ಚೆನ್ನೈ: ತಮಿಳುನಾಡು (Tamilnadu) ರಾಜ್ಯಪಾಲ ಆರ್.ಎನ್. ರವಿ (Governor RN Ravi) ಅವರನ್ನು ಕೂಡಲೇ ವಜಾಗೊಳಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಗೆ ಪತ್ರದ ಮೂಲಕ ಆಡಳಿತರೂಢ ಪಕ್ಷ ಡಿಎಂಕೆ ಮನವಿ ಮಾಡಿದೆ.
ರಾಜ್ಯಪಾಲ ಆರ್.ಎನ್.ರವಿ ಅವರು “ಶಾಂತಿಗೆ ಬೆದರಿಕೆ” ಆಗಿದ್ದು, ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡಿರುವ ಸರ್ಕಾರಕ್ಕೆ ಮತ್ತು ಜನರ ಸೇವೆಗೆ ಅಡ್ಡಿಪಡಿಸಿದ್ದಾರೆ. ಕೋಮು ದ್ವೇಷವನ್ನು ಪ್ರಚೋದಿಸುತ್ತಾರೆ. ಹೀಗಾಗಿ ಅವರನ್ನು ಪದಚ್ಯುತಿಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಡಿಎಂಕೆ (DMK) ಪತ್ರದ ಮೂಲಕ ಮನವಿ ಸಲ್ಲಿಸಿದೆ.
Advertisement
Advertisement
ಸಂವಿಧಾನ ಮತ್ತು ಕಾನೂನನ್ನು ಸಂರಕ್ಷಿಸಲು, ರಕ್ಷಿಸಲು ಮತ್ತು ಸಮರ್ಥಿಸಿಕೊಳ್ಳುತ್ತೇನೆ ಎಂಬ ಪ್ರಮಾಣ ವಚನವನ್ನು ರಾಜ್ಯಪಾಲ ಆರ್.ಎನ್.ರವಿ ಉಲ್ಲಂಘಿಸಿದ್ದಾರೆ. ಅಸೆಂಬ್ಲಿ ಅಂಗೀಕರಿಸಿದ ಮಸೂದೆಗಳಿಗೆ ಸಮ್ಮತಿ ನೀಡಲು ಅವರು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಡಿಎಂಕೆ ಆರೋಪಿಸಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಅನ್ಯ ಕೋಮಿನ ಯುವಕನ ಪ್ರೀತಿ ಮಾಡಿದ್ದಕ್ಕೆ ತಂದೆಯಿಂದ್ಲೇ ಮಗಳ ಕೊಲೆ
Advertisement
Advertisement
ರಾಜ್ಯಪಾಲರ ಹೇಳಿಕೆಗಳು ಸರ್ಕಾರದ ಬಗ್ಗೆ ಅಸಮಾಧಾನವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವಂತೆ ಇದ್ದು, ಕೆಲವರು ಅವರು ದೇಶದ್ರೋಹಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನುತ್ತಿದ್ದು, ಆರ್.ಎನ್. ರವಿ ಅವರು ಸಾಂವಿಧಾನಿಕ ಕಚೇರಿಗೆ ಅನರ್ಹರು, ಅವರನ್ನು ಕೂಡಲೇ ವಜಾಗೊಳಿಸಿ ಎಂದು ಡಿಎಂಕೆ ಆಗ್ರಹಿಸಿದೆ. ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದ ಕೂಡಲೇ ಒಕ್ಕಲಿಗರು ಬಿಜೆಪಿ ಹಿಂದೆ ಹೋಗೋದಿಲ್ಲ: ಕುಮಾರಸ್ವಾಮಿ