ಪ್ರಶಾಂತ್ ನೀಲ್-ಪ್ರಭಾಸ್ (Prabhas) ಕಾಂಬಿನೇಷನ್ ಸಿನಿಮಾ ‘ಸಲಾರ್’ (Salaar) ಸಕ್ಸಸ್ ಬೆನ್ನಲ್ಲೇ ಪ್ರಭಾಸ್ & ಟೀಮ್ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಪ್ರಭಾಸ್, ಶ್ರುತಿ ಹಾಸನ್ (Shruti Haasan) ನಟನೆಯ ಸಲಾರ್ ಸಿನಿಮಾ ಕಳೆದ ಡಿಸೆಂಬರ್ 22ರಂದು ರಿಲೀಸ್ ಆಗಿತ್ತು. ಸಾಲು ಸಾಲು ಸೋಲುಗಳನ್ನೇ ಕಂಡ ಪ್ರಭಾಸ್‌ಗೆ ‘ಸಲಾರ್’ (Salaar) ಚಿತ್ರದ ಮೂಲಕ ಸಕ್ಸಸ್ ರುಚಿ ಸಿಕ್ಕಂತೆ ಆಗಿದೆ. ಇದೇ ಸಂಭ್ರಮದಲ್ಲಿ ಚಿತ್ರತಂಡ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದೆ.
ಪ್ರಭಾಸ್, ಪ್ರಶಾಂತ್ ನೀಲ್, ಹೊಂಬಾಳೆ ಸಂಸ್ಥೆಯ ರೂವಾರಿ ವಿಜಯ್ ಕಿರಂಗದೂರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ತುಕಾಲಿ ಕಳಪೆ, ಜೈಲಿಗಟ್ಟಿದ ಮನೆಮಂದಿ
ಅಂದಹಾಗೆ ‘ಸಲಾರ್’ ಸಿನಿಮಾ ಒಟ್ಟು 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡುತ್ತಿದೆ.