36 ಸಾವಿರ ಮತದಿಂದ ಸೋತವರು ಮೋದಿ ಬಗ್ಗೆ ಮಾತಾಡ್ತಾರೆ: ಸಿದ್ದುಗೆ ವಿಶ್ವನಾಥ್ ಟಾಂಗ್

Public TV
1 Min Read
h vishwanath

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಸಿದ್ದರಾಮಯ್ಯ ಸ್ಟೈಲ್‌ನಲ್ಲೇ ಆಕ್ಷನ್ ಮಾಡಿ ಹೆಸರು ಹೇಳದೇ ವಾಗ್ದಾಳಿ ನಡೆಸಿದ ಪ್ರಸಂಗವಾಗಿದೆ.

ಬಜೆಟ್ ಸಂದರ್ಭ ಚರ್ಚೆ ನಡೆಯುತ್ತಿದ್ದಾಗ ಮಾತನಾಡಿದ ಹೆಚ್ ವಿಶ್ವನಾಥ್ ಹೆಸರು ಹೇಳದೇ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು ಹಾಗೂ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಸಮರ್ಥನೆ ನೀಡಿದರು. ಇದನ್ನೂ ಓದಿ: ಬಜೆಟ್‍ನಲ್ಲಿ ಮನೆ ನಿರ್ಮಾಣದ ಸುಳ್ಳು ಲೆಕ್ಕ – ಸಿದ್ದುಗೆ ರಾಜೀವ್ ಸವಾಲ್

siddaramaiah

ಇವತ್ತು ನಾವು ರಾಜಕಾರಣಿಗಳು ವೋಟಿನ ಜನ ಆಗಿದ್ದೇವೆ. ಇನ್ನೊಂದು ಸಾರಿ ಸಿಎಂ ಮಾಡಿ 10 ಕೆಜಿ ಅಕ್ಕಿ ಕೊಡ್ತೀನಿ ಅಂತಾರೆ. ಇದೇನಾ ನಿಮ್ಮ ಕನಸು? ರಾಜ್ಯದ ಅಭಿವೃದ್ಧಿ ಮಾಡುತ್ತೇನೆ ಅನ್ನೋದಿಲ್ಲ ಯಾಕೆ ಎಂದು ಸಿದ್ದರಾಮಯ್ಯ ತರಹ ಸೊಂಟದ ಮೇಲೆ ಕೈ ಇಟ್ಟು ಆಕ್ಷನ್ ಮಾಡಿ ಮಾತಾನಾಡಿದರು.

ಕನ್ನಡ ಭಾಷೆಯನ್ನು ಇಂದು ಕೊಂದು ಹಾಕಿದ್ದಾರೆ. ಧಮ್ ಇದೆಯಾ, ಟಗರು ಗುಮ್ಮುತ್ತೆ ಎನ್ನುತ್ತಾರೆ. ಇದು ಭಾಷೆನಾ? ಏಯ್.. ಮೋದಿ ಯೂಸ್ ಲೆಸ್ ಅಂತಾರೆ. ಒಬ್ಬ ಚುನಾಯಿತ ಪ್ರಧಾನಿಗೆ ಕೊಡುವ ಗೌರವ ಇದೆನಾ? ಯಾರು ಮೋದಿ ಎಂದರೆ, ಅವರು 3 ಬಾರಿ ಸಿಎಂ ಆದವರು. ಒಂದು ಬಾರಿ ಸಿಎಂ ಆಗಿ 36,000 ವೋಟ್‌ನಿಂದ ಸೋತವರು 3 ಬಾರಿ ಗೆದ್ದವರ ಬಗ್ಗೆ ಮಾತಾಡುತ್ತಾರೆ ಎಂದು ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋಲು ಪ್ರಸ್ತಾಪಿಸಿ ಕಾಲೆಳೆದರು. ಇದನ್ನೂ ಓದಿ: ಹಿಜಬ್‌- ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿ

parishat

ಮೋದಿ 2 ಬಾರಿ ಪ್ರಧಾನಿ, 3 ಬಾರಿ ಸಿಎಂ ಆದವರು. ಪ್ರಧಾನಿಯಾಗಿ ಯಾವತ್ತೂ ಅವರು ಹಿಂದುತ್ವದ ಬಗ್ಗೆ ಮಾತಾಡಿಲ್ಲ. ಅವರು 2 ಕೋಟಿ ಮುಸ್ಲಿಂ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದಾರೆ. ಇಂತಹ ದೇಶದ ಪ್ರಧಾನಿಗೆ ಗೌರವ ಕೊಡಿ ಎಂದು ಮೋದಿಯನ್ನು ಹೊಗಳಿ ಹೆಸರು ಹೇಳದೆ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದರು.

Share This Article