ನವದೆಹಲಿ: ಭದ್ರತಾ ಲೋಪದಿಂದ ಸಂಸತ್ ಭವನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಇಬ್ಬರು ಯುವಕರು ಏಕಾಏಕಿ ಬಂದು ಸ್ಮೋಕ್ ಬಾಂಬ್ (Smoke Bomb) ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರು ಸೇರಿ ಒಟ್ಟು 6 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
#WATCH | “He used to drive an e-rickshaw. We are four people (in the family). My husband works as a carpenter…He had gone two days ago. He had told me that he is going with his friends, as there is some work…,” says Rani Sharma, mother of accused Sagar who jumped down from… https://t.co/iwpztdumTZ pic.twitter.com/VgjTlQKuwM
— ANI (@ANI) December 13, 2023
Advertisement
ಈ ಹಿನ್ನೆಲೆ ಆರೋಪಿಗಳ ಪೈಕಿ ಪ್ರಮುಖರಾದ ಸಾಗರ್ ಶರ್ಮಾ (Sagar Sharma) ಹಾಗೂ ಮೈಸೂರಿನ ಮನೋರಂಜನ್ ಕುರಿತು ತೀವ್ರ ತನಿಖೆ ನಡೆಯುತ್ತಿದೆ. ಈ ಕುರಿತು ಆರೋಪಿ ಸಾಗರ್ ಶರ್ಮಾ ತಾಯಿ ರಾಣಿ ಶರ್ಮಾ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ. ಸಾಗರ್ ಶರ್ಮಾ ಇ-ರಿಕ್ಷಾ (E-Rickshaw) ಓಡಿಸುತ್ತಿದ್ದ. ನಾವು ಕುಟುಂಬದಲ್ಲಿ ನಾಲ್ಕು ಜನರಿದ್ದೇವೆ. ನನ್ನ ಪತಿ ಕಾರ್ಪೆಂಟರ್ ಕೆಲಸ ಮಾಡುತ್ತಾರೆ. ಸಾಗರ್ ತನ್ನ ಸ್ನೇಹಿತರ ಜೊತೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಎರಡು ದಿನಗಳ ಹಿಂದೆ ಮನೆಯಿಂದ ಹೋಗಿದ್ದಾನೆ ಎಂದರು. ಇದನ್ನೂ ಓದಿ: Security Breach in LokSabha- ಸಂಸತ್ ಒಳಗೆ, ಹೊರಗೆ ಇಂದು ಏನೇನಾಯ್ತು?
Advertisement
Advertisement
ಇನ್ನು ಈ ಕುರಿತು ಮಾತನಾಡಿದ ಎಸ್‌ಹೆಚ್‌ಒ, ಒಂದು ದಶಕದಿಂದ ಆರೋಪಿ ಸಾಗರ್ ಕುಟುಂಬವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಶರ್ಮಾ ಇ-ರಿಕ್ಷಾ ಓಡಿಸುತ್ತಿದ್ದ ಎಂದು ತಿಳಿದುಬಂದಿದೆ ಎಂದು ಹೇಳಿದರು. ಅಲ್ಲದೇ ಲೋಕಸಭೆಯಲ್ಲಿ ನಡೆದ ಘಟನೆಯಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ನಾವು ಅವರಿಂದ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ನಿರುದ್ಯೋಗದಿಂದ ಬೇಸತ್ತು ಸಾಯೋದೇ ಲೇಸು ಅನ್ನುತ್ತಿದ್ದಳು- ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟವಳ ತಾಯಿ ಮಾತು
Advertisement