ಮುಂಬೈ: ಇಂಡೋ ವಿಂಡೀಸ್ ಸಿಮೀತ ಓವರ್ ಗಳ ಸರಣಿ ಅ.21 ರಿಂದ ಆರಂಭವಾಗಲಿದ್ದು, ಇದೇ ವೇಳೆ ವೆಸ್ಟ್ ಇಂಡೀಸ್ ಮಾಜಿ ಆಟಗಾರ ಬ್ರಿಯಾನ್ ಲಾರಾ, ಸಚಿನ್ ಅವರ ಮನೆಗೆ ಭೇಟಿ ನೀಡಿ ಸಪ್ರೈಸ್ ನೀಡಿದ್ದಾರೆ.
ಈ ಕುರಿತು ಇಬ್ಬರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿನ್, ವಾರಾಂತ್ಯವನ್ನು ಸ್ವಾಗತಿಸುವ ಬಹುದೊಡ್ಡ ದಾರಿ. ಒಳ್ಳೆಯ ಸ್ನೇಹಿತ ಲಾರಾ ಸಪ್ರೈಸ್ ವಿಸಿಟ್ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
Advertisement
https://www.instagram.com/p/BpGn68-B-8b/?taken-by=sachintendulkar
Advertisement
ವಿಶ್ವ ಕ್ರಿಕೆಟ್ ದಿಗ್ಗಜರು ಎಂದೇ ಗುರುತಿಸಿಕೊಂಡಿರುವ ಇಬ್ಬರು ಆಟಗಾರರು ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿದ ಬಹು ವರ್ಷಗಳ ಬಳಿಕವೂ ತಮ್ಮ ಸ್ನೇಹವನ್ನು ಮುಂದುವರಿಸಿದ್ದು, ಗುವಾಹತಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಇಬ್ಬರು ಭೇಟಿ ಮಾಡಿದ್ದಾರೆ.
Advertisement
ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಹಲವು ವರ್ಷಗಳು ಕಳೆದರೂ ಕೂಡ ಇಬ್ಬರು ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನ ಹೊಂದಿದ್ದಾರೆ. ಸಚಿನ್ 34,357 ರನ್, 100 ಶತಕಗಳ ದಾಖಲೆ ಹೊಂದಿದ್ದರೆ, ಲಾರಾ 22,358 ರನ್ ಗಳಿಸಿ ಟೆಸ್ಟ್ ಕ್ರಿಕೆಟ್‍ನಲ್ಲಿ 400 ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.
Advertisement
ವಿಶೇಷ ಎಂಬಂತೆ ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಪೃಥ್ವಿ ಶಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದು, ಈ ವೇಳೆ ಪ್ರತಿಕ್ರಿಯೆ ನೀಡಿದ್ದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಪೃಥ್ವಿ ಶಾ ಕ್ರಿಕೆಟ್ ದಿಗ್ಗಜರಾದ ಸಚಿನ್ ಹಾಗೂ ಲಾರಾರ ಸಮ್ಮಿಲನ ರೂಪ ಎಂದು ವಿಶ್ಲೇಷಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಲಾರಾ, ರವಿಶಾಸ್ತ್ರಿ ಅವರ ಹೇಳಿಕೆಯನ್ನು ನಿರಾಕರಿಸಿ, ಪೃಥ್ವಿ ಶಾ ಎಡಗೈ ಆಟಗಾರರಾಗಿದ್ದು, ಸಚಿನ್ ಹಾಗೂ ಸೆಹ್ವಾಗ್ ರ ಸಮ್ಮಿಲನ. ನಾನು 18 ವರ್ಷ ವಯಸ್ಸಿನಲ್ಲಿ ಇಷ್ಟು ಬಲಶಾಲಿಯಾಗಿ ಇರಲಿಲ್ಲ ಎಂದು ಹೊಗಳಿಕೆ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.instagram.com/p/BpEuQsVBsaX/?taken-by=sachintendulkar