ಬೆಂಗಳೂರು: ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ (Gram Panchayat Library) ಕೆಲಸ ನಿರ್ವಹಿಸೋ ಸಿಬ್ಬಂದಿಗೆ ಸರ್ಕಾರ ಕನಿಷ್ಠ ವೇತನ ಕೊಡಬೇಕು ಅಂತ ಬಿಜೆಪಿ ಸದಸ್ಯ ಡಿ.ಎಸ್ ಅರುಣ್ ಸರ್ಕಾರಕ್ಕೆ ಒತ್ತಾಯ ಮಾಡಿದ್ರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದರು. ಗ್ರಾಮ ಪಂಚಾಯಿತಿ ಕಾರ್ಯ ಮಾಡ್ತಿರೋ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಕೊಡ್ತಿಲ್ಲ. ಸಂಬಳವೂ ಸರಿಯಾಗಿ ಸಿಗ್ತಿಲ್ಲ. ಕನಿಷ್ಠ ವೇತನ, ಸಂಬಳ ಸಿಗದೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12 ಸಾವಿರ ಸಂಬಳವನ್ನು ಯಾಕೆ DBT ಮೂಲಕ ಕೊಡಲು ಆಗ್ತಿಲ್ಲ. ಅವರ ಸಂಬಳ DBT ಮಾಡಬೇಕು ಮತ್ತು ಕನಿಷ್ಠ ವೇತನ ಕೊಡಬೇಕು. ಪಂಚಾಯಿತಿ ಗ್ರಂಥಾಲಯದಲ್ಲಿ ಬುಕ್ ಖರೀದಿ ಆಗಿಲ್ಲ. ಬುಕ್ ಖರೀದಿ ಮಾಡಿ ಅಂತ ಒತ್ತಾಯ ಮಾಡಿದ್ರು. ಇದನ್ನೂ ಓದಿ: ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಡಿಸಿಗಳಿಗೆ ಸೂಚನೆ: ಶಿವರಾಜ್ ತಂಗಡಗಿ
ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಬದಲಾಗಿ ಸಚಿವ ಸಂತೋಷ್ ಲಾಡ್ (Santosh Lad) ಉತ್ತರ ನೀಡಿ, ಸದ್ಯ 36 ಕೋಟಿ ಸಂಬಳದ ಹಣ ಬಾಕಿ ಇದೆ. ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಆದಷ್ಟೂ ಬೇಗ ಸಂಬಳ ಕೊಡ್ತೀವಿ. ಮುಂದೆ DBT ಮೂಲಕ ಸಂಬಳ ಕೊಡಲು ಸಚಿವರ ಗಮನಕ್ಕೆ ತರುತ್ತೇನೆ. ಆತ್ಮಹತ್ಯೆ ಕೇಸ್ ನಲ್ಲಿ PDO ಅಮಾನತು ಮಾಡಲಾಗಿದೆ ಅಂತ ತಿಳಿಸಿದರು. ಇದನ್ನೂ ಓದಿ:ಡಿಕೆಶಿಯನ್ನ ಬಿಜೆಪಿಗೆ ಸೆಳೆಯುವ ಪ್ರಯತ್ನ ದೆಹಲಿಯಲ್ಲಿ ನಡೆದಿತ್ತು – ಯತ್ನಾಳ್ ಹೊಸ ಬಾಂಬ್


