ಚಿಕ್ಕಬಳ್ಳಾಪುರ: ವಿಶ್ವಕಪ್ ಫೀವರ್ ಇಡೀ ದೇಶವನ್ನು ಆವರಿಸಿರುವಾಗ, ಹೆಸರಾಂತ ಯೋಗಿ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಭಾರತೀಯ ಕ್ರಿಕೆಟ್ ತಂಡದ ಗೆಲುವಿಗೆ ಪ್ರಾರ್ಥಿಸಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸಲಿರುವ ಸದ್ಗುರುಗಳು ತಮ್ಮ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ, “ಭಾರತದ ತಂಡಕ್ಕೆ ಎಂತಹ ಅದ್ಭುತ ರನ್! ನಮ್ಮ ಕ್ರಿಕೆಟ್ ತಂಡವು ಆಟವನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಕೊಂಡೊಯ್ದಿದೆ. 10 ಕ್ಕೆ 10, ಈ ಹಿಂದೆ ಕೇಳಿಲ್ಲದ ವಿಷಯ! ಅನುಕರಣೀಯ ನಾಯಕತ್ವ ಮತ್ತು ವೈಯಕ್ತಿಕ ಆಟಗಾರರ ಅದ್ಭುತ ಪ್ರದರ್ಶನ ಮತ್ತು ದಾಖಲೆಗಳು ಹೇರಳವಾಗಿರುವುದರಿಂದ, ಈ ಅಸಾಧಾರಣ ತಂಡವು ಫೈನಲ್ ಬಗ್ಗೆ ಯಾವುದೇ ಚಿಂತೆಯನ್ನು ಹೊಂದಿರಬಾರದು” ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ಅವಮಾನ ತಪ್ಪಿಸಲು ಭಾರತ ವಿಶ್ವಕಪ್ ಗೆಲ್ಲಲೇಬೇಕು: 2006ರ ಚಾಂಪಿಯನ್ಸ್ ಟ್ರೋಫಿ ವೇಳೆ ಆಗಿದ್ದೇನು?
ತಂಡದೊಂದಿಗೆ ತಮ್ಮ ಸಲಹೆಯನ್ನು ಹಂಚಿಕೊಂಡ ಸದ್ಗುರು, “ಮುಖ್ಯವಾದ ವಿಷಯವೆಂದರೆ, ನಾವು ಎಂದಿಗೂ ಎದುರಾಳಿಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅಥವಾ ಅವರು ಯಾರು ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು. ಆಟವನ್ನು ಪೂರ್ಣವಾಗಿ ಹೇಗೆ ಆಡುವುದು ಎಂಬುದು ನಮ್ಮ ಕಾಳಜಿಯಾಗಿರಬೇಕು. ನಮ್ಮ ಹುಡುಗರು ಅದೇ ರೀತಿಯಲ್ಲಿ ಇಡೀ ದೇಶಕ್ಕೆ ಹೆಮ್ಮೆ ಮತ್ತು ಸಂತೋಷವನ್ನು ತರುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದಾರೆ.
ನೀವು 1.4 ಬಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ತರುವ ಸಂತೋಷದ ಪ್ರಮಾಣವನ್ನು ಪರಿಗಣಿಸಿರಿ. ಅದನ್ನು ಮರೆಯಬೇಡಿ. ಆದರೆ ಅದನ್ನು ನಿಮ್ಮ ತಲೆಯ ಮೇಲೆ ಒಯ್ಯಬೇಡಿ. ಕೇವಲ ಚೆಂಡನ್ನು ಹೊಡೆಯಿರಿ, ವಿಕೆಟ್‌ಗಳನ್ನು ಹೊಡೆದುರುಳಿಸಿ ಅಷ್ಟೇ! ಉಳಿದದ್ದು ಸಂಭವಿಸುತ್ತದೆ. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು ಮತ್ತು ಆಶೀರ್ವಾದಗಳು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಪಂದ್ಯಕ್ಕೂ ಮುನ್ನ ರಂಗೇರಲಿದೆ ಮೋದಿ ಕ್ರೀಡಾಂಗಣ – ಕಾರ್ಯಕ್ರಮಗಳ ಪಟ್ಟಿ ರಿಲೀಸ್
ಅಹಮದಾಬಾದ್‍ನಲ್ಲಿ ನಡೆಯಲಿರುವ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಾ ನಿಮ್ಮೊಂದಿಗೆ ಇರುತ್ತೇನೆ. ಇದನ್ನು ಸಾಧ್ಯವಾಗಿಸೋಣ ಎಂದು ಸದ್ಗುರು ತಿಳಿಸಿದ್ದಾರೆ. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ (India vs Australia) ತಂಡಗಳು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೆಣಸಲಿವೆ.