ಚಿಕ್ಕಬಳ್ಳಾಪುರ: ಜಿಲ್ಲೆಯು ಫಲಪುಷ್ಪಗಿರಿಧಾಮದ ನಾಡು, ಈ ಜಿಲ್ಲೆಯ ರೈತರು ತರಹೇವಾರಿ ಹೂ ಹಣ್ಣು ತರಕಾರಿಗಳನ್ನ ಬೆಳೆಯುತ್ತಿದ್ದಾರೆ. ರಾಜ್ಯ ರಾಜಧಾನಿಗೆ ಆ ಜಿಲ್ಲೆಯ ಹಾಲು, ಹಣ್ಣು, ಹೂ ತರಕಾರಿಗಳೇ ಜೀವಾಳವಾಗಿದೆ. ಆದ್ರೆ ಅಂತಹ ಜಿಲ್ಲೆಯ ರೈತರಿಗೆ ಅಲ್ಲಿನ ಕ್ರಿಮಿನಾಶಕ ಮಳಿಗೆಗಳ ಮಾಲೀಕರು ನೋಂದಾಯಿತ ಬಯೋ ಎಂಜೈಮ್ಸ್ (Bio Enzymes- ಕೀಟನಾಶಕ ದ್ರಾವಣ) ಕೊಡುವ ಬದಲು ಅನಧಿಕೃತ ಬಯೋ ಎಂಜೈಮ್ಸ್‌ಗಳನ್ನ ನೀಡಿ ವಂಚನೆ ಮಾಡಿದ್ದಾರೆ.
ರೈತರಿಗೆ (Farmers) ಆಗಿರುವ ವಂಚನೆಯಿಂದ ಎಚ್ಚೆತ್ತಿರುವ ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳು ದಾಳಿ ನಡೆಸಿ ಹಲವು ಅಂಗಡಿಗಳ ಮೇಲೆ ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಐವರು ಉಗ್ರರು ಬಲಿ, ಇಬ್ಬರು ಸೈನಿಕರಿಗೆ ಗಾಯ
Advertisement
Advertisement
ರೈತರಿಗೆ ವಂಚನೆ ಮಾಡಿದ ಚಿಕ್ಕಬಳ್ಳಾಪುರದ ಬಾಲಾಜಿ ಆಗ್ರೋ ಟ್ರೇಡರ್ಸ್, ಗುಡಿಬಂಡೆಯ ಲಕ್ಷ್ಮಿವೆಂಕಟೇಶ್ವರ ಫರ್ಟಿಲೈಸರ್ಸ್, ಚಿಂತಾಮಣಿಯ ಎಸ್‌ಎಲ್‌ಎನ್ ಟ್ರೇಡರ್ಸ್, ನವಗ್ರೋಮರ್ ಕೋರಮಮಂಡಲ್ ಇಂಟರ್ ನ್ಯಾಷನಲ್, ಬಾಗೇಪಲ್ಲಿಯ ಶ್ರೀ ಭೇರವೇಶ್ವರ ಆಗ್ರಿ ಕ್ಲಿನಿಕ್ ಸೇರಿದಂತೆ ಎಸ್‌ಪಿಆರ್ ಆಗ್ರೋ ಕ್ಲಿನಿಕ್‌ನ ಮೇಲೆ ಕೇಸ್ ಸಹ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಅಂತ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಾವೀದಾ ನಸೀಮಾ ಖಾನಂ ʻಪಬ್ಲಿಕ್ ಟಿವಿʼಗೆ ತಿಳಿಸಿದರು.
Advertisement
Advertisement
ನಕಲಿ ಬಯೋ ಎಂಜೈಮ್ಸ್ ಬಳಸದಂತೆ ರೈತರಿಗೆ ಮನವಿ:
ಅಂದಹಾಗೆ ಜಿಲ್ಲೆಯಲ್ಲಿ ತರಹೇವಾರಿ ಹೂ, ದಾಳಿಂಬೆ, ದ್ರಾಕ್ಷಿ, ಟೊಮೆಟೊ, ಸೌತೆಕಾಯಿ, ಬೀನ್ಸ್, ಬದನೆಕಾಯಿ, ಸೇರಿದಂತೆ ಅನೇಕ ತರಕಾರಿಗಳನ್ನ ಬೆಳೆಯಳಾಗುತ್ತದೆ. ಹೀಗಾಗಿ ಹೂ ಹಣ್ಣು ತರಕಾರಿಗಳು ಉತ್ತಮ ಇಳುವರಿ ಬರುವ ಸಲುವಾಗಿ ನೈಸರ್ಗಿಕವಾಗಿ ಮಾಡಲಾದ ಕೆಮಿಕಲ್ಸ್ ಇಲ್ಲದ ಬಯೋ ಎಂಜೈಮ್ಸ್‌ಗಳನ್ನ ಬಳಸಲಾಗುತ್ತಿದೆ. ಇದನ್ನೂ ಓದಿ: ನೈಸ್ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದ ಲಾರಿ ಚಾಲಕರು – ಫುಲ್ ಟ್ರಾಫಿಕ್ ಜಾಮ್
ಡ್ರಿಪ್ಸ್ ವಾಟರ್ ಸಾಲಿಬಲ್ ಮೂಲಕ ಈ ಬಯೋ ಎಂಜೈಮ್ಸ್‌ಗಳನ್ನ ಬೆಳೆಗೆ ನೀಡಲಾಗುತ್ತದೆ. ಆದ್ರೆ ಇದೇ ಬಯೋ ಎಂಜೈಮ್ಸ್‌ಗಳಲ್ಲಿ ಕೀಟನಾಶಕ ಸಹ ಮಿಶ್ರಣ ಮಾಡಿರೋ ಪರೀಕ್ಷೆಯಲ್ಲಿ ಧೃಢವಾಗಿದ್ದು, ಈ ಬಗ್ಗೆ ರೈತರು ಅನಧಿಕೃತ ಬಯೋ ಎಂಜೈಮ್ಸ್ ಬಳಸೋ ಬದಲು ಆಸಲಿ ನೊಂದಾಯಿಸಿದ ಬಯೋ ಎಂಜೈಮ್ಸ್‌ಗಳನ್ನ ಬಳಸುವಂತೆ ಕೃಷಿ ಇಲಾಖೆಯ ಉಪನಿರ್ದೇಶಕಿ ದೀಪಾಶ್ರೀ ಮನವಿ ಮಾಡಿದ್ದಾರೆ.
ನೊಂದಾಯಿಸದ ಕೀಟನಾಶಕ ಮಿಶ್ರಿತ ನಕಲಿ ಬಯೋ ಎಂಜೈಮ್ಸ್ ಬಳಸುವುದರಿಂದ ಫಸಲಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ, ನಂತರ ಇದನ್ನು ಸೇವಿಸುವ ಜನರ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ ಕಾಂಗ್ರೆಸ್‌ನಲ್ಲಿ ಅಸಮಾಧಾನ – ಉಸ್ತುವಾರಿ ಮಲ್ಲಿಕಾರ್ಜುನ್ ಬದಲಾಯಿಸುವಂತೆ ಶಿವಗಂಗಾ ಬಸವರಾಜ್ ಪತ್ರ