BollywoodCinemaLatestMain PostNational

ಗಾಂಧಿಯಂತೆ ಚರಕ ತಿರುಗಿಸಿದ ಬಾಲಿವುಡ್ ಸುಲ್ತಾನ್

ಗಾಂಧಿನಗರ: ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಇಂದು ಮಹಾತ್ಮಾ ಗಾಂಧೀಜಿ ಆಶ್ರಮಕ್ಕೆ ಬಂದು ಚರಕ ತಿರುಗಿಸಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದೆ.

ಸಲ್ಲು ‘ಅಂತಿಮ್ ದಿ ಫೈನಲ್ ಟ್ರೂತ್’ ಸಿನಿಮಾ ಬಿಡುಗಡೆಗೊಂಡಿದ್ದು, ಈಗಾಗಲೇ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಆದರೆ ಈ ಚಿತ್ರದ ಬಗ್ಗೆ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಇತ್ತು. ಆದರೆ ಅಂದುಕೊಂಡಷ್ಟು ಈ ಸಿನಿಮಾ ಯಶಸ್ಸಿಯನ್ನು ಕಾಣುತ್ತಿಲ್ಲ. ಈ ಚಿತ್ರದಲ್ಲಿ ಸಲ್ಮಾನ್ ತಂಗಿ ಗಂಡ ಆಯುಷ್ ಶರ್ಮಾ ಕೂಡಾ ನಟಿಸಿದ್ದು, ಮಹಿಮಾ ಮಕ್ವಾನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ಅಪ್ಪು ಸರ್ಕಲ್’ ಉದ್ಘಾಟನೆ ಮಾಡಿದ ಯರಪ್ಪನಹಳ್ಳಿ ಗ್ರಾಮಸ್ಥರು

ಪ್ರಸ್ತುತ ಸಲ್ಲು ಭಾಯ್ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಈಗ ಅಹಮದಾಬಾದ್‍ಗೆ ಬಂದಿದ್ದಾರೆ. ಅದು ಅಲ್ಲದೇ ಅಹಮದಾಬಾದ್‍ನ ಗಾಂಧಿ ಆಶ್ರಮಕ್ಕೆ ಭೇಟಿ ಕೊಟ್ಟಿದ್ದು, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋಗಳಲ್ಲಿ ಸಲ್ಲು ಗಾಂಧೀಜಿಯವರ ಚರಕ ತಿರುಗಿಸುತ್ತಿದ್ದು, ಈ ಅಪರೂಪದ ಫೋಟೋಗಳು ಅಭಿಮಾನಿಗಳ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಫೋಟೋದಲ್ಲಿ ಸಲ್ಲು ಅವರ ಬಾಡಿಗಾರ್ಡ್ ಶೇರಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back to top button