ಇದು ಇಲ್ಲಿಗೇ ನಿಲ್ಲುವ ಹಾಗೆ ಕಾಣುತ್ತಿಲ್ಲ. ಯಾವಾಗ ಸಲಾರ್- ಡಂಕಿ (Dunki) ಒಂದೇ ದಿನ ಅಖಾಡಕ್ಕೆ ಇಳಿಯಲಿವೆ ಎನ್ನುವುದು ಗೊತ್ತಾಯಿತೊ, ಅಲ್ಲಿಂದ ನಾನಾ ನೀನಾ ಎನ್ನುವ ಯುದ್ಧ ಶುರುವಾಗಿದೆ. ಸಲಾರ್ ಮುಂದಕ್ಕೆ ಹೋಗುತ್ತಾ ಅಥವಾ ಡಂಕಿ ಪೋಸ್ಟ್ ಪೋನ್ ಆಗುತ್ತಾ? ಇಬ್ಬರು ಸ್ಟಾರ್ ನಟನರ ಫ್ಯಾನ್ಸ್ ಕೆಂಡ ಕಾರುತ್ತಿದ್ದಾರೆ. ಇದೀಗ ಮತ್ತೆ ಸಲಾರ್- ಡಂಕಿ. ಎರಡರಲ್ಲಿ ಒಂದು ಸಿನಿಮಾ ಮುಂದಿನ ವರ್ಷಕ್ಕೆ ಹೋಗಲಿವೆ ಎನ್ನುವ ಮಾತು ಕೇಳುತ್ತಿದೆ. ಹಾಗಿದ್ದರೆ ಇಬ್ಬರಲ್ಲಿ ಯಾರು ಗಂಟು ಮೂಟೆ ಕಟ್ಟೋರು? ಇಲ್ಲಿದೆ ಮಾಹಿತಿ.
Advertisement
ಯುದ್ಧಕ್ಕೆ ರಣರಂಗ ಸಜ್ಜಾಗಿದೆ. ಒಂದು ಕಡೆ ಸಲಾರ್ (Salaar) ಇನ್ನೊಂದು ಕಡೆ ಡಂಕಿ. ಒಬ್ಬರು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್. ಮಗದೊಂದು ಕಡೆ ಬಾದ್ಶಾ ಶಾರುಖ್ ಖಾನ್. ಪ್ರಭಾಸ್ ಕೆಲವೇ ವರ್ಷಗಳ ಹಿಂದೆ ಈ ಪಟ್ಟ ಅಲಂಕರಿಸಿದ್ದಾರೆ. ಶಾರುಖ್ ಖಾನ್ ಮೂವತ್ತು ವರ್ಷಗಳಿಂದ ಆ ಸಿಂಹಾಸನದಲ್ಲಿ ರಾರಾಜಿಸುತ್ತಿದ್ದಾರೆ. ಹೊಸ ಹುಡುಗನಾ ಹಳೇ ಹುಲಿಯಾ? ಇಬ್ಬರಲ್ಲಿ ಯಾರು ಗೆಲ್ಲೋರು? ಪ್ರಶ್ನೆ ಎದ್ದಿದೆ. ಕಾರಣ ಪ್ರಭಾಸ್ (Prabhas) ಮೂರು ಸೋಲುಂಡು ಗೆಲ್ಲಲು ತುದಿಗಾಲಲ್ಲಿ ನಿಂತಿದ್ದಾರೆ. ಶಾರುಖ್ (Sharukh Khan) ಒಂದೇ ವರ್ಷದಲ್ಲಿ ಎರಡು ಸೂಪರ್ ಹಿಟ್ ಕೊಟ್ಟಿದ್ದಾರೆ. ಪ್ರಶ್ನೆ ಉಳಿದಿರುವುದು ಒಂದೇ. ಪ್ರಭಾಸ್ ಯುದ್ಧ ಗೆಲ್ಲುತ್ತಾರಾ, ಶಾರುಖ್ ಅಖಾಡ ಕಬ್ಜ ಮಾಡಿಕೊಳ್ಳುತ್ತಾರಾ?
Advertisement
Advertisement
ನಿಜ ಹೇಳಬೇಕೆಂದರೆ ಈ ಪ್ರಶ್ನೆ ಹುಟ್ಟುತ್ತಿರಲಿಲ್ಲ. ಸಲಾರ್ ಈಗಾಗಲೇ ಬಂದು ಹೋಗಿರಬೇಕಿತ್ತು. ಡಂಕಿ ಬರುವುದು ಬಾಕಿ ಇರಬೇಕಿತ್ತು. ಆದರೆ ಟೈಮು ಯಾರಪ್ಪನ ಸ್ವತ್ತು? ಏಕಾಏಕಿ ಸಲಾರ್ ಹಾಗೂ ಡಂಕಿ ಒಂದೇ ದಿನ ಹಾಜರಿ ಹಾಕುವುದಾಗಿ ಘೋಷಿಸಿದವು. ಅಫ್ಕೋರ್ಸ್ ಡಂಕಿ ಮೊದಲೇ ಡೇಟ್ ನಿಗದಿ ಪಡಿಸಿತ್ತು. ಡಿಸೆಂಬರ್ ಬರೋದಾಗಿ ನಿಕ್ಕಿಯಾಗಿತ್ತು. ಈ ಹೊತ್ತಲ್ಲಿ ಸಲಾರ್ ಆಕಸ್ಮಿಕವಾಗಿ ಅಂದೇ ಬರಬೇಕಾಯಿತು. ಈಗ ಒಂದೇ ದಿನ ಎರಡು ಬಿಗ್ ಬಜೆಟ್ ಸಿನಿಮಾ ಬರಲು ರೆಡಿಯಾಗುತ್ತಿದೆ. ಇಬ್ಬರಲ್ಲಿ ಯಾರಾದರೂ ಒಬ್ಬರು ಮುಂದಕ್ಕೆ ಹೋಗುತ್ತಾರಾ? ಗೊಂದಲ ಮುಂದುವರೆದಿದೆ. ಇದನ್ನೂ ಓದಿ:ಮಾನವೀಯತೆ ಮರೆತ ಭಾಗ್ಯಶ್ರೀಗೆ ಕಿವಿ ಹಿಂಡಿದ ಸುದೀಪ್
Advertisement
ಸಲಾರ್ ರಿಲೀಸ್ ಡೇಟ್ ಹೊರಬಿದ್ದಾಗ, ಕಿಂಗ್ ಖಾನ್ ಹೇಳಿದ್ದು ಒಂದೇ ಮಾತು. ಈ ಗಣರಾಜ್ಯೋತ್ಸವಕ್ಕೆ ಪಠಾಣ್ ಬಂತು. ಸಾವಿರ ಕೋಟಿ ಬಾಚಿತು. ಕೃಷ್ಣ ಜನ್ಮಾಷ್ಟಮಿಗೆ ಜವಾನ್ ಹಾಜರಾಯಿತು. ಅದೂ ಸಾವಿರ ಕೋಟಿ ಗಳಿಸಿತು. ಈಗ ಕ್ರಿಸ್ಮಸ್ಗೆ ಡಂಕಿ ಬರುತ್ತಿದೆ. ಜನರು ನನ್ನನ್ನು ನೋಡಲು ಇಷ್ಟ ಪಟ್ಟಿದ್ದಾರೆ. ಖಂಡಿತ ನಾವು ಅದೇ ದಿನ ಬರಲಿದ್ದೇವೆ. ಶಾರುಖ್ ಹೇಳಿದ್ದಕ್ಕೆ ಒಂದೇ ಅರ್ಥ. ನಾವು ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಈ ಮಾತು ಕೇಳಿ ಶಾರುಖ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದೇ ಹೊತ್ತಿಗೆ ಪ್ರಭಾಸ್ ಫ್ಯಾನ್ಸ್ ನಾವೂ ಮುಂದೆ ಹೋಗಲ್ಲ ಅಂತಿದ್ದಾರೆ.
ಈ ನಡುವೆ ಇನ್ನೊಂದು ಖಬರ್ ಎದ್ದಿದೆ. ಅದೇ ಸಲಾರ್ (Salaar) ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಮಾತು. ಈಗಾಗಲೇ ಎರಡು ಬಾರಿ ಸಲಾರ್ ಪೋಸ್ಟ್ ಪೋನ್ ಆಗಿದೆ. ಇದಕ್ಕೆ ನಿರ್ಮಾಣ ಸಂಸ್ಥೆ ನೀಡಿರುವ ಕಾರಣ ಒಂದೇ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇದೆ. ಇನ್ನಷ್ಟು ಅದ್ಭುತವಾಗಿ ಸಿನಿಮಾ ನೀಡಲು ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಹೀಗೆ ಹೇಳಿದೆ. ಈಗ ಇನ್ನೊಮ್ಮೆ ಸಲಾರ್ (Salaar) ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಸಾಧ್ಯತೆ ಎನ್ನುವ ಮಾತು ಕೇಳುತ್ತಿದೆ. ಇದು ಅಧಿಕೃತವಲ್ಲ. ಆದರೆ ಸಿನಿಮಾ ವಲಯದಲ್ಲಿ ಇದೇ ಕಿಡಿ ಹೊತ್ತಿಸಿದೆ. ಎಲ್ಲದಕ್ಕೂ ಅಂತಿಮ ಮುದ್ರೆ ಬೀಳಬೇಕಿದೆ.