Connect with us

Latest

ಈಗ ಅಧಿಕೃತ: ಡಿ.16ಕ್ಕೆ ಸಪ್ತಪದಿ ತುಳಿಯಲಿದ್ದಾರೆ ಸೈನಾ, ಕಶ್ಯಪ್

Published

on

ಹೈದರಾಬಾದ್: ಭಾರತ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಪಾರುಪಲ್ಲಿ ಕಶ್ಯಪ್ ಹಾಗೂ ಸೈನಾ ಸೆಹ್ವಾಲ್ ಮದುವೆ ಡಿಸೆಂಬರ್ 16 ರಂದು ನಡೆಯಲಿದ್ದು, ಈ ಕುರಿತು ಸ್ವತಃ ಸೈನಾ ನೆಹ್ವಾಲ್ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿ ಖಚಿತ ಪಡಿಸಿದ್ದಾರೆ.

ಡಿ.20 ಬಳಿಕ ಬ್ಯಾಡಿಂಟನ್ ಪ್ರೀಮಿಯರ್ ಲೀಗ್ ಹಾಗೂ ಟೋಕಿಯೋ ಗೇಮ್ಸ್ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿರುವ ಕಾರಣ ಡಿ.16 ರಂದೇ ನಮ್ಮ ಮದುವೆ ನಿಶ್ಚಯ ಮಾಡಲಾಗಿದೆ. ಈ ಸಮಯ ಬಿಟ್ಟರೆ ನಮಗೆ ಬೇರೆ ಉತ್ತಮ ಅವಕಾಶವಿಲ್ಲ ಎಂದು ಸೈನಾ ತಿಳಿಸಿದ್ದಾರೆ.

ಕಳೆದ 10 ವರ್ಷಗಳಿಂದ ಇಬ್ಬರ ನಡುವೆ ಪರಿಚಯವಿದ್ದು, ಒಬ್ಬರಿಗೆ ಒಬ್ಬರೂ ಚೆನ್ನಾಗಿ ಆರ್ಥ ಮಾಡಿಕೊಂಡಿದ್ದೇವೆ. 2007-08 ರ ಬಳಿಕ ನಾವಿಬ್ಬರೂ ಒಟ್ಟಿಗೆ ಬ್ಯಾಡ್ಮಿಂಟನ್ ಟೂರ್ನಿ ಜರ್ನಿ ಆರಂಭಿಸಿದ್ದು, ಹಲವು ಟೂರ್ನಿಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದೇವೆ. ತರಬೇತಿ ಪಡೆದಿದ್ದೇವೆ. ಬೇರೊಬ್ಬರೊಂದಿಗೆ ಉತ್ತಮ ಬಾಂಧವ್ಯ ರೂಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಇಬ್ಬರು ಬಹುಬೇಗ ಆತ್ಮೀಯಾರಗಿದ್ದೇವೆ ಎಂದು ಹೇಳಿದ್ದಾರೆ.

ಸೈನಾ, ಕಶ್ಯಪ್ ಮದುವೆ ಕುರಿತು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ಈ ಕುರಿತು ಇಬ್ಬರು ಅಧಿಕೃತ ಹೇಳಿಕೆಯನ್ನು ಎಲ್ಲೂ ನೀಡಿರಲಿಲ್ಲ. ಸೈನಾ ಹಾಗೂ ಕಶ್ಯಪ್ ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್ ಅವರ ಗರಡಿಯಲ್ಲಿ ಪಳಗಿದ ಆಟಗಾರರಾಗಿದ್ದಾರೆ. ಉಳಿದಂತೆ ಕುಟುಂಬಗಳ ಹಿರಿಯರು ಈಗಾಗಲೇ ಮದುವೆ ಕುರಿತು ಮಾತುಕತೆ ನಡೆಸಿದ್ದಾರೆ. ಅಲ್ಲದೇ ವಿವಾಹ ಕಾರ್ಯಕ್ರಮದ ಸಿದ್ಧತೆಗಳನ್ನು ಆರಂಭಿಸಿದ್ದು, ಮದುವೆಯ ಸಮಾರಂಭಕ್ಕೆ ಕುಟುಂಬದ ಸದಸ್ಯರು ಹಾಗೂ ಆಪ್ತ ವಲಯದ ಕೆಲವೇ ಮಂದಿಗೆ ಆಹ್ವಾನ ನೀಡಲಾಗುತ್ತದೆ ಎನ್ನಲಾಗಿದೆ.

28 ವರ್ಷದ ಸೈನಾ ನೆಹ್ವಾಲ್ ಹಾಗೂ 32 ವರ್ಷದ ಕಶ್ಯಪ್ ವಿಶ್ವ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಡಿ.20 ರಿಂದ ಆರಂಭವಾಗಲಿರುವ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ನಲ್ಲಿ ಭಾರತದ ಪಿವಿ ಸಿಂಧೂ ಸೇರಿದಂತೆ ಹಲವು ಆಟಗಾರರು ಭಾಗವಹಿಸಲಿದ್ದಾರೆ. ಡಿ.22 ರಿಂದ ಜನವರಿ 13ರ ವರೆಗೂ ಟೂರ್ನಿಯ ಪಂದ್ಯಗಳು ದೆಹಲಿಯಲ್ಲಿ ನಡೆಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

View this post on Instagram

☺️☺️ @parupallikashyap

A post shared by SAINA NEHWAL (@nehwalsaina) on

Click to comment

Leave a Reply

Your email address will not be published. Required fields are marked *