– ಸುಷ್ಮಾರ ಸಾಧನೆಯನ್ನು ನೆನಪಿಸಿಕೊಂಡು ಸಂತಾಪ
ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸ ಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಅವರು ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಕ್ಷಕ್ಕೆ ಹಾಗೂ ದೇಶಕ್ಕೆ ನೀಡಿರುವ ಕೊಡುಗೆಯನ್ನು ನೆನೆದು ಸಂತಾಪ ಸೂಚಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಮಂಗಳವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದು, ಎಲ್ಲಾ ರಾಜಕಾರಣಿಗಳು ಹಾಗೂ ದೇಶದ ಜನತೆ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ರಾಜಕಾರಣದಲ್ಲಿ ಸುಷ್ಮಾ ಅವರ ಸಾಧನೆ, ಸಹೋದರಿಯಾಗಿ ತಮ್ಮೊಂದಿಗೆ ಇದ್ದ ನೆನಪುಗಳನ್ನು ನೆನೆದು ಸದಾನಂದ ಗೌಡ ಅವರು ಸರಣಿ ಟ್ವೀಟ್ ಮಾಡಿ ದುಃಖಿಸಿದ್ದಾರೆ.
Advertisement
ನಮ್ಮದೇಶ ಕಂಡ ಪ್ರತಿಭಾವಂತ ಮಹಿಳಾ ರಾಜಕಾರಣಿಗಳಲ್ಲಿ ಸುಷ್ಮಾರ ಹೆಸರು ಅಗ್ರ ಸ್ಥಾನದಲ್ಲಿದೆ. ಅವರ ವಾಕ್ ಚಾತುರ್ಯ, ವಿಚಾರ ವಿಮರ್ಶೆ. ಬುದ್ದಿವಂತಿಕೆ. ದೈವ ಭಕ್ತಿ . ಸರಳ ಜೀವನ. ಎಲ್ಲವೂ ಅನುಕರಣೀಯ. ರಾಜಕೀಯವಾಗಿ ಅನೇಕ ಸ್ಥಾನ ಮಾನ ಪಡೆದ ಅವರು ವಿದೇಶಾಂಗ ಸಚಿವೆಯಾಗಿ ಸಲ್ಲಿಸಿದ ಸೇವೆ ಜನ ಮಾನಸದಲ್ಲಿ ಸ್ಥಿರ ಸ್ಥಾಯಿಯಾಗಿ ನಿಲ್ಲುವಂತದ್ದು.1/5
— Sadananda Gowda (@DVSadanandGowda) August 7, 2019
Advertisement
ಟ್ವೀಟ್‍ನಲ್ಲಿ ಏನಿದೆ?
ನಮ್ಮ ದೇಶ ಕಂಡ ಪ್ರತಿಭಾವಂತ ಮಹಿಳಾ ರಾಜಕಾರಣಿಗಳಲ್ಲಿ ಸುಷ್ಮಾರ ಹೆಸರು ಅಗ್ರ ಸ್ಥಾನದಲ್ಲಿದೆ. ಅವರ ವಾಕ್ ಚಾತುರ್ಯ, ವಿಚಾರ ವಿಮರ್ಶೆ, ಬುದ್ಧಿವಂತಿಕೆ, ದೈವ ಭಕ್ತಿ, ಸರಳ ಜೀವನ, ಎಲ್ಲವೂ ಅನುಕರಣೀಯ. ರಾಜಕೀಯವಾಗಿ ಅನೇಕ ಸ್ಥಾನ ಮಾನ ಪಡೆದ ಅವರು ವಿದೇಶಾಂಗ ಸಚಿವೆಯಾಗಿ ಸಲ್ಲಿಸಿದ ಸೇವೆ ಜನ ಮಾನಸದಲ್ಲಿ ಸ್ಥಿರ ಸ್ಥಾಯಿಯಾಗಿ ನಿಲ್ಲುವಂತದ್ದಾಗಿದೆ.
Advertisement
ಸುಷ್ಮಾರವರನ್ನು ಕರ್ನಾಟಕ ರಾಜಕೀಯಕ್ಕೆ ಕರೆತರುವಲ್ಲಿ ತೋರಿಸಿದ ಆಸ್ಥೆ ಅವರನ್ನು ಕನ್ನಡಿಗರ ಇನ್ನಷ್ಟು ಹತ್ತಿರ ಬರುವಂತೆ ಮಾಡಿತು . ನಮ್ಮೆಲ್ಲರ ಸಹೋದರಿಯಾಗಿ ಚಿರಕಾಲ ನಿಲ್ಲುವಂತೆ ಆಯಿತು.
ಅಮ್ಮಾ ನಿಮ್ಮ ದೇಹ ಇಲ್ಲಿ ಇಲ್ಲದೇ ಇರಬಹುದು ನೀವು ಬಿಟ್ಟು ಹೋದ ಆದರ್ಶಗಳು ಮುಂದಿನ ಪೀಳಿಗೆಯ ಜನತೆಗೆ ದಾರಿದೀಪ.
ಅಮ್ಮ ಇದೇ ನನ್ನ ನಮನ ???????? 4/5
— Sadananda Gowda (@DVSadanandGowda) August 7, 2019
Advertisement
ನನ್ನ ರಾಜಕೀಯ ಜೀವನದಲ್ಲಿ ಅವರನ್ನು ತುಂಬಾ ಸಮೀಪದಿಂದ ಬಲ್ಲೆ. ತಾವು ನಂಬಿಕೊಂಡಿದ್ದ ಸಿದ್ಧಾಂತದಲ್ಲಿ ಎಂದಿಗೂ ರಾಜಿ ಮಾಡಿ ಕೊಂಡವರಲ್ಲ. ಸಾಮಾನ್ಯರ ಸಂಕಷ್ಟಕ್ಕೆ ಅವರು ಸ್ಪಂದಿಸುತ್ತಿದ್ದ ರೀತಿ, ಭಾರತದಿಂದ ತನಗರಿವಿಲ್ಲದೆ ಪಾಕಿಸ್ತಾನಕ್ಕೆ ಹೋಗಿ ಸೇರಿದ್ದ ಕಿವುಡ ಮತ್ತು ಮೂಗ ಬಾಲಕಿ ಗೀತಾಳನ್ನು ಮತ್ತೆ ನಮ್ಮ ದೇಶಕ್ಕೆ ಕರೆ ತರುವಲ್ಲಿ ತೋರಿಸಿದ ಮಾತೃ ಹೃದಯ, ಎಲ್ಲವೂ ನೆನಪಿನಂಗಳದಿಂದ ಎದ್ದು ನಿಲ್ಲುತ್ತಿವೆ.
ನನ್ನ ರಾಜಕೀಯ ಜೀವನದಲ್ಲಿ ಅವರನ್ನು ತುಂಬಾ ಸಮೀಪದಿಂದ ಬಲ್ಲೆ.ತಾವು ನಂಬಿಕೊಂಡಿದ್ದ ಸಿದ್ಧಾಂತದಲ್ಲಿ ಎಂದಿಗೂ ರಾಜಿ ಮಾಡಿ ಕೊಂಡವರಲ್ಲ.ಸಾಮಾನ್ಯರ ಸಂಕಷ್ಟಕ್ಕೆ ಅವರು ಸ್ಪಂದಿಸುತ್ತಿದ್ದ ರೀತಿ,ಭಾರತದಿಂದ ತನಗರಿವಿಲ್ಲದೆ ಪಾಕಿಸ್ತಾನಕ್ಕೆ ಹೋಗಿ ಸೇರಿದ್ದ ಕಿವುಡ ಮತ್ತು ಮೂಕಿ ಬಾಲಕಿ ಗೀತಾಳನ್ನು ಮತ್ತೆ ನಮ್ಮ ದೇಶಕ್ಕೆ ಕರೆ ತರುವಲ್ಲಿ ತೋರಿಸಿದ2/5
— Sadananda Gowda (@DVSadanandGowda) August 7, 2019
ದೇಶ ಕಂಡ ತುರ್ತು ಪರಿಸ್ಥಿತಿಯಲ್ಲಿ ಅವರು ಸಿಡಿದ್ದೆದ್ದ ರೀತಿ, ತಮ್ಮ ಕಿರಿಯ ವಯಸ್ಸಿನಲ್ಲೇ ಹರಿಯಾಣದ ಸಂಪುಟ ದರ್ಜೆ ಸಚಿವರಾಗಿ, ಮೊದಲ ಮಹಿಳಾ ವಕ್ತಾರರಾಗಿ, ದೆಹಲಿಯ ಮುಖ್ಯಮಂತ್ರಿಯಾಗಿ ಎಲ್ಲವೂ ಸಾಧನೆಯ ಪುಟಗಳಲ್ಲಿ ಸೇರಬೇಕಾದವು.
ಈಗ ಮತ್ತೊಮ್ಮೆ ಅನಂತ ಕುಮಾರ್ ನೆನಪಾಗುತ್ತಿದ್ದಾರೆ. ಸುಷ್ಮಾರವರನ್ನು ಕರ್ನಾಟಕ ರಾಜಕೀಯಕ್ಕೆ ಕರೆತರುವಲ್ಲಿ ತೋರಿಸಿದ ಆಸ್ಥೆ ಅವರನ್ನು ಕನ್ನಡಿಗರ ಇನ್ನಷ್ಟು ಹತ್ತಿರ ಬರುವಂತೆ ಮಾಡಿತು. ನಮ್ಮೆಲ್ಲರ ಸಹೋದರಿಯಾಗಿ ಚಿರಕಾಲ ನಿಲ್ಲುವಂತೆ ಆಯಿತು. ಅಮ್ಮಾ ನಿಮ್ಮ ದೇಹ ಇಲ್ಲಿ ಇಲ್ಲದೇ ಇರಬಹುದು. ನೀವು ಬಿಟ್ಟು ಹೋದ ಆದರ್ಶಗಳು ಮುಂದಿನ ಪೀಳಿಗೆಯ ಜನತೆಗೆ ದಾರಿದೀಪ. ಅಮ್ಮ ಇದೇ ನನ್ನ ನಮನ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಮಾತೃಹೃದಯ,ಎಲ್ಲವೂ ನೆನಪಿನಂಗಳದಿಂದ ಎದ್ದು ನಿಲ್ಲುತ್ತಿವೆ.ದೇಶ ಕಂಡ ತುರ್ತು ಪರಿಸ್ಥಿತಿಯಲ್ಲಿ ಅವರು ಸಿಡಿದ್ದೆದ್ದ ರೀತಿ,ತಮ್ಮ ಕಿರಿ ವಯಸ್ಸಿನಲ್ಲೇ ಹರಿಯಾಣದ ಸಂಪುಟ ದರ್ಜೆ ಸಚಿವರಾಗಿ,ಮೊದಲ ಮಹಿಳಾ ವಕ್ತಾರರಾಗಿ,ದೆಹಲಿಯ ಮುಖ್ಯಮಂತ್ರಿಯಾಗಿ ಎಲ್ಲವೂ ಸಾಧನೆಯ ಪುಟಗಳಲ್ಲಿ ಸೇರಬೇಕಾದವು.ಈಗ ಮತ್ತೊಮ್ಮೆ ಅನಂತ್ ಕುಮಾರ್ ನೆನಪಾಗುತ್ತಿದ್ದಾರೆ.3/5
— Sadananda Gowda (@DVSadanandGowda) August 7, 2019
ಮಂಗಳವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿರುವ ಸುಷ್ಮಾ ಸ್ವರಾಜ್(67) ಅವರ ಪಾರ್ಥಿವ ಶರೀರವನ್ನು ಜನಪತ್ ರಸ್ತೆಯ ಧವನ್ ದೀಪ್ ಕಟ್ಟಡದ ನಿವಾಸದಲ್ಲಿ ಇರಿಸಲಾಗಿದೆ. ಇಂದು ಬೆಳಗ್ಗೆ 8ರಿಂದ 11 ಗಂಟೆವರೆಗೆ ಜಂತರ್ ಮಂತರ್‍ನಲ್ಲಿ ನಂತರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2:30ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಆ ಬಳಿಕ 3 ಗಂಟೆಗೆ ಲೋಧಿ ರಸ್ತೆಯ ಶವಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
https://www.youtube.com/watch?v=uGE9Fw-zTrg