ಶಿವಮೊಗ್ಗ: ಸಾಗರದ (Sagar) ಕೆಎಸ್ಆರ್‌ಟಿಸಿ ಡಿಪೋದ (KSRTC Depot) ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೃತರನ್ನು ಸಾಗರದ ನಿವಾಸಿ ಸಂದೀಪ್ (41) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಪಾಳಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸಂದೀಪ್ರನ್ನು ಸಹೋದ್ಯೋಗಿಗಳು ಬಸ್ಸಿನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಷ್ಟರಲ್ಲೇ ಸಂದೀಪ್ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 5 ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಕಳ್ಳ ಅರೆಸ್ಟ್ – 22.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಆಸ್ಪತ್ರೆಗೆ ಕರೆದುಕೊಂಡು ಬಂದ ಸಿಬ್ಬಂದಿ ಚಂದ್ರು ಮಾತನಾಡಿ, ನಾನು ಬಸ್ನಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ರಾತ್ರಿ ನಾನು ಬಸ್‌ನ್ನು ಡಿಪೋಗೆ ಬಿಡಲು ಬಂದಾಗ ಗೇಟ್ ಬಳಿ ಹಾರ್ನ್ ಮಾಡಿದ್ರು ಸಹ ಸಂದೀಪ್ ಅವರು ಹೊರಗೆ ಬರಲಿಲ್ಲ. ಇವರು ಬಂದು ಬಸ್ ಚೆಕ್ ಮಾಡಿದ ಮೇಲೆಯೇ ಬಸ್ ಒಳಗೆ ಬಿಡಬೇಕಿತ್ತು. ಬಹಳ ಹೊತ್ತು ಇವರು ಬಾರದ ಕಾರಣಕ್ಕೆ ಇವರ ರೂಮ್‌ನಲ್ಲಿ ಹೋಗಿ ನೋಡಿದಾಗ ಇವರು ಕುಸಿದು ಬಿದ್ದಿದ್ದರು. ತಕ್ಷಣ ನಮ್ಮದೇ ಬಸ್ನಲ್ಲಿ ಸಂದೀಪ್ ಅವರನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದೆವು. ಅಷ್ಟೊತ್ತಿಗಾಗಲೇ ಸಂದೀಪ್ ತೀರಿ ಹೋಗಿದ್ದಾರೆ ಎಂದು ವೈದ್ಯರು ತಿಳಿಸಿದರು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೀದರ್ | ದೇವರ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ನಾಲ್ವರು ಸಾವು

