ರಾಯಚೂರು: ರಾಯರ 351ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಂತ್ರಾಲಯದಲ್ಲಿ ಇಂದು ಉತ್ತರಾಧನೆ ನಡೆಯುತ್ತಿದೆ. ಈ ಹಿನ್ನೆಲೆ ಮಂಚಾಲಮ್ಮ ದೇವಿ ದರ್ಶನ ಪಡೆದು ದೇವಿಗೆ ಆರತಿ ಬೆಳಗಿ ಕೈಮುಗಿದ ಸಾಲು ಮರದ ತಿಮ್ಮಕ್ಕ ಬಳಿಕ ರಾಯರ ದರ್ಶನ ಪಡೆದರು.
Advertisement
ರಾಯರ ದರ್ಶನದ ಬಳಿಕ ಮಾತನಾಡಿದ ಸಾಲು ಮರದ ತಿಮ್ಮಕ್ಕ, ರಾಘವೇಂದ್ರ ಸ್ವಾಮಿಗಳ ಆರಾಧನೆ ಅದ್ಧೂರಿಯಾಗಿ ನಡೆಯುತ್ತಿದೆ. ನೀವೇನೇ ಕೇಳಿಕೊಂಡರೂ ರಾಘವೇಂದ್ರ ಸ್ವಾಮಿ ಎಲ್ಲ ಒಳ್ಳೆಯದು ಮಾಡುತ್ತಾನೆ. ಗಿಡ ಬೆಳೆಸಿ, ಅವರ ಆಶೀರ್ವಾದದಿಂದ ಗಿಡ ಮರಗಳು ಬೆಳೆಯಲಿ ಎಂದರು. ಇದನ್ನೂ ಓದಿ: ಹರ್‌ಘರ್ ತಿರಂಗ ಅಭಿಯಾನ – ಮಕ್ಕಳಿಗೆ ರಾಷ್ಟ್ರಧ್ವಜ ಹಂಚಿ ಸಂತಸಗೊಂಡ ಮೋದಿ ತಾಯಿ
Advertisement
Advertisement
ಮರ, ಗಿಡಗಳನ್ನು ಯಾರೂ ಮುರಿಯಬೇಡಿ, ಕಡಿಬೇಡಿ. ನೀವು ಆಸೆ ಪಟ್ಟು ಮರಗಳನ್ನು ಬೆಳೆಸಿ. ಪರಮಾತ್ಮ, ರಾಘವೇಂದ್ರ ಸ್ವಾಮಿ ಆಶೀರ್ವಾದ ಪಡೆದುಕೊಳ್ಳಿ. ರಾಘವೇಂದ್ರ ಸ್ವಾಮಿ ಮರಗಳನ್ನು ಬೆಳೆಸುವ ಒಳ್ಳೆ ಬುದ್ದಿ ಎಲ್ಲರಿಗೂ ಕೊಡಲಿ ಎಂದು ಹಾರೈಸಿದರು. ಇದನ್ನೂ ಓದಿ: ಕಳೆಗಟ್ಟಿದ ಸಾಂಸ್ಕೃತಿಕ ನಗರಿ ಮೈಸೂರು- ಇಂದಿನಿಂದ ದಸರಾ ಆನೆಗಳಿಗೆ ತಾಲೀಮು