ಕೇಪ್‌ಟೌನ್: ದಕ್ಷಿಣ ಆಫ್ರಿಕಾದ (South Africa) ಆಲ್‌ರೌಂಡರ್ ಡ್ವೈನ್ ಪ್ರಿಟೋರಿಯಸ್ (Dwaine Pretorius) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ವಿದಾಯ ಹೇಳಿದ್ದಾರೆ.
ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಂಡಳಿ (CSA) ಪ್ರಿಟೋರಿಯಸ್ ನಿವೃತ್ತಿ ನಿರ್ಧಾರವನ್ನು ಖಚಿತ ಪಡಿಸಿದೆ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (Cricket) ಪಾದಾರ್ಪಣೆ ಮಾಡಿದ 31 ವರ್ಷ ವಯಸ್ಸಿನ ಪ್ರಿಟೋರಿಯಸ್, ಈ ವರೆಗೆ 30 ಅಂತಾರಾಷ್ಟ್ರೀಯ ಟಿ20, 27 ಏಕದಿನ ಪಂದ್ಯಗಳು ಹಾಗೂ ಮೂರು ಟೆಸ್ಟ್ ಸರಣಿಗಳಲ್ಲಿ ಪ್ರತಿನಿಧಿಸಿದ್ದಾರೆ. ಎರಡು ವಿಶ್ವಕಪ್‌ಗಳಲ್ಲಿ (World Cup) ತಮ್ಮ ಸಾಮರ್ಥ್ಯ ತೋರಿದ್ದಾರೆ. ಇದನ್ನೂ ಓದಿ: ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಜೊತೆ ಸುತ್ತುತ್ತಿದ್ರು: ಬಾಲಕೃಷ್ಣ ಬಾಂಬ್
Advertisement
Advertisement
ಪ್ರಿಟೋರಿಯಸ್ T20 ಅಖಾಡದಲ್ಲಿ ಪ್ರಭಾವ ಬೀರಿದ್ದರು. 2021ರಲ್ಲಿ ಪಾಕಿಸ್ತಾನ (Pakistan) ವಿರುದ್ಧ ನಡೆದ ಟಿ20 ಪಂದ್ಯದಲ್ಲಿ 17 ರನ್‌ಗಳಿಗೆ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ದಕ್ಷಿಣ ಆಫ್ರಿಕಾ ಬೌಲರ್‌ಗಳಲ್ಲೇ ಅತ್ಯುತ್ತಮ ದಾಖಲೆ ಬರೆದಿದ್ದರು. ಇದನ್ನೂ ಓದಿ: ಪುರಭವನದಲ್ಲಿ ಭಾರೀ ಹೈಡ್ರಾಮಾ – ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು
Advertisement
Advertisement
ಈ ಕುರಿತು ಮಾತನಾಡಿರುವ ಪ್ರಿಟೋರಿಯಸ್, ಕೆಲ ದಿನಗಳ ಹಿಂದೆ ನಾನು ನನ್ನ ಕ್ರಿಕೆಟ್ ವೃತ್ತಿ ಬದುಕಿನ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದೆ. ನಾನು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k