರೆ.

Samantha 2

ಟಾಲಿವುಡ್‍ನ ಟಾಪ್ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಟಾಲಿವುಡ್‍ನಲ್ಲಿ ಹಲವು ಬ್ಲಾಕ್‍ಬಾಸ್ಟರ್ ಸಿನಿಮಾಗಳಿಗೆ ಅವರ ಕೊಡುಗೆ ಇದ್ದರೂ ಕೆಲ ಸಿನಿಮಾ ಫ್ಲಾಪ್ ಆಗಿದಕ್ಕೆ ಸಮಂತಾರನ್ನು ಫ್ಲಾಪ್ ನಟಿ ಎಂದಿದ್ದು ಸರಿಯಲ್ಲ ಎಂದು ಟಾಲಿವುಡ್ ನಟ, ನಟಿಯರು ಸಮಂತಾ ಪರ ನಿಂತಿದ್ದಾರೆ.

Samantha Akkineni in a beige silk sari 1366x768 1

ತಮಿಳಿನ ಸೂಪರ್ ಹಿಟ್ ’96’ ಸಿನಿಮಾವನ್ನು ತೆಲುಗಿನಲ್ಲಿ ‘ಜಾನು’ ಎಂದು ರಿಮೇಕ್ ಮಾಡಲಾಗಿದೆ. ಈ ಚಿತ್ರದಲ್ಲಿ ಸಮಂತಾಗೆ ನಾಯಕನಾಗಿ ಶರ್ವಾನಂದ್ ನಟಿಸಿದ್ದಾರೆ. ಈ ಚಿತ್ರವನ್ನು ಸಿ. ಪ್ರೇಮ್ ಕುಮಾರ್ ನಿರ್ದೇಶಿಸಿದ್ದು, ದಿಲ್ ರಾಜು ನಿರ್ಮಿಸಿದ್ದಾರೆ. ಈ ಚಿತ್ರದ ಮೇಲೆ ಚಿತ್ರತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿನಿಮಾ ಟಾಲಿವುಡ್ ಅಂಗಳದಲ್ಲಿ ನಿರೀಕ್ಷಿಸ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಆದರಿಂದ ಕೆಲವರು ಸಮಂತಾರಿಂದಲೇ ಸಿನಿಮಾ ಫ್ಲಾಪ್ ಆಯ್ತು, ಅವರು ಫ್ಲಾಪ್ ನಟಿ ಎಂದು ಟೀಕಿಸಿದ್ದರು. ಸದ್ಯ ಸಮಂತಾ ಅವರು `ದಿ ಫ್ಯಾಮಿಲಿ ಮ್ಯಾನ್’ ಸೀಸನ್ 2 ವೆಬ್ ಸೀರಿಸ್‍ನಲ್ಲಿ ಟೆರರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *