‘ಸಲಾರ್’ ತೆರೆಗೆ ಅಬ್ಬರಿಸಲು ದಿನಗಣನೆ- ಪ್ರಭಾಸ್ ಸಿನಿಮಾದ ಬಿಗ್ ಅಪ್‌ಡೇಟ್

Public TV
2 Min Read
Prashanth neel and prabhas

ಲಾರ್ (Salaar) ಬಿಡುಗಡೆಗೆ ಕ್ಷಣ ಗಣನೆ ಆರಂಭವಾಗಿದೆ. ಮುಂದಿನ ಸೆಪ್ಟೆಂಬರ್‌ 28ಕ್ಕೆ ಪ್ರಭಾಸ್- ಪ್ರಶಾಂತ್ ನೀಲ್ (Prashanth Neel) ವಿಶ್ವಾದ್ಯಂತ ಮೆರವಣಿಗೆ ಹೊರಡಲಿದ್ದಾರೆ. ಅದಕ್ಕೂ ಮುನ್ನ ಭರ್ಜರಿ ಪ್ರಚಾರ ಮಾಡಲು ತಂಡ ಸಜ್ಜಾಗಿದೆ. ಹೇಗಿರಲಿದೆ ವಿಶ್ವದ ತುಂಬಾ ಪಬ್ಲಿಸಿಟಿ? ಇಲ್ಲಿದೆ ಮಾಹಿತಿ.

SALAAR MOVIE1 1

ಸಲಾರ್ (Salaar) ಸಿನಿಮಾದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸುಮ್ಮನೆ ನೋಡುತ್ತಿಲ್ಲ. ಎರಡೂ ಕಣ್ಣನ್ನು ಅಗಲಿಸಿ ನೋಡುತ್ತಿದ್ದಾರೆ. ಒಂದು ಕಡೆ ಪ್ರಶಾಂತ್ ನೀಲ್. ಇನ್ನೊಂದು ಕಡೆ ಪ್ರಭಾಸ್. ಎರಡೂ ದೈತ್ಯ ಪ್ರತಿಭೆಗಳು. ಕೆಜಿಎಫ್ (KGF) ಸಿನಿಮಾದಿಂದ ಪ್ರಶಾಂತ್ ನೀಲ್ ಹೊಸ ದಾಖಲೆ ಬರೆದಿದ್ದಾರೆ. ಈಗ ಸಲಾರ್‌ನಲ್ಲಿ ಇನ್ಯಾವ ಇತಿಹಾಸ ಕೆತ್ತುತ್ತಾರೆ ಎಂದು ಕಾಯುತ್ತಿದೆ ವಿಶ್ವದ ಸಿನಿಮಾ ರಂಗ. ಕೆಜಿಎಫ್‌ನಲ್ಲಿ ತೋರಿಸಿದ ಲೋಕವನ್ನು ಬಿಟ್ಟು ಇನ್ಯಾವ ಲೋಕ ತೋರಿಸುತ್ತಾರೆ? ಇನ್ಯಾವ ಸಾಹಸ ಮಾಡುತ್ತಾರೆ? ಹೇಗೆ ಪ್ರಭಾಸ್‌ಗೆ ನ್ಯೂ ಇಮೇಜ್ ಕೊಡುತ್ತಾರೆ. ಇದೆಲ್ಲ ಪ್ರಶ್ನೆಗಳು ಕಾಡುತ್ತಿವೆ. ಅದಕ್ಕೆ ಉತ್ತರ ಒಂದೂವರೆ ತಿಂಗಳಲ್ಲಿ ಸಿಗಲಿದೆ.

salaar

ಪ್ರಭಾಸ್‌ಗೂ ಈ ಸಿನಿಮಾ ಮಹಾ ಗೆಲುವನ್ನು ಕಾಣಬೇಕಿದೆ. ಕಾರಣ ಕಣ್ಣ ಮುಂದಿದೆ. ಮೂರು ಸಿನಿಮಾ ಸೋಲು ಅವರನ್ನು ಕಾಡುತ್ತಿವೆ. ಸಾಹೋ, ಆದಿಪುರುಷ್ ಹಾಗೂ ರಾಧೇಶ್ಯಾಮ್. ಮೂರೂ ಹೇಳ ಹೆಸರಿಲ್ಲದಂತೆ ಹೋದವು. ಎಲ್ಲವೂ ದೊಡ್ಡ ಬಜೆಟ್ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ. ಆದರೆ ಯಾವುವೂ ಕೈ ಹಿಡಿಯಲಿಲ್ಲ. ಹೀಗಾಗಿ ಪ್ರಭಾಸ್ ಸಲಾರ್ ಮೇಲೆ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರಶಾಂತ್ ನೀಲ್ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇದೆ. ಜೊತೆಗೆ ಹೊಂಬಾಳೆ ಸಂಸ್ಥೆ(Hombale Films) ಕೂಡ ಸಲಾರ್‌ಗಾಗಿ ಕೋಟಿ ಕೋಟಿ ಹಣವನ್ನು ಸುರಿದಿದೆ. ಈಗ ಬಂದು ನಿಂತಿದೆ ಪ್ರಚಾರದ ಕಾರ್ಯ. ಅದನ್ನು ವಿಶ್ವದ ತುಂಬಾ ಮಾಡಬೇಕಿದೆ. ಎಲ್ಲಾ ಪ್ಲ್ಯಾನ್ ಈಗಾಗಲೇ ಸಿದ್ಧವಾಗಿದೆ. ಅಖಾಡಕ್ಕೆ ಇಳಿಯಬೇಕಷ್ಟೆ.

SALAAR Prashanth Neel 2

ಈಗಾಗಲೇ ಒಂದು ಟೀಸರ್ ಬಿಟ್ಟಿದ್ದಾರೆ. ಅದು ಹಲ್‌ಚಲ್ ಎಬ್ಬಿಸಿದ್ದು ಎಲ್ಲರಿಗೂ ಗೊತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ. ಬಹುಶಃ ಮುಂದಿನ ತಿಂಗಳು ಆರಂಭದಲ್ಲಿ ಟ್ರೈಲರ್ ಹೊರ ಬಿಡುವ ನಿರೀಕ್ಷೆ ಇದೆ. ಅದಕ್ಕಾಗಿ ನೀಲ್ ಸಾಕಷ್ಟ ತಲೆ ಕೆಡಿಸಿಕೊಂಡಿದ್ದಾರೆ. ಯಾವುದನ್ನು ಎಷ್ಟು ತೋರಿಸಬೇಕೆಂದು ಪಕ್ಕಾ ಪ್ಲ್ಯಾನ್ ಮಾಡಿದ್ದಾರೆ. ಅದರ ಜೊತೆಗೆ ಶೂಟಿಂಗ್ ಸಮಯದ ಅಂದರೆ ಬಿಹೈಂಡ್ ದಿ ಸ್ಕ್ರೀನ್ ಅಂತಾರಲ್ಲ. ಅದರ ಬಗ್ಗೆ ವಿಡಿಯೋ ಬಿಡುವ ಸಾಧ್ಯತೆ ಇದೆ. ಜೊತೆಗೆ ಹಾಡುಗಳನ್ನು ಒಂದೊಂದಾಗಿ ಜನರ ಮುಂದೆ ಇಡುತ್ತಾರೆ. ಹೀಗೆ ಸಿನಿಮಾ ಬಿಡುಗಡೆ ಹತ್ತಿರ ಬಂದಂತೆ ಕ್ರೇಜ್ ಹುಟ್ಟುವಂತೆ ಮಾಡುತ್ತಾರೆ. ಇದನ್ನೂ ಓದಿ:ಉಪೇಂದ್ರ ವಿರುದ್ಧ ದಾಖಲಾಗಿದ್ದ ಕೇಸ್ ವರ್ಗಾವಣೆ- ಹೈಕೋರ್ಟ್ ಆದೇಶ ಪ್ರತಿ ಪರಿಶೀಲಿಸಿ ತನಿಖೆ

ಇದೇ ಮೊದಲ ಬಾರಿಗೆ ಹಾಲಿವುಡ್‌ನಲ್ಲಿ (Hollywood) ಅದೂ ಇಂಗ್ಲಿಷ್ ವರ್ಶನ್‌ನಲ್ಲೇ ಸಲಾರ್ ಬಿಡುಗಡೆಯಾಗಲಿದೆ. ಆದರೆ ಅದು ಸೆಪ್ಟಂಬರ್ ಇಪ್ಪತ್ತೆಂಟಕ್ಕೆ ಬರುವುದಿಲ್ಲ. ಬಹುಶಃ ಅಕ್ಟೋಬರ್ ಎರಡನೇ ವಾರದಲ್ಲಿ ಇಂಗ್ಲಿಷ್ ಡಬ್ಬಿಂಗ್ ವರ್ಷನ್ ನೋಡಲು ಸಿಗಬಹುದು. ಆ ಮೂಲಕ ಪ್ರಭಾಸ್ ಗ್ಲೋಬಲ್ ಸ್ಟಾರ್ ಆಗುವ ಸಾಧ್ಯತೆ ಇದೆ. ಅಲ್ಲಿಯ ಜನರು ಇದನ್ನು ಹೇಗೆ ಸ್ವೀಕಾರ ಮಾಡುತ್ತಾರೆ ಎನ್ನುವುದರ ಮೇಲೆ ಎಲ್ಲ ನಿರ್ಧರಿತ. ಹೀಗೆ ಸಲಾರ್ ಹಬ್ಬ ಮಾಡಲು ಸಜ್ಜಾಗುತ್ತಿದೆ. ಕನ್ನಡದ ನಿರ್ಮಾಣ ಸಂಸ್ಥೆಯ ಜೊತೆ ಕನ್ನಡದ ನಿರ್ದೇಶಕ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ಮೆರವಣಿಗೆ ಹೊರಡಲು ತಯಾರಾಗಿದ್ದಾರೆ. ಜನರು ಹರಸಬೇಕಷ್ಟೆ.

Share This Article