Connect with us

Cinema

ಪ್ರಭಾಸ್ ಹುಟ್ಟುಹಬ್ಬಕ್ಕೆ ‘ಸಾಹೋ’ದಿಂದ ಗಿಫ್ಟ್

Published

on

ಮುಂಬೈ: ಬಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ನಟಿ ಶ್ರದ್ಧ ಕಪೂರ್ ಜೊತೆ ಜೋಡಿಯಾಗಿ ನಟಿಸುತ್ತಿರುವ `ಸಾಹೋ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ.

ನಟ ಪ್ರಭಾಸ್ `ಬಾಹುಬಲಿ’ ಸಿನಿಮಾದಿಂದ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದು ಯುತ್ ಐಕಾನ್ ಆಗಿದ್ದಾರೆ. ಇವರ ಮುಂದಿನ ಸಿನಿಮಾ ಸಾಹೋಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಸಾಹೋ ಸಿನಿಮಾ ತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಉಡುಗೊರೆ ನೀಡಿದೆ.

ಬಾಹುಬಲಿಯಲ್ಲಿ ಪ್ರಭಾಸ್ ಒಬ್ಬ ರಾಜನಾಗಿ ಕಾಣಿಸಿಕೊಂಡಿದ್ದರು. ಆದರೆ ಈಗ ಸಾಹೋ ಸಿನಿಮಾದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಪ್ಪು ಬಣ್ಣದ ಕೋರ್ಟ್, ಪ್ಯಾಂಟ್ ಹಾಕಿಕೊಂಡು ಮುಖವನ್ನು ಕಪ್ಪು ಬಣ್ಣದ ಬಟ್ಟೆಯಿಂದ ಕಟ್ಟಿಕೊಂಡು ಖಡಕ್ ಲುಕ್‍ನಲ್ಲಿ ಕಾಣಿಕೊಂಡಿದ್ದಾರೆ. ಅವರ ಲುಕ್‍ನಿಂದಲೇ ಅಭಿಮಾನಿಗಳನ್ನು ಸೆಳೆಯುವಂತಿದೆ. ಸಾಹೋ ಸಿನಿಮಾದಲ್ಲಿ ನಟ ಪ್ರಭಾಸ್ ಪಾತ್ರದ ಸುತ್ತಾ ಒಂದು ನಿಗೂಢತೆ ಇರಬಹುದು ಎಂದು ತಿಳಿಯುತ್ತದೆ.

ಕಳೆದ ಆಗಸ್ಟ್‍ನಲ್ಲಿ ಸಾಹೋ ಸಿನಿಮಾದ ಟೀಸರ್ ಬಿಡುಗಡೆಗೊಂಡಿತ್ತು. ಸಾಹೋ ಸಿನಿಮಾ ಸುಜೀತ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಸುಮಾರು 150 ಕೋಟಿ ರೂ. ಬಜೆಟ್‍ನಲ್ಲಿ ಸಿದ್ಧವಾಗುತ್ತಿದೆ. ವಂಶಿ ಕೃಷ್ಣ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಶಂಕರ್-ಇಹಾಸನ್-ಲಾಯ್ ಸಂಗೀತವಿದೆ. ಸಾಹೋ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ.

ಈ ಸಿನಿಮಾದಲ್ಲಿ ಶ್ರದ್ಧ ಕಪೂರ್, ಮಂದಿರಾ ಬೇಡಿ, ನೀಲ್ ನಿತಿನ್ ಮುಖೇಶ್, ಅರುಣ್ ವಿಜಯ್ ಮತ್ತು ತಿನು ಆನಂದ್ ಅಭಿನಯಿಸುತ್ತಿದ್ದಾರೆ. ಸಾಹೋ ಸಿನಿಮಾ ಮುಂದಿನ ವರ್ಷ 2018 ಗೆ ತೆರೆಗೆ ಬರುವ ನಿರೀಕ್ಷೆಯಲ್ಲಿದೆ.

Click to comment

Leave a Reply

Your email address will not be published. Required fields are marked *