ಮುಂಬೈ: ಬಾಲಿವುಡ್ ಭಾಯ್ಜಾನ್ 53 ವರ್ಷವಾದರೂ ಮದುವೆಯಾಗಿಲ್ಲ. ಆದರೆ ಈಗ ಅವರು ಮದುವೆಯಾಗದ್ದೇನೆ ತಂದೆ ಆಗಲು ಪ್ಲಾನ್ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಸಲ್ಮಾನ್ ಖಾನ್ ಸರೋಗಸಿ ಮೂಲಕ ಮಗು ಪಡೆಯಲಿದ್ದಾರೆ ಎಂಬ ಸುದ್ದಿ ಬಾಲಿವುಡ್ನಲ್ಲಿ ಹರಿದಾಡುತ್ತಿದೆ.
ಸಲ್ಮಾನ್ ಖಾನ್ ಇನ್ನು ಮದುವೆಯಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರು ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದು ತಂದೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಸಲ್ಮಾನ್ ಖಾನ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಈ ಹಿಂದೆ ಸಲ್ಮಾನ್ ಖಾನ್ ಕಾರ್ಯಕ್ರಮವೊಂದರಲ್ಲಿ ತಾವು ಏಕೆ ಇನ್ನು ಮದುವೆಯಾಗಿಲ್ಲ ಎಂಬುದನ್ನು ತಿಳಿಸಿದ್ದರು. “ನಾನು ನನ್ನ ಕುಟುಂಬದ ವಿಷಯಕ್ಕೆ ತುಂಬಾ ಪ್ರೊಟೆಕ್ವಿವ್ ಆಗಿರುತ್ತೇನೆ. ನಾನು ನನ್ನ ಕುಟುಂಬವನ್ನು ತುಂಬಾ ಪ್ರೀತಿಸುತ್ತೇನೆ. ನನಗೆ ಸಮಯ ಸಿಕ್ಕಾಗಲೆಲ್ಲಾ ನನ್ನ ಕುಟುಂಬದ ಜೊತೆ ಕಾಲ ಕಳೆಯುತ್ತೇನೆ. ನನ್ನ ಮನೆಯವರು ನನಗೆ ಮದುವೆ ಮಾಡಿಸಲು ಹಲವು ಬಾರಿ ಮುಂದಾದರು. ಆದರೆ ನಾನು ನನ್ನ ಕುಟುಂಬ ಹೊರತುಪಡಿಸಿ ಬೇರೆ ಯಾರಿಗೂ ಮಹತ್ವ ಕೊಡುವುದಿಲ್ಲ. ಜೀವನ ಸಂಗಾತಿಗೆ ಸಮಯ ಕೊಡಲಿಲ್ಲ ಅಂದರೆ ತಪ್ಪಾಗುತ್ತೆ. ಹಾಗಾಗಿ ನಾನು ಮದುವೆಯಾಗಿಲ್ಲ” ಎಂದು ಹೇಳಿದ್ದರು.
ಬಾಲಿವುಡ್ನ ಹಲವು ಕಲಾವಿದರು ಸರೋಗಸಿ ಮೂಲಕ ಮಕ್ಕಳನ್ನು ಪಡೆದಿದ್ದಾರೆ. ನಟರಾದ ಶಾರೂಕ್ ಖಾನ್, ಅಮೀರ್ ಖಾನ್, ತುಷಾರ್ ಕಪೂರ್, ಶ್ರೇಯಸ್ ತಲ್ಪಾಡೆ, ಸಹೋಲ್ ಖಾನ್ ಹಾಗೂ ನಿರ್ದೇಶಕ ಕರಣ್ ಜೋಹರ್ ಸರೋಗಸಿ ಮೂಲಕ ಮಕ್ಕಳನ್ನು ಪಡೆದಿದ್ದಾರೆ. ಅಲ್ಲದೆ ನಟಿಯರಾದ ಸನ್ನಿ ಲಿಯೋನ್, ಲೀಸಾ ರೇ ಹಾಗೂ ನಿರ್ಮಾಪಕಿ ಏಕ್ತಾ ಕಪೂರ್ ಸರೋಗಸಿ ಮೂಲಕ ತಾಯಿ ಆಗಿದ್ದಾರೆ.