– ಮನೆಯಿಂದ ಹೊರಬರಲಾರದೇ ಜನರ ಪರದಾಟ
ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಗೆ ಮತ್ತೆ ಸಾಯಿ ಲೇಔಟ್(Sai Layout) ಸಂಪೂರ್ಣ ಜಲಾವೃತಗೊಂಡಿದ್ದು, ಮನೆಯಿಂದ ಹೊರಬರಲಾಗದೇ ಜನ ಪರದಾಡುತ್ತಿದ್ದಾರೆ.
ಹೊರಮಾವು(Horamavu) ಸಮೀಪದ ವಡ್ಡರಪಾಳ್ಯದಲ್ಲಿ ಇನ್ನೂ ನೀರು ನಿಂತಿದ್ದು, ಹೊರಮಾವು ಅಗರ ಮುಖ್ಯ ರಸ್ತೆಯ ತುಂಬೆಲ್ಲಾ ನೀರು ತುಂಬಿದೆ. ಈ ಮಳೆ ನೀರಿನ ಮಧ್ಯೆ ಖಾಸಗಿ ಬಸ್ಸೊಂದು ರಸ್ತೆಯಲ್ಲೇ ಕೆಟ್ಟು ನಿಂತಿದೆ. ಇದನ್ನೂ ಓದಿ: ಮಾನ್ಯತಾ ಟೆಕ್ ಪಾರ್ಕ್ ಜಲಾವೃತ – ಪರ್ಯಾಯ ಮಾರ್ಗ ಬಳಸುವಂತೆ ಮನವಿ
ವಡ್ಡರಪಾಳ್ಯದಲ್ಲಿ ರಾಜಾಕಾಲುವೆಯೂ ಭರ್ತಿಯಾಗಿ ರಸ್ತೆ ತುಂಬೆಲ್ಲಾ ನೀರು ನಿಂತಿದೆ. ಮುಂಜಾನೆ 4 ಗಂಟೆ ಸುಮಾರಿಗೆ ರಾಜಾಕಾಲುವೆ ಒಡೆದು ನೀರು ರಸ್ತೆಗೆ ಹರಿದಿದೆ. ಬಡಾವಣೆ ಮಧ್ಯೆ ಇರುವ ಖಾಲಿ ಜಮೀನು ಪೂರ್ತಿ ಮಳೆ ನೀರು ತುಂಬಿಕೊಂಡಿದೆ. ಈ ಮಳೆ ನೀರು ಖಾಲಿ ಜಮೀನಿನಿಂದ ರಸ್ತೆ ಹಾಗೂ ಬಡಾವಣೆ ಒಳಗೆಲ್ಲಾ ಹರಿದು ಬರುತ್ತಿದೆ. ಇದನ್ನೂ ಓದಿ: ದರ್ಶನ್ ದಾಂಪತ್ಯಕ್ಕೆ 22 ವರ್ಷ- ಹೊಸ ಪೋಸ್ಟ್ ಹಂಚಿಕೊಂಡ ವಿಜಯಲಕ್ಷ್ಮಿ
ವಡ್ಡರಪಾಳ್ಯವು(Vaddarapalya) ಮಳೆ ನೀರಿಗೆ ದ್ವೀಪದಂತಾಗಿದೆ. 25ಕ್ಕೂ ಹೆಚ್ಚು ಕ್ರಾಸ್‌ಗಳಲ್ಲಿ ನೀರು ನಿಂತಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ಎರಡು ಬೋಟ್‌ಗಳ ಮೂಲಕ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಏಕಾಏಕಿ ನೀರು ಹೆಚ್ಚಾಗಿ, ರಸ್ತೆ ಹಾಗೂ ಮನೆಗಳಿಗೆ ನುಗ್ಗಿದೆ. ನೀರಿನ ಜೊತೆಗೆ ಹಾವುಗಳು ಕೆಲ ಮನೆಗಳಿಗೆ ನುಗ್ಗಿದ್ದು, ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಪರ ಬೇಹುಗಾರಿಕೆ – ಉತ್ತರ ಪ್ರದೇಶದ ಉದ್ಯಮಿ ಬಂಧನ
ಇನ್ನು ಉದ್ಯೋಗಿಗಳು ಕೆಲಸಕ್ಕೆ ಹೋಗಲಾಗದೇ ಮನೆಗಳಲ್ಲೇ ಬಂಧಿಯಾಗಿದ್ದಾರೆ. ಇನ್ನು 30ಕ್ಕೂ ಹೆಚ್ಚು ಜನ ಕಾರ್ಮಿಕರೂ ಕೆಲಸಕ್ಕೆ ತೆರಳಲಾಗದೇ ಪರದಾಡುತ್ತಿದ್ದಾರೆ.