ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಬಹುನಿರೀಕ್ಷಿತ ‘ಸಿಕಂದರ್’ (Sikandar Film) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ‘ಸಿಕಂದರ್’ ಆ್ಯಕ್ಷನ್ ಪ್ಯಾಕ್ಡ್ ಟ್ರೈಲರ್ ನೋಡಿ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ. ಇದನ್ನೂ ಓದಿ:ವರುಣ್ ಧವನ್ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ
- Advertisement 2-
‘ಸಿಕಂದರ್’ ಚಿತ್ರದ 3 ನಿಮಿಷ 8 ಸೆಕೆಂಡ್‌ಗಳ ಟ್ರೈಲರ್ ರಿಲೀಸ್ ಆಗಿದೆ. ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಭ್ರಷ್ಟ ರಾಜಕಾರಣಿಯ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ ನಟಿಸಿದ್ದಾರೆ. ಸಲ್ಮಾನ್ ಮತ್ತು ಸತ್ಯರಾಜ್ ಇಬ್ಬರ ಜಟಾಪಟಿ ಟ್ರೈಲರ್‌ನಲ್ಲಿ ಹೈಲೈಟ್ ಆಗಿದೆ.
- Advertisement 3-
View this post on Instagram
- Advertisement 4-
ಟ್ರೈಲರ್‌ನಲ್ಲಿ ಸಲ್ಮಾನ್ ಖಾನ್ ಸ್ಟೈಲೀಶ್ ಲುಕ್, ಪಂಚ್ ಡೈಲಾಗ್, ಆ್ಯಕ್ಷನ್ ಅದ್ಭುತವಾಗಿ ತೋರಿಸಲಾಗಿದೆ. ನಾಯಕಿ ರಶ್ಮಿಕಾ ಮತ್ತು ಸಲ್ಮಾನ್ ರೊಮ್ಯಾನ್ಸ್ ಕ್ಯೂಟ್ ಆಗಿದೆ. ಕನ್ನಡತಿ ರಶ್ಮಿಕಾ ಪಾತ್ರಕ್ಕೂ ‘ಸಿಕಂದರ್’ನಲ್ಲಿ ಪ್ರಾಮುಖ್ಯತೆ ಇದೆ. ಒಟ್ನಲ್ಲಿ ‘ಸಿಕಂದರ್’ ಸಿನಿಮಾ ನೋಡಲೇಬೇಕು ಎಂಬಷ್ಟರ ಮಟ್ಟಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಈ ಚಿತ್ರದಲ್ಲಿ ಸಲ್ಮಾನ್, ರಶ್ಮಿಕಾ ಜೊತೆ ಕಾಜಲ್, ಸತ್ಯರಾಜ್, ಕಾಂತಾರ ಖ್ಯಾತಿಯ ಕಿಶೋರ್, ಶರ್ಮಾನ್ ಜೋಶಿ, ಜತಿನ್ ಸರ್ನಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಸಿನಿಮಾ ಮಾ.30ರಂದು ರಿಲೀಸ್ ಆಗಲಿದೆ.