ನವದೆಹಲಿ: ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ವಜಾಗೊಳಿಸುವಂತೆ ಪ್ರಧಾನಿಗೆ ಹೇಳಿ, 30 ಸೆಕೆಂಡ್ನಲ್ಲೇ ಪ್ರತಿಭಟನೆ ನಿಲ್ಲಿಸ್ತೇವೆ ಎಂದು ನ.10ರ ನಂತರ ಮನವಿ ಮಾಡಿದ್ದ ದೆಹಲಿ ವರ್ತಕರಿಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಹೇಳಿದ್ದಾರೆ.
ಎಸ್ಐಆರ್ (SIR) ಅಕ್ರಮ ಆರೋಪ, ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇಂಡಿಕೂಟವು ನವೆಂಬರ 1ರಂದು ದೆಹಲಿಯ (Newdelhi) ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದೆ. ನವೆಂಬರ್ 1ರಂದು ಪ್ರತಿಭಟನೆ ನಡೆಸಿದರೆ ದೀಪಾವಳಿ ಹೊತ್ತಲ್ಲೇ 10 ಸಾವಿರ ಕೋಟಿ ನಷ್ಟವಾಗುತ್ತೆ. ನವೆಂಬರ್ 10ರ ನಂತರ ಪ್ರತಿಭಟನೆ ನಡೆಸಿ ಎಂಬ ರಾಹುಲ್ ಗಾಂಧಿ ಅವರಿಗೆ ದೆಹಲಿ ವರ್ತಕರು ಮನವಿ ಮಾಡಿದ್ದರು. ಇದನ್ನೂ ಓದಿ: ಸಕ್ಕರೆ ದರ ಏರಿಕೆ ಆಗುವವರೆಗೆ ರೈತರಿಗೆ ನ್ಯಾಯ ಸಿಗುವುದು ಕಷ್ಟ: ಡಿ.ಕೆ ಶಿವಕುಮಾರ್
ವರ್ತಕರ ಮನವಿಗೆ ರಾಹುಲ್ ಪ್ರತಿಕ್ರಿಯಿಸಿದ್ದು, ನಾವು ನಿಮ್ಮನ್ನು ಪ್ರೀತಿಸ್ತೇವೆ. ನಿಮ್ಮ ಜೊತೆಗೆ ಇದ್ದೇವೆ. ದೇಶದಲ್ಲಿ ವೋಟ್ಚೋರಿಯಿಂದ ಯಾವುದು ಸುರಕ್ಷಿತವಲ್ಲ. ಜ್ಞಾನೇಶ್ ಕುಮಾರ್ರನ್ನು ವಜಾಗೊಳಿಸುವಂತೆ ಪ್ರಧಾನಿಗೆ ಹೇಳಿ. 30 ಸೆಕೆಂಡ್ನಲ್ಲೇ ಪ್ರತಿಭಟನೆ ನಿಲ್ಲಿಸ್ತೇವೆ ಅಂದಿದ್ದಾರೆ.
ಈ ಮಧ್ಯೆ, ಇಂಡಿ ಕೂಟದ ರ್ಯಾಲಿಗೆ ಪ್ರತಿಯಾಗಿ ಬಿಜೆಪಿ ನವೆಂಬರ್ 1ರಿಂದ ತಿಂಗಳು ಪೂರ್ತಿ ದೇಶಾದ್ಯಂತ `ಸೇವ್ ಡೆಮಾಕ್ರಸಿ, ಎಂಡ್ ಮೊಬೊಕ್ರಸಿ’ ಪಾದಯಾತ್ರೆ ನಡೆಸಲಿದೆ. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಅವರೇ ನೇತೃತ್ವ ವಹಿಸಿದ್ದು, ನ.2ರಂದು ಹೈದರಾಬಾದ್ನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ಇದನ್ನೂ ಓದಿ: ಅಮಿತ್ ಶಾ ವಿರುದ್ಧ ಬೆಂಗಳೂರಿನಲ್ಲಿ ಆಕ್ಷೇಪಾರ್ಹ ಹೇಳಿಕೆ – ರಾಹುಲ್ ಖುಲಾಸೆ
