ಇಂದಿನಿಂದ ಸಾವಿರಾರು ಚಿತ್ರಮಂದಿರಗಳಲ್ಲಿ ‘ಸಲಾರ್’ ಅಬ್ಬರ

Public TV
1 Min Read
Salaar 1

ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಲಾರ್ ಸಿನಿಮಾ ಇಂದಿನಿಂದ ಸಾವಿರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ (release) ಕಾಣುತ್ತಿದೆ. ಬೆಳಗ್ಗೆಯಿಂದಲೇ ಸಲಾರ್ ಅಭಿಮಾನಿಗಳು ಚಿತ್ರವನ್ನು ನೋಡಲು ಸಾಲುಗಟ್ಟಿ ನಿಂತಿದ್ದಾರೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಸಲಾರ್ ಸಿನಿಮಾ ರಿಲೀಸ್ ಆಗಿದೆ.

Salaar Part 1

ಲಾರ್ (Salaar) ಸಿನಿಮಾದಲ್ಲಿ ಯಶ್ (Yash) ನಟಿಸಿದ್ದಾರೆ ಎಂದೆಲ್ಲ ಸುದ್ದಿ ಹರಿಬಿಡಲಾಗಿತ್ತು. ಕೆಜಿಎಫ್ ಸಿನಿಮಾದ ಪಾತ್ರವೊಂದು ಸಲಾರ್ ನಲ್ಲಿ ಎಂಟ್ರಿ ಕೊಡಲಾಗಿದೆ. ಅದು ಯಶ್ ಪಾತ್ರವಾಗಿದೆ ಎಂದು ಹೇಳಲಾಗಿತ್ತು. ಅದಕ್ಕೀಗ ಸ್ಪಷ್ಟನೆ ನೀಡಿದ್ದಾರೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ (Prashant Neel). ಸಲಾರ್ ಸಿನಿಮಾದಲ್ಲಿ ಯಶ್ ಇದ್ದಾರೆ ಅಂತ ಹೇಳೋಕೆ ನನಗೇಕೆ ಅಳುಕು. ಅವರು ಇದ್ದಾರೆ ಅಂದಿದ್ದರೆ, ಅದನ್ನೂ ಪ್ರಚಾರ ಮಾಡುತ್ತಿದ್ದೆವು. ಪ್ರಚಾರಕ್ಕೆ ಅದು ಪ್ಲಸ್ ಆಗಿರೋದು. ಆದರೆ, ಈ ಸಿನಿಮಾದಲ್ಲಿ ಅವರು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Salaar 4

ಸಲಾರ್ ಸಿನಿಮಾದ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಯಶ್ ಬಗ್ಗೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೀವನ ಪರ್ಯಂತ ಯಶ್ ನನ್ನ ಜೊತೆಯಾಗಿಯೇ ಇರುತ್ತಾರೆ ಎಂದು ಹೇಳುವ ಮೂಲಕ, ಯಶ್ ಮತ್ತು ಪ್ರಶಾಂತ್ ನೀಲ್ ಮಧ್ಯ ಯಾವುದೂ ಸರಿ ಇಲ್ಲ ಎನ್ನುವುದಕ್ಕೂ ಅವರು ಉತ್ತರ ನೀಡಿದ್ದಾರೆ.

salaar 3

ಇಂದು ವಿಶ್ವದಾದ್ಯಂತ ಸಲಾರ್ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆ ಆಗುವ ಒಂದು ದಿನ ಮುನ್ನ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಮಾಡಿದ ಹೊಂಬಾಳೆ ಫಿಲ್ಮ್ಸ್. ಪ್ರತಿಕಥೆಯ ಹೆಸರಿನಲ್ಲಿ ರಿಲೀಸ್ ಆಗಿರುವ ಹಾಡಿನಲ್ಲಿ ಶಾಂತಿಯ ಮಂತ್ರವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾಯಕನ ತಾಯಿಯು ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಗನಿಗೆ ಕ್ಷಮೆಯಿಂದ ಗೆಲ್ಲುವ ಮಾತುಗಳನ್ನು ಹೇಳಲಿಸಲಾಗಿದೆ.

 

‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್‍ನಡಿ ವಿಜಯ್‍ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Share This Article