ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ‘ಪುಷ್ಪ 2’ (Pushpa 2) ಮತ್ತು ‘ಛಾವಾ’ ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿದೆ. ಇದರ ನಡುವೆ ಅವರ ಬಾಲಿವುಡ್ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ಸಿಖಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ನಟಿ ಈದ್ ಮತ್ತು ಹೋಳಿ ಕುರಿತಾದ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಎ.ಆರ್.ರೆಹಮಾನ್-ಸಾಯಿರಾ ಬಾನು ವಿಚ್ಛೇದನ; 29 ವರ್ಷಗಳ ದಾಂಪತ್ಯ ಜೀವನ ಅಂತ್ಯ
ಸೋಲಿನ ಸುಳಿಯಲ್ಲಿರುವ ಸಲ್ಮಾನ್ (Salman Khan) ಇದೀಗ ಸಕ್ಸಸ್‌ಗಾಗಿ ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಮತ್ತು ರಶ್ಮಿಕಾ ಜೊತೆ ಕೈಜೋಡಿಸಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್ ಮತ್ತು ರಶ್ಮಿಕಾ (Rashmika Mandanna) ಭಾಗದ ಚಿತ್ರೀಕರಣ ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾಗಾಗಿ ವಿಶೇಷವಾಗಿರುವ ಯೋಜನೆಯನ್ನು ಚಿತ್ರತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.
‘ಸಿಖಂದರ್’ (Sikandar Film) ಚಿತ್ರದಲ್ಲಿ ಈದ್ ಮತ್ತು ಹೋಳಿ ಎರಡು ಹಬ್ಬಗಳ ಆಧಾರದ ಮೇಲೆ ಎರಡು ಹಾಡುಗಳನ್ನು ಚಿತ್ರೀಕರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ. ಈ ಹಾಡುಗಳಿಗೆ ಸಲ್ಮಾನ್ ಮತ್ತು ರಶ್ಮಿಕಾ ಭರ್ಜರಿಯಾಗಿ ಹೆಜ್ಜೆ ಹಾಕಲಿದ್ದಾರಂತೆ. ಕಥೆಯ ಜೊತೆಗೆ ಡ್ಯಾನ್ಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರೆ ‘ಸಿಖಂದರ್’ ಚಿತ್ರಕ್ಕೆ ಪ್ಲಸ್ ಆಗಬಹುದು ಎಂಬುದು ಚಿತ್ರತಂಡ ಲೆಕ್ಕಚಾರವಾಗಿದೆ. ಹಾಗಾದ್ರೆ ಈ ಸುದ್ದಿ ನಿಜನಾ? ಕಾದುನೋಡಬೇಕಿದೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಇನ್ನೂ ಈ ಸಿನಿಮಾದಲ್ಲಿ ಸಲ್ಮಾನ್ ಜೊತೆ ರಶ್ಮಿಕಾ, ‘ಮಗಧೀರ’ ನಟಿ ಕಾಜಲ್ (Kajal Aggarwal) ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಮುಂದಿನ ವರ್ಷ ಈದ್ ಹಬ್ಬದಂದು ಈ ಚಿತ್ರ ರಿಲೀಸ್ ಆಗಲಿದೆ.