ಲಕ್ನೋ: ಪ್ರಧಾನಿ ನರೇಂದ್ರ ಮೋದಿಯವರ ಸಬ್ಕಾ ಸಾಥ್, ಸಬ್ಕಾ ವಿಕಾಸ್ ನೀತಿಯು ಗುರು ರವಿದಾಸ್ ಅವರ ಬೋಧನೆಗಳಿಂದ ಪ್ರೇರಿತವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Advertisement
ಯೋಗಿ ಆದಿತ್ಯನಾಥ್ ಅವರು ಬೆಳಿಗ್ಗೆ ಸೀರ್ ಗೋವರ್ಧನ ಆವರಣದಲ್ಲಿರುವ ರವಿದಾಸ್ ದೇವಸ್ಥಾನಕ್ಕೆ ಭೇಟಿ ನೀಡಿ 15-16ನೇ ಶತಮಾನದ ಕವಿಗೆ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಇಂದು ಮಾಘ ಪೂರ್ಣಿಮಾ ಮತ್ತು ಪುಣ್ಯಭೂಮಿಯಾದ ಕಾಶಿಯಲ್ಲಿ ಶ್ರೀ ಗೋವರ್ಧನದಲ್ಲಿ ಜನಿಸಿದ ಗುರು ರವಿದಾಸ್ ಅವರ ಜನ್ಮದಿನವಾಗಿದೆ. ಇಂದು ಲಕ್ಷಾಂತರ ಜನರು ಸದ್ಗುರುವಿಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
Advertisement
रैदास कहै जाकै हदै, रहे रैन दिन राम।
सो भगता भगवंत सम, क्रोध न व्यापै काम।। pic.twitter.com/deFAZXuLsk
— Yogi Adityanath (@myogiadityanath) February 16, 2022
Advertisement
ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಾವೆಲ್ಲರೂ ಸಬ್ಕಾ ಸಾಥ್, ಸಬ್ಕಾ ವಿಕಾಸ್ ನೀತಿಯನ್ನು ಮುನ್ನಡೆಸುತ್ತಿದ್ದೇವೆ. ಇದು ಸಂತ ರವಿದಾಸ್ ಅವರ ಬೋಧನೆಗಳಿಂದ ಪ್ರೇರಿತವಾಗಿದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿಯು ದಿ.ರಾಜೀವ್ ಗಾಂಧಿ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ? – ಅಸ್ಸಾಂ ಸಿಎಂ ವಿರುದ್ಧ ಪ್ರಕರಣ
Advertisement
प्रेम, एकता, सौहार्द और सामाजिक समरसता जैसे मानवीय मूल्यों एवं विचारों के आलोक से मानव समाज को दीप्त करने वाले संत शिरोमणि गुरु रविदास जी की जन्मस्थली ‘सीर गोवर्धन’ में आयोजित लंगर में प्रसाद ग्रहण करने का सौभाग्य मिला… pic.twitter.com/xlppm2rpEh
— Yogi Adityanath (@myogiadityanath) February 16, 2022
ಕಾರ್ಯಕ್ರಮದ ಪುಟ್ಟ ವೀಡಿಯೋವನ್ನು ಯೋಗಿ ಆದಿತ್ಯನಾಥ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ಪ್ರೀತಿ, ಏಕತೆ, ಸೌಹಾರ್ದತೆ ಮತ್ತು ಸಾಮಾಜಿಕ ಸೌಹಾರ್ದತೆಯಂತಹ ಮಾನವೀಯ ಮೌಲ್ಯಗಳು ಮತ್ತು ಚಿಂತನೆಗಳ ಬೆಳಕಿನಲ್ಲಿ ಮಾನವ ಸಮಾಜವನ್ನು ಬೆಳಗಿದ ಸಂತ ಶಿರೋಮಣಿ ಗುರು ರವಿದಾಸ್ ಅವರ ಜನ್ಮಸ್ಥಳವಾದ ಸೀರ್ ಗೋವರ್ಧನ ಲಂಗರ್‍ನಲ್ಲಿ ಪ್ರಸಾದ ಸ್ವೀಕರಿಸುವ ಸೌಭಾಗ್ಯ ಸಿಕ್ಕಿದೆ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಪ್ಪಿ ಲಹರಿ ಧರಿಸುತ್ತಿದ್ದ ಚಿನ್ನಾಭರಣ ಎಷ್ಟು?