ಬೆಂಗಳೂರು: ಕೆಂಪೇಗೌಡರ ಪ್ರತಿಮೆ (KempegowdaStatue) ಸ್ಥಾಪನೆ ಮಾಡಿದ ಕೂಡಲೇ ಒಕ್ಕಲಿಗರ (Okkaligas) ಮತ ಬಿಜೆಪಿಗೆ (BJP) ಹೋಗುವುದಿಲ್ಲ. ಅಂತಹ ಭ್ರಮೆಯಿಂದ ಬಿಜೆಪಿ ಹೊರಗೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಕೆಂಪೇಗೌಡರ ಪ್ರತಿಮೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಕಾರ್ಯಕ್ರಮದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಬರುತ್ತಾರೆ ಹೋಗುತ್ತಾರೆ ಅಷ್ಟೆ. ಕೆಂಪೇಗೌಡ ಪ್ರತಿಮೆ ಅನಾವರಣ ಒಂದು ಭಾಗ. ಈಗಾಗಲೇ ರಾಜ್ಯದ ಹಲವಾರು ಭಾಗದಲ್ಲಿ ಕೆಂಪೇಗೌಡ ಪ್ರತಿಮೆಗಳು ನಿತ್ಯ ಒಂದಲ್ಲ ಒಂದು ಭಾಗದಲ್ಲಿ ಅನಾವರಣ ಆಗುತ್ತಿವೆ. ಇದು ಬಿಜೆಪಿಯ ನಿಯೋಜಿತ ಕಾರ್ಯಕ್ರಮ ಅಷ್ಟೆ. ಅದಕ್ಕೆ ನಾನು ಹೆಚ್ಚಿನ ಮಹತ್ವ ಕೊಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ದೆಹಲಿಯ ರಹಸ್ಯ ಸ್ಥಳದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್
Advertisement
Advertisement
ಕೆಂಪೇಗೌಡರ ಕನಸು ನನಸಾದಾಗ ನಾವು ಕೆಂಪೇಗೌಡರಿಗೆ ಗೌರವ ಕೊಟ್ಟ ಹಾಗೆ. ಬೆಂಗಳೂರು ನಗರ ಇಷ್ಟು ದೊಡ್ಡದಾಗಿ ಬೆಳೆದಿದೆ. ಬೆಂಗಳೂರಿನಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಬೆಂಗಳೂರಿನಲ್ಲಿ ದೊಡ್ಡ ಅನಾಹುತ ಮಾಡಿವೆ. ಅದನ್ನು ಸರಿಪಡಿಸುವ ಕೆಲಸ ಮಾಡಿ ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 5,000 ಕೋಟಿ ವೆಚ್ಚದ ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಫೋಟೋ ಬಿಡುಗಡೆ
Advertisement
ಕೆಂಪೇಗೌಡ ಪ್ರತಿಮೆಯಿಂದ ಬಿಜೆಪಿಗೆ ಒಕ್ಕಲಿಗರ ಮತ ಹೋಗುತ್ತದೆ ಎಂಬ ಭ್ರಮೆ ಬೇಡ. ಕೆಂಪೇಗೌಡ ಪ್ರತಿಮೆ ಮಾಡಿ, ಮೋದಿ ಕೈಯಲ್ಲಿ ಉದ್ಘಾಟನೆ ಮಾಡಿಸಿದರೆ ಒಕ್ಕಲಿಗರು ಮತ್ತು ಕನ್ನಡಿಗರು ಬಿಜೆಪಿ ಹಿಂದೆ ಹೋಗುವುದಿಲ್ಲ. ಅಂತಹ ಭ್ರಮೆಯಲ್ಲಿ ಬಿಜೆಪಿ ಅವರು ಇದ್ದರೆ, ಆ ಭ್ರಮೆಯಿಂದ ಜನರೇ ಅವರನ್ನು ಹೊರಗೆ ತರುತ್ತಾರೆ ಎಂದು ಟಾಂಗ್ ನೀಡಿದ್ದಾರೆ.