ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರ ವಿಕಲಚೇತನ ಅಭಿಮಾನಿಯೊಬ್ಬರು ತನ್ನ ನೆಚ್ಚಿನ ನಟನ ಚಿತ್ರವನ್ನು ಕಾಲಿನಲ್ಲಿ ಬಿಡಿಸಿದ್ದಾರೆ. ಸಲ್ಮಾನ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಭಾವುಕ ಸಂದೇಶ ಪ್ರಕಟಿಸಿದ್ದಾರೆ.
ಅಭಿಮಾನಿ ತನ್ನ ಮೊಬೈಲಿನಲ್ಲಿ ಸಲ್ಮಾನ್ ಖಾನ್ ಅವರ ಫೋಟೋವನ್ನು ನೋಡಿಕೊಂಡು ಕಾಲಿನಲ್ಲಿ ಚಿತ್ರ ಬಿಡಿಸಿದ್ದಾರೆ. ಈ ವಿಡಿಯೋವನ್ನು ಸಲ್ಮಾನ್ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗುತ್ತಿದೆ. ಸಲ್ಮಾನ್ ಈ ವಿಡಿಯೋ ಹಾಕಿ ಅದಕ್ಕೆ, “ನಿಮಗೆ ದೇವರ ಆಶೀರ್ವಾದ ಇರಲಿ. ಪ್ರೀತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಾಧ್ಯವಿಲ್ಲ. ನಿಮಗೆ ಹೆಚ್ಚು ಪ್ರೀತಿ ಸಿಗಲಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಅವರಿಗೆ ಹೆಚ್ಚು ಅಭಿಮಾನಿಗಳು ಇದ್ದಾರೆ. ಅವರು ಶೂಟಿಂಗ್ ಮಾಡಿದ ಸ್ಥಳದಲ್ಲಿ ಹೆಚ್ಚು ಅಭಿಮಾನಿಗಳು ಸೇರುತ್ತಾರೆ. ಇತ್ತೀಚೆಗೆ ಸಲ್ಮಾನ್ ಮಧ್ಯ ಪ್ರದೇಶದಲ್ಲಿ ‘ದಬಾಂಗ್ -3’ ಚಿತ್ರಕ್ಕಾಗಿ ಶೂಟಿಂಗ್ ಮಾಡುತ್ತಿದ್ದಾಗ ಸೆಟ್‍ನಲ್ಲಿದ್ದ ಪ್ರೇಕ್ಷಕರ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ಸಲ್ಮಾನ್ ಖಾನ್ ಕೊನೆಯದಾಗಿ ‘ಭಾರತ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ಹಾಗೂ ದಿಶಾ ಪಠಾಣಿ ನಟಿಸಿದ್ದು, ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿತ್ತು. ಈಗ ಸಲ್ಮಾನ್ ದಬಾಂಗ್ – 3 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
God bless… can’t reciprocate the love but prayers and much love !!! pic.twitter.com/lL5wmfVg7a
— Salman Khan (@BeingSalmanKhan) July 16, 2019