ಹಿರಿಯರನ್ನು ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿ- ಸಲೀಂ ಅಹ್ಮದ್

Public TV
2 Min Read
salim ahmed Chitradurga 1

–  ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿರೋದೇ ಅವರ ಸಾಧನೆ
– ಬೊಮ್ಮಾಯಿ ಸ್ವತಂತ್ರವಾಗಿ ಅಧಿಕಾರ ನಡೆಸಲು ಸಾಧ್ಯವಾಗ್ತಿಲ್ಲ

ಚಿತ್ರದುರ್ಗ:ಹಿರಿಯರನ್ನು ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ಕಾರ್ಯಕರ್ತರ ಸಭೆಗೆ ಮುನ್ನ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷ ದಲ್ಲಿರುವ ಹಿರಿಯರನ್ನ ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕ್ರತಿಯಾಗಿದೆ. ಈಗಾಗಲೇ ಬಿಜೆಪಿಯನ್ನು ಕಟ್ಟಿಬೆಳೆಸಿದ ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಸೇರಿದಂತೆ ಉಮಾ ಭಾರತಿ ಅವರನ್ನ ಮನೆಯಲ್ಲಿ ಕೂರಿಸಿದ ಕೀರ್ತಿ ಬಿಜೆಪಿಗಿದೆ ಎಂದಿದ್ದಾರೆ. ಇದನ್ನೂ ಓದಿ: ಲಸಿಕೆ ಮೇಲೆ ಜನರಿಗೆ ನಂಬಿಕೆ ಬಂದಿದೆ: ಡಾ.ಕೆ.ಸುಧಾಕರ್

Modi

ಅಲ್ಲದೇ ರಾಜ್ಯದಲ್ಲೀಗ ಇರೋದು ಭಾರತೀಯ ಜನತಾ ಪಾರ್ಟಿ ಅಲ್ಲ, ಅದೊಂದು ಭ್ರಷ್ಟ ಜನತಾ ಪಾರ್ಟಿಯಾಗಿದೆ. ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, ಇಂಧನಗಳಾದ ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಗಗನಕ್ಕೆ ಏರಿಸಿದೆ. ಹೀಗಾಗಿ ಕೇಂದ್ರ ಸಚಿವರು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೇಳದೇ ಪಾನಿಪುರಿ ತಂದ ಗಂಡ- ಪ್ರಾಣ ಬಿಟ್ಟ ಪತ್ನಿ

salim ahmed Chitradurga

ಈ ಕೋವಿಡ್ ಸಂಕಷ್ಟದ ವೇಳೆ ಜನಶೀರ್ವಾದ ಯಾತ್ರೆ ನಡೆಸಿದ ಸಚಿವರು ರಾಜ್ಯದ ಜನರ ಕಷ್ಟವನ್ನು ಆಲಿಸುತ್ತಿಲ್ಲ. ದರ ಏರಿಕೆಯಿಂದ ಜನರ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಸಂಕಷ್ಟದ ವೇಳೆ 25 ಜನ ಬಿಜೆಪಿ ಎಂಪಿಗಳು ರಾಜ್ಯದಲ್ಲಿ ಏನು ಮಾಡ್ತಿದ್ದಾರೆ? ಎಂದು ಪ್ರಶ್ನಿಸಿದರು. ಈ ಸಂಸದರು, ರಾಜ್ಯಕ್ಕೆ ಬಂದಾಗ ಮಾತ್ರ ಘರ್ಜನೆ ಮಾಡ್ತಾರೆ. ಆದರೆ ಮೋದಿ ಮುಂದೆ ಇಲಿಗಳಂತೆ ವರ್ತಿಸುತ್ತಾರೆ ಎಂದರು ಆಕ್ರೋಶ ಹೊರಹಾಕಿದ್ಧಾರೆ. ಇದನ್ನೂ ಓದಿ: ವಧು ಬೇಕಾಗಿದ್ದಾಳೆ, ಅಂಗಡಿ ಮುಂದೆ ಬೋರ್ಡ್-ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಬಂತು ಆಫರ್

bjp cng

ಮುಂದಿನ 10 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲ್ಲ ಎಂಬ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಯಾವತ್ತೂ ಪಕ್ಷ ಸಂಘಟನೆ ಮಾಡಿಲ್ಲ. ಅವರ ಹೇಳಿಕೆ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಕಟೀಲ್ ಅವರ ಹೇಳಿಯಲ್ಲಿ ಯಾವುದೇ ನಿಜಾಂಶ ಇಲ್ಲ. ನಮ್ಮ ಶಾಸಕರನ್ನು ಖರೀದಿ ಮಾಡಿ ಬಿಜೆಪಿ ಸರ್ಕಾರ ರಚಿಸಿರೋದೇ ಅವರ ಸಾಧನೆಯಾಗಿದೆ. ಹೀಗಾಗಿ ಈ ಸರ್ಕಾರಕ್ಕೆ ಹೆಚ್ಚಿ ಆಯಸ್ಸು ಇಲ್ಲ ಜೊತೆಗೆ ಹೆಚ್ಚು ದಿನ ಬದುಕೋದಿಲ್ಲ. ಹಾಗೆಯೇ ಆಕಸ್ಮಿಕವಾಗಿ ಸಿಎಂ ಬದಲಾವಣೆ ಆಗಿರಬಹುದು. ಆದರೆ ಸಿಎಂ ಬೊಮ್ಮಾಯಿ ಕೆಲವರ ಹಿಡಿತದಲ್ಲಿದ್ದೂ, ಅವರು ಸ್ವತಂತ್ರವಾಗಿ ಅಧಿಕಾರ ನಡೆಸಲು ಸಾಧ್ಯವಾಗ್ತಿಲ್ಲ ಎಂದು ಆರೋಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *