ಮುಂಬೈ: ವಿಮಾನನಿಲ್ದಾಣದ ಪ್ರವೇಶ ದ್ವಾರದ ಬಳಿಕ ಸಲ್ಮಾನ್ ಖಾನ್ ಅವರನ್ನ ತಡೆದು ಚೆಕ್ಕಿಂಗ್ ಮಾಡಿದ್ದ ಎಎಸ್‍ಐಗೆ ಸಿಐಎಸ್‍ಎಫ್ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಟೈಗರ್-3 ಸಿನಿಮಾ ಚಿತ್ರೀಕರಣಕ್ಕಾಗಿ ರಷ್ಯಾಗೆ ಹೊರಟಿದ್ದರು. ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿ ಸಲ್ಮಾನ್ ಖಾನ್ ಅವರನ್ನ ಎಎಸ್‍ಐ ಸೋಮನಾಥ್ ಮೊಹಂತಿ ತಡೆದು, ಭದ್ರತಾ ಪರಿಶೀಲನೆ ನಡೆಸಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿತ್ತು.
Advertisement
Advertisement
ಈ ಚರ್ಚೆಗಳ ನಡುವೆ ಎಎಸ್‍ಐ ಸೋಮನಾಥ್ ಮೊಹಂತಿ ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿ ಫೇಮಸ್ ಆದ್ರು. ಮತ್ತೊಂದು ಕಡೆ ಸಲ್ಮಾನ್ ಖಾನ್ ಅವರನ್ನ ತಡೆದ ಪರಿಣಾಮ ಸೋಮನಾಥ್ ಸಂಕಷ್ಟದಲ್ಲಿ ಸಿಲುಕಿದ್ದು, ಅವರ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಆರೋಪಗಳು ಕೇಳಿ ಬಂದಿವೆ ಎಂಬ ಬರಹಗಳಡಿ ಫೋಟೋಗಳು ಹರಿದಾಡಿದ್ದವು.
Advertisement
Advertisement
ಸಿಐಎಸ್‍ಎಫ್ ಸ್ಪಷ್ಟನೆ:
ಈ ಬೆಳವಣಿಗೆ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ವೀಡಿಯೋ ಕುರಿತು ವೈರಲ್ ಆಗಿರುವ ಬರಹಗಳು ಸತ್ಯವಲ್ಲ. ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರಿಂದ ಅವಾರ್ಡ್ ನೀಡಲಾಗಿದೆ ಎಂದು ಹೇಳಿದೆ. ಇನ್ನೂ ಸೋಮನಾಥ್ ಮೊಹಂತಿ ಅವರನ್ನ ರಿಯಲ್ ಟೈಗರ್ ಎಂದು ನೆಟ್ಟಿಗರು ಹಾಡಿ ಹೊಗಳಿದ್ದಾರೆ.
The contents of this tweet are incorrect & without factual basis. In fact, the officer concerned has been suitably rewarded for exemplary professionalism in the discharge of his duty. @PIBHomeAffairs
— CISF (@CISFHQrs) August 24, 2021
ಟೈಗರ್-3 ಚಿತ್ರೀಕರಣ ರಷ್ಯಾದಲ್ಲಿ ನಡೆಯುತ್ತಿದ್ದು, ಸಲ್ಮಾನ್‍ಗೆ ಕತ್ರಿನಾ ಕೈಫ್ ಜೊತೆಯಾಗಿದ್ದಾರೆ. ಇಮ್ರಾನ್ ಹಶ್ಮಿ ಮೊದಲ ಬಾರಿಗೆ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಟೈಗರ್-3 ಹೊರತುಪಡಿಸಿ ಜಾಕ್ವೇಲಿನ್ ಫರ್ನಾಂಡೀಸ್ ಜೊತೆ ಕಿಕ್-2, ಪೂಜಾ ಹೆಗ್ಡೆಯೊಂದಿಗೆ ಕಭೀ ಈದ್, ಕಭೀ ದಿವಾಲಿ ಮತ್ತು ಆಯುಷ್ ಶರ್ಮಾ ಜೊತೆಯಲ್ಲಿ ‘ಅಂತಿಮ್” ದಿ ಫೈನಲ್ ಟ್ರುಥ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಈರುಳ್ಳಿ ಉಪ್ಪಿನಕಾಯಿ ಹಾಕೋ ವೀಡಿಯೋ ವೈರಲ್