ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ (Prashant Neel)ಕಾಂಬಿನೇಷನ್ ನ ಸಲಾರ್ (Salaar) ಸಿನಿಮಾ ನಿನ್ನೆಯಷ್ಟೇ ವಿಶ್ವದಾದ್ಯಂತ ರಿಲೀಸ್ ಆಗಿದೆ. ಜೊತೆ ಶಾರುಖ್ ಖಾನ್ ನಟನೆ ಡಂಕಿ ಕೂಡ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಹಾಗಾಗಿ ಈ ಎರಡೂ ಚಿತ್ರಗಳ ಬಾಕ್ಸ್ ಆಫೀಸ್ (Box Office) ಕಲೆಕ್ಷನ್ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ಕುತೂಹಲವಿತ್ತು. ಇದೀಗ ಸಲಾರ್ ಅಧಿಕೃತ ಎಕ್ಸ್ ಖಾತೆಯಲ್ಲಿ ಒಂದು ದಿನದ ವಿಶ್ವದ ಗಳಿಕೆಯನ್ನು ಪೋಸ್ಟ್ ಮಾಡಲಾಗಿದೆ. ಮೊದಲ ದಿನ ಸಲಾರ್ ಚಿತ್ರ 178.7 ಕೋಟಿ ಗಳಿಸಿದೆ ಎಂದು ಘೋಷಿಸಿದೆ.
Advertisement
ವಿಶ್ವದ್ದು 178.7 ಕೋಟಿ ರೂಪಾಯಿ ಗಳಿಕೆಯಾದರೆ, ಇಂಡಿಯನ್ ಬಾಕ್ಸ್ ಆಫೀಸಿನಲ್ಲಿ ಅಂದಾಜು 95 ಕೋಟಿ ರೂಪಾಯಿ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಡಂಕಿಗೆ ಹೋಲಿಸಿದರೆ, ಮೊದಲ ದಿನದ ಬಾಕ್ಸ್ ಆಫೀಸ್ ಗಳಿಗೆ ಸಲಾರದ್ದೇ ಹೆಚ್ಚಿದೆ. ಮತ್ತೆ ದಕ್ಷಿಣ ಭಾರತದ ಸಿನಿಮಾವೊಂದು ಬಾಲಿವುಡ್ ಚಿತ್ರಕ್ಕೆ ಸೆಡ್ಡು ಹೊಡೆದು, ಬಾಕ್ಸ್ ಆಫೀಸಿನಲ್ಲಿ ಮುನ್ನುಗ್ಗುತ್ತಿದೆ.
Advertisement
Advertisement
ತಮ್ಮ ನೆಚ್ಚಿನ ನಟನ ಸಿನಿಮಾಗೆ ಭಾರೀ ಮೊತ್ತ ಕೊಟ್ಟು ಟಿಕೆಟ್ ಖರೀದಿಸಿದ್ದರು ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ (Rajamouli). ಬಾಹುಬಲಿ ಸಿನಿಮಾದಲ್ಲಿ ನಟಿಸಿದ್ದ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಟಕೆಟ್ ಅನ್ನು ಬರೋಬ್ಬರಿ ಹತ್ತು ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದರಂತೆ ರಾಜಮೌಳಿ. ಬಿಡುಗಡೆ ದಿನ ಹೈದರಾಬಾದ್ ನ ಸಂಧ್ಯಾ ಚಿತ್ರಮಂದಿರದಲ್ಲಿ ಸಲಾರ್ ಸಿನಿಮಾ ವೀಕ್ಷಿಸಿದ್ದಾರೆ.
Advertisement
ಕೆಜಿಎಫ್ (KGF) ಚಿತ್ರಕ್ಕಿಂತ ಐದು ಪಟ್ಟು ದೊಡ್ಡದು ಸಲಾರ್. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇನ್ನೊಂದು ಫಿಲ್ಮ್ ಸಿಟಿ ನಿರ್ಮಿಸಿದಂತಾಗಿತ್ತು ನಾವು ಹಾಕಿದ ಸೆಟ್ಟುಗಳು. ನೂರು ಎಕರೆ ಪ್ರದೇಶದಲ್ಲಿ ಸೆಟ್ ನಿರ್ಮಿಸಲಾಗಿತ್ತು. ಇಂಡಿಯಾದ ಇತಿಹಾಸದಲ್ಲಿ ಇಷ್ಟು ದೊಡ್ಡ ಸೆಟ್ ನಿರ್ಮಿಸಿದ್ದು ಇಲ್ಲವೇ ಇಲ್ಲ. ಕೆಜಿಎಫ್ ಶೂಟ್ ಮಾಡಿದ್ದ ಸ್ಥಳದಲ್ಲಿ ಸಲಾರ್ ಶೂಟಿಂಗ್ ಮಾಡಿಲ್ಲ. ಅದು ಸುಳ್ಳು. ಶಿವಕುಮಾರ್ ಕಲಾ ನಿರ್ದೇಶನದಲ್ಲಿ ಹಿಂದೆಂದೂ ನೋಡದ ಕಾಣದ ಲೋಕ ತೋರಿಸಿದ್ದೇವೆ. ಕೋಟಿ ಕೋಟಿ ಸುರಿಯಲಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಲಾರ್ ಅದ್ಭುತ ಅಪರೂಪದ ಜಗತ್ತು ತೋರಿಸಲಿದೆ.