ಕೋಲಾರ: ವೇತನ ಪರಿಷ್ಕರಣೆ ಹಾಗೂ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿ ಮನನೊಂದು 108 ಅಂಬುಲೆನ್ಸ್ ಚಾಲಕ (Ambulance Driver) ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ (Kolar) ತಾಲೂಕು ವೇಮಗಲ್ ಸರ್ಕಾರಿ ಆಸ್ಪತ್ರೆ (Government Hospital) ಅಂಬುಲೆನ್ಸ್ ಚಾಲಕ ಅರುಣ್ ಕುಮಾರ್ ರಾತ್ರಿ 10 ಗಂಟೆ ಸುಮಾರಿಗೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ 108 ಅಂಬುಲೆನ್ಸ್ ನೌಕರರ ಹೋರಾಟದ ಎಚ್ಚರಿಕೆ
Advertisement
Advertisement
ಕಳೆದ 8 ವರ್ಷಗಳಿಂದ ಅಂಬುಲೆನ್ಸ್ (108 Ambulance) ಚಾಲಕನಾಗಿರುವ ಅರುಣ್ ವೇತನ ಹೆಚ್ಚಳಕ್ಕಾಗಿ ಕಾದು ಕುಳಿತಿದ್ದರು. ಆದರೆ ಸರ್ಕಾರ ವೇತನ ಪರಿಷ್ಕರಣೆಯಾಗಲಿ, ಹೆಚ್ಚಳ ಮಾಡುವ ಗೋಜಿಗಾಗಲಿ ಹೋಗಿಲ್ಲ. ಇದರಿಂದಾಗಿ ಅರುಣ್ ಕುಮಾರ್ ಮನನೊಂದಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾರೆ. ಇದನ್ನೂ ಓದಿ: ಒಂದು ಲಕ್ಷ ಸರ್ಕಾರಿ ಉದ್ಯೋಗ, ಉಚಿತ ವಿದ್ಯುತ್ – ಹಿಮಾಚಲ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ
Advertisement
Advertisement
ಕೂಡಲೇ ಅರುಣ್ ಕುಮಾರ್ ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.