– ಬೀದರ್ ಗುತ್ತಿಗೆದಾರರ ಸಂಘದಿಂದ ಸ್ಪಷ್ಟನೆ
– ಪ್ರಭಾವಿಗಳ ಕೈವಾಡವಿದೆ ಎಂದ ಸಹೋದರಿ
ಬೀದರ್/ಕಲಬುರಗಿ/ ಬೆಂಗಳೂರು: ಸರ್ಕಾರಕ್ಕೆ ತಲೆಬಿಸಿ ಉಂಟು ಮಾಡಿರುವ ಸಚಿನ್ ಪಂಚಾಳ್ (Sachin Panchal) ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಸಲಿಗೆ ಸಚಿನ್ ಪಂಚಾಳ್ ಗುತ್ತಿಗೆದಾರನೇ (Contractor) ಅಲ್ಲ ಎಂಬ ಮಾಹಿತಿಯನ್ನು ಗುತ್ತಿಗೆದಾರರ ಸಂಘದ ಬೀದರ್ ಘಟಕ ಹಂಚಿಕೊಂಡಿದೆ.
Advertisement
ಇದಕ್ಕೆ ಪೂರಕವಾಗಿ ಸಚಿನ್ ಪಂಚಾಳ ಕುಟುಂಬ ಸಹ, ಸಚಿನ್ ಗುತ್ತಿಗೆದಾರ ಎಂದು ನಾವು ಹೇಳಿಲ್ಲ ಎಂದಿದೆ.ಆದರೆ ಸಚಿನ್ ಅವರ ಕಲಬುರಗಿ ಕಚೇರಿಯಿಂದ ಎಲ್ಲಾ ದಾಖಲೆಗಳು ಕಳುವಾಗಿವೆ.ಈ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿದೆ ಹೀಗಾಗಿ ಸಚಿನ್ ಪ್ರಕರಣವನ್ನು ಸರ್ಕಾರ ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕೆಲಸ ಮಾಡ್ತಿದೆ ಎಂದು ಸಚಿನ್ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿ 6 ಮಂದಿ ವಿರುದ್ಧ ಎಫ್‍ಐಆರ್
Advertisement
ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಲೆದಂಡಕ್ಕೆ ಆಗ್ರಹಿಸಿ ಕಲಬುರಗಿಯಲ್ಲಿ ವಿಶ್ವಕರ್ಮ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿತು. ಆದರೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸ್ಪಷ್ಟಪಡಿಸಿದ್ದಾರೆ.
Advertisement
ಪ್ರಿಯಾಂಕ್ ರಾಜೀನಾಮೆ ಕೇಳುವ ಧೈರ್ಯ ನಿಮಗಿಲ್ಲ ಎಂದು ಚಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ. ಸಿಎಂ ತಾಕತ್‌ಗೆ ಸವಾಲ್ ಹಾಕಿದ್ದಾರೆ.
Advertisement
ಸಚಿನ್ ಕೇಸಲ್ಲಿ ಸುಪಾರಿ ಕಿಲ್ಲರ್ ವಿಷಯದ ಜೊತೆ ಹನಿಟ್ರ್ಯಾಪ್ ವಿಚಾರವೂ ಇದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಚಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.