ಪೊಲೀಸ್ ಡೈರಿ, ಅಗ್ನಿ ಸಿನಿಮಾಗಳಲ್ಲಿ ಪೊಲೀಸ್ ಸೂಪರ್ ಕಾಪ್ ಆಗಿ ಪವರ್ ಫುಲ್ ಡೈಲಾಗ್ ಮೂಲಕ ಖಾಕಿಗೆ ಹೊಸ ಖದರ್ ತಂದುಕೊಟ್ಟಿದ್ದ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವ್ರನ್ನ ಮರೆಯೋಕಾಗುತ್ತಾ..? ತಮ್ಮ ಚಿತ್ರಗಳಲ್ಲಿ ಖಾಕಿಗೆ ಹೊಸ ಖದರ್ ತಂದುಕೊಟ್ಟಿದ್ದ ಸಾಯಿ ಕುಮಾರ್ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್‍ನಿಂದಲೇ ಹೊಸ ಟ್ರೆಂಡ್ ಸೃಷ್ಟಿಸಿದ್ರು. ಈಗಲೂ ಆ ಡೈಲಾಗ್‍ಗಳು ಫೇಮಸ್ ಆಗಿವೆ.
ಸಾಯಿ ಕುಮಾರ್ ರನ್ನು ಮತ್ತೆ ಖಾಕಿಯಲ್ಲಿ ನೋಡಲು, ಡೈಲಾಗ್ ಕಣ್ತುಂಬಿಕೊಳ್ಳಲು ಸಿನಿ ರಸಿಕರು ವರ್ಷಗಳಿಂದ ಕಾಯ್ತಾಯಿದ್ರು. ಈಗ ಆ ಸಮಯ ಬಂದಿದೆ. ಅದೇ ಖದರ್, ಅಷ್ಟೇ ಪವರ್ ಫುಲ್ ಡೈಲಾಗ್, ಅದೇ ಮ್ಯಾನರಿಸಂ ಮೂಲಕ ಮತ್ತೆ ಡೈಲಾಗ್ ಕಿಂಗ್ ಪೊಲೀಸ್ ಸೂಪರ್ ಕಾಪ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ. ಆ ಚಿತ್ರದ ಹೆಸರೇ ಜಗ್ಗಿ ಜಗನ್ನಾಥ್. ದುಷ್ಟರ ಪಾಲಿಗೆ ಸಿಂಹಸ್ವಪ್ನವಾದ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿರುವ ಸಾಯಿಕುಮಾರ್ ತಮ್ಮ ಹಳೆಯ ಲುಕ್ಕಲ್ಲಿ, ಹೊಸ ಖದರ್ನೊಂದಿಗೆ ಗಮನ ಸೆಳೆಯುತ್ತಿದ್ದಾರೆ.
ಎಸ್, ಡೈಲಾಗ್ ಕಿಂಗ್ ಸಾಯಿ ಕುಮಾರ್ ಬಿಡುಗಡೆಗೆ ಸಿದ್ಧವಾಗಿರೋ ಜಗ್ಗಿ ಜಗನ್ನಾಥ ಚಿತ್ರದಲ್ಲಿ ಪವರ್ ಫುಲ್ ಪೊಲೀಸ್ ಆಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಜನರ್ದಸ್ತ್ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ಡೈಲಾಗ್ ಕಿಂಗ್ ಎನರ್ಜಿಟಿಕ್ ಅಂಡ್ ಖದರ್ ತುಂಬಿರೋ ಮಾಸ್ ಡೈಲಾಗ್‍ಗಳು ಈಗಾಗಲೇ ಟ್ರೈಲರ್ ನಲ್ಲಿ ಮಿಂಚು ಹರಿಸಿದೆ. ಬಹು ದಿನಗಳಿಂದ ಸಾಯಿ ಕುಮಾರ್ ಡೈಲಾಗ್ ಮಿಸ್ ಮಾಡಿಕೊಂಡಿದ್ದ ಸಿನಿರಸಿಕರಿಗೆ ಈ ಚಿತ್ರ ಭರಪೂರ ಮನರಂಜನೆ ನೀಡಲಿದೆ.
ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಸಾಯಿಕುಮಾರ್, ಲಿಖಿತ್, ದುನಿಯಾ ರಶ್ಮಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮಾಫಿಯ, ರೌಡಿಸಂ ಕಥಾನಕವುಳ್ಳ ಮಾಸ್ ಸಬ್ಜೆಕ್ಟ್ ಜಗ್ಗಿ ಜಗನ್ನಾಥ ಚಿತ್ರದಲ್ಲಿದ್ದು, ಸಾಯಿ ಕುಮಾರ್ ದುಷ್ಟರನ್ನ ಬಗ್ಗು ಬಡಿಯೋ ಪವರ್ ಫುಲ್ ಪೊಲೀಸ್ ಆಫಿಸರ್ ಆಗಿ ಬಣ್ಣ ಹಚ್ಚಿದ್ದಾರೆ. ಹೆಚ್, ಜಯರಾಜ್, ಜಿ. ಶಾರದಾ ಜಗ್ಗಿ ಜಗನ್ನಾಥ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಎ. ಎಂ ನೀಲ್ ಸಂಗೀತ ನಿರ್ದೇಶನ ಇರುವ ಈ ಚಿತ್ರ ಇದೇ ಫೆಬ್ರವರಿ 28ಕ್ಕೆ ಬಿಡುಗಡೆಯಾಗುತ್ತಿದೆ.