ಮುಂಬೈ: ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರಿಗೆ 44ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟ್ ಎಂಬ ಧರ್ಮದ ದೇವರು ಎಂದು ಕರೆಸಿಕೊಳ್ಳುವ ಸಚಿನ್‍ಗೆ ಅನೇಕ ಮಂದಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಪ್ರಪಂಚದ್ಯಂತ ಸಚಿನ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 24 ವರ್ಷಗಳ ಸುದೀರ್ಘ ಕಾಲ ತಮ್ಮ ಮನಮೋಹಕ ಬ್ಯಾಟಿಂಗ್ ಶೈಲಿಯಿಂದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸದ್ಯ ಎಲ್ಲ ವಿಭಾಗದ ಕ್ರಿಕೆಟ್ ಪಂದ್ಯಾವಳಿಗಳಿಗೆ ವಿದಾಯ ಹೇಳಿದ್ದಾರೆ.
Advertisement
Advertisement
ಇಲ್ಲಿ ನಿಮಗೆ ನಿಮ್ಮ ನೆಚ್ಚಿನ ಕ್ರೀಡಾಪಟು ಸಚಿನ ಅವರ ಬಗ್ಗೆ ಗೊತ್ತಿರದ 10 ಕುತೂಹಲಕಾರಿ ವಿಷಯಗಳು ಇಲ್ಲಿವೆ.
1. ತೆಂಡೂಲ್ಕರ್ ತಂದೆ ರಮೇಶ್ ತೆಂಡೂಲ್ಕರ್ ಅವರು ಸಂಗೀತ ನಿರ್ದೆಶಕ ಸಚಿನ್ ದೇವ್ ಬರ್ಮನ್ ಅವರ ಅಭಿಮಾನಿಯಾಗಿದ್ದರು. ಈ ಕಾರಣಕ್ಕಾಗಿ ಮಗನಿಗೆ ಸಚಿನ್ ಎಂದು ಹೆಸರನ್ನು ಇಟ್ಟಿದ್ದರು.
Advertisement
2. 1987ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿ-ಫೈನಲ್ ಪಂದ್ಯದಲ್ಲಿ ಬಾಲ್ ಬಾಯ್ ಆಗಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.
Advertisement
3. ಬ್ರಬೌರ್ನ್ ಸ್ಟೇಡಿಯಂನಲ್ಲಿ 1988 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಆಡಿದ್ದರು.
4. ಸಚಿನ್ 19 ನೇ ವಯಸ್ಸಿನಲ್ಲಿ ಭಾರತ ಕ್ರಿಕೆಟ್ ತಂಡದ ಯುವ ಆಟಗಾರರಾಗಿದ್ದರು. ಇವರ ಮೊದಲ ಕಾರು ಮಾರುತಿ-800.
5. ಸಚಿನ್ ತಮ್ಮ ಮೊದಲ ಟೆಸ್ಟ್ ಪಾಕಿಸ್ತಾನ ತಂಡದ ವಿರುದ್ಧ ಆಡಿದ್ದು, ಈ ಪಂದ್ಯದಲ್ಲಿ, ಸುನೀಲ್ ಗವಾಸ್ಕರ್ ನೀಡಿದ್ದ ಬ್ಯಾಟ್ ಬಳಸಿದ್ದರು.
6. 1992 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂತರಾಷ್ಟ್ರೀಯ ಪಂದ್ಯದಲ್ಲಿ ಮೂರನೇ ಅಂಪೈರ್ ತೀರ್ಪಿನಿಂದ ಔಟ್ ಆದ ಮೊದಲ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್.
7. ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್‍ಗಳನ್ನು ಕಲೆಹಾಕಿದ ಮೊದಲ ಆಟಗಾರ. 2001ರಲ್ಲಿ ತೆಂಡೂಲ್ಕರ್ ತಮ್ಮ 266ನೇ ಪಂದ್ಯದಲ್ಲಿ ಈ ದಾಖಲೆಯನ್ನು ನಿರ್ಮಾಣ ಮಾಡಿದ್ದರು.
8. ಭಾರತೀಯ ವಾಯುಪಡೆಯ ಹಿನ್ನೆಲೆ ಇಲ್ಲದೇ ಗ್ರೂಪ್ ಕ್ಯಾಪ್ಟನ್ ಶ್ರೇಣಿ ಗೌರವ ಪಡೆದ ಮೊದಲ ಆಟಗಾರ ಹಾಗೂ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಪಡೆದ ಮೊದಲ ಕ್ರೀಡಾಪಟು.
9. ದೆಹಲಿಯ ತಿಹಾರ್ ಜೈಲಿನ ವಾರ್ಡ್ ಒಂದಕ್ಕೆ ಸಚಿನ್ ಅವರ ಹೆಸರನ್ನು ಇಡಲಾಗಿದೆ. ಇದೇ ಜೈಲಿನ ಇನ್ನೊಂದು ವಾರ್ಡ್ ಗೆ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಹೆಸರನ್ನು ಇಡಲಾಗಿದೆ. ಸಚಿನ್ ಮತ್ತು ವಿನೋದ್ ಕಾಂಬ್ಳಿ ಇಬ್ಬರು ಆಟಗಾರರು ಶಾಲೆಯ ಮ್ಯಾಚ್ ಒಂದರಲ್ಲಿ ಪಾರ್ಟನರ್ ಶಿಪ್ ನಲ್ಲಿ ದಾಖಲೆಯ 664 ರನ್ ಕಲೆಹಾಕಿದ್ದರು.
10. ಸಚಿನ್ ಅವರು ನನ್ನ ಕನಸಿನಲ್ಲಿ ಬಂದು ಗ್ರೌಂಡ್‍ನಲ್ಲಿ ಸಿಕ್ಸ್ ಹೊಡೆದು ಬೆಚ್ಚಿ ಬೀಳಿಸಿದ್ದರು. ಇನ್ನೊಂದು ಸಿಕ್ಸ್ ಹೊಡೆಯುತ್ತೇನೆ ಎಂದು ಮೈದಾನದಲ್ಲಿ ಡ್ಯಾನ್ಸ್ ಮಾಡಿ ನನ್ನನ್ನು ಕನಸಿನಲ್ಲಿ ಬೆಚ್ಚಿ ಬೀಳಿಸಿದ್ದರು ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಹೇಳಿದ್ದರು.
Thank you for all your lovely wishes!! See you on #100MB in a few minutes. pic.twitter.com/xFIUcnZwCN
— sachin tendulkar (@sachin_rt) April 24, 2017
Dear Master. Wishing you a very Happy Birthday.May God bless you & give U good health & long life.Have a wonderful day. Regards. Kamblya pic.twitter.com/3slJQwov5Q
— VINOD KAMBLI (@vinodkambli349) April 24, 2017
A rare occasion when one could have committed a crime,God ji sleeping.To a man who could stop time in India, #HappyBirthdaySachin @sachin_rt pic.twitter.com/CfPtEKbtSZ
— Virender Sehwag (@virendersehwag) April 24, 2017
He won over a billion hearts ????. Let's gift @sachin_rt over a billion wishes on his birthday. ????????#HappyBirthdaySachin #CricketMeriJaan pic.twitter.com/CaXXEozz0B
— Mumbai Indians (@mipaltan) April 23, 2017
Here's wishing @sachin_rt a very happy birthday #HappyBirthdaySachin pic.twitter.com/5LQ3Z53LBB
— BCCI (@BCCI) April 24, 2017
Most Test runs ever ✔️
Most ODI runs ever ✔️
Legend of the game ✔️
Happy Birthday to the Little Master, @sachin_rt! pic.twitter.com/goyGFWDBAv
— ICC (@ICC) April 24, 2017