ಇಂದಿನಿಂದ ಶಬರಿಮಲೆ ಯಾತ್ರೆ ಆರಂಭ – 2 ಡೋಸ್ ಲಸಿಕೆ ಕಡ್ಡಾಯ

Public TV
1 Min Read
sabarimala rain

ತಿರುವನಂತಪುರಂ: ಇಂದಿನಿಂದ ಶಬರಿಮಲೆ ಯಾತ್ರೆ ಆರಂಭವಾಗಲಿದ್ದು, ಮಾಲಾಧಾರಿಗಳು 2 ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ.

ಎರಡು ತಿಂಗಳ ಕಾಲ ನಡೆಯುವ ಮಂಡಲ-ಮಕರವಿಳಕ್ಕು(ಮಕರ ಸಂಕ್ರಾಂತಿ)ಗಾಗಿ ಶಬರಿಮಲೆ ಬೆಟ್ಟದ ದೇಗುಲವನ್ನು ಸೋಮವಾರ ಸಂಜೆ ತೆರೆಯಲಾಗುವುದು ಮತ್ತು ಮಂಗಳವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಂಡಲಾಗುತ್ತೆ. ಇದನ್ನೂ ಓದಿ: ನಾಳೆ 3 ಗಂಟೆಗೆ ಅರಮನೆ ಮೈದಾನದಲ್ಲಿ ಪುನೀತ ನಮನ- 1,500 ಮಂದಿಗೆ ಮಾತ್ರ ಅವಕಾಶ

sabarimala ayyappa temple

ಮಂಡಲಪೂಜೆಗಾಗಿ ದೇವಸ್ಥಾನವನ್ನು ಡಿಸೆಂಬರ್ 26 ರವರೆಗೆ ತೆರೆದಿದ್ದು, ಮಕರವಿಳಕ್ಕು ಉತ್ಸವಕ್ಕಾಗಿ ಜನವರಿ 20 ರವರೆಗೆ ಭಕ್ತರಿಗೆ ದೇವಾಲಯದ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ನವೆಂಬರ್ 16 ರಂದು ಪಾದಯಾತ್ರೆ ಆರಂಭವಾಗಲಿದ್ದು, ಸೋಮವಾರ ಸಂಜೆ 5 ಗಂಟೆಗೆ ಪ್ರಧಾನ ಅರ್ಚಕ ಕಂದರಾರು ಮಹೇಶ್ ಮೋಹನರಾರು ಅವರ ಉಪಸ್ಥಿತಿಯಲ್ಲಿ ನಿರ್ಗಮಿತ ಅರ್ಚಕ ವಿ.ಕೆ.ಜಯರಾಜ್ ಪೊಟ್ಟಿ ಅವರು ದೇವಾಲಯದ ಗರ್ಭಗುಡಿಯನ್ನು ತೆರೆಯಲಿದ್ದಾರೆ.

sabarimala 1

ಕೋವಿಡ್-19 ಪ್ರೋಟೋಕಾಲ್‍ಗೆ ಬದ್ಧವಾಗಿ ತೀರ್ಥಯಾತ್ರೆ ನಡೆಯಲಿದೆ. ದೇಗುಲಕ್ಕೆ ಭೇಟಿ ನೀಡುವ 72 ಗಂಟೆಗಳ ಒಳಗೆ ಕೋವಿಡ್-19 ಲಸಿಕೆಯ ಎರಡು ಡೋಸ್ ಕಡ್ಡಾಯವಾಗಿದೆ. ಭಕ್ತರು ಅವರ ಮೂಲ ಆಧಾರ್ ಕಾರ್ಡ್‍ಗಳನ್ನು ಸಹ ನೀಡಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದ್ಕೊಂಡಿದ್ದೇನೆ: ರಾಘವೇಂದ್ರ ರಾಜ್‍ಕುಮಾರ್

CORONA 3

ಈ ಬಾರಿ ಶಬರಿಮಲೆ ಯಾತ್ರೆಗೆ ಪ್ರತಿ ದಿನ ತಲಾ 25 ಸಾವಿರ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಒಟ್ಟಾರೆ 15.25 ಲಕ್ಷ ಭಕ್ತರಿಗೆ ಮಣಿಕಂಠನ ದರ್ಶನ ಭಾಗ್ಯ ದೊರಕಲಿದೆ. ಈ ಬಾರಿ ಲಕ್ಷಾಂತರ ಭಕ್ತರು ಯಾತ್ರೆ ಕೈಗೊಳ್ಳಲು ಮುಂಚಿತವಾಗಿಯೇ ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಮಾಡಿಕೊಂಡಿದ್ದಾರೆ.

Share This Article