ಬೆಳಗಾವಿ: ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ವಾಪಸ್ ಇಲ್ಲ ಎಂದು ಸಹಕಾರ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
Advertisement
ಎಪಿಎಂಸಿ ಕಾಯ್ದೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕಾಯ್ದೆಯಿಂದ ರೈತರಿಗೆ ಯಾವುದೇ ಅನಾನುಕೂಲ ಇಲ್ಲ. ರೈತರು ಎಲ್ಲಿ ಬೇಕಾದ್ರು ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಲು ಈ ಕಾಯ್ದೆಯಲ್ಲಿ ಅವಕಾಶ ಇರುತ್ತೆ. ಇದರಿಂದ ರೈತನಿಗೆ ಅನುಕೂಲ ಆಗುತ್ತೆ. ಈ ಮೊದಲು ಎಪಿಎಂಸಿ ಬಿಟ್ಟು ಹೊರಗೆ ಮಾರಾಟ ಮಾಡಿದ್ರೆ ದಂಡ, ಜೈಲು ಶಿಕ್ಷೆ ಇತ್ತು. ಈಗ ಹೊಸ ಕಾಯ್ದೆಯಲ್ಲಿ ಅದನ್ನ ತೆಗೆಯಲಾಗಿದೆ ಎಂದು ತಿಳಿಸಿದರು.
Advertisement
Advertisement
ಕರ್ನಾಟಕದಲ್ಲಿ ರೈತ ತಾನು ಬೆಳೆದ ಬೆಳೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದರಿಂದ ರೈತರಿಗೆ ಯಾವುದೇ ಧಕ್ಕೆ ಆಗೊಲ್ಲ. ಹೀಗಾಗಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯೊಲ್ಲ. ಎಪಿಎಂಸಿಗಳನ್ನ ಯಾವುದೇ ಕಾರಣಕ್ಕೂ ಮುಚ್ಚೋದಿಲ್ಲ. ಎಪಿಎಂಸಿ ಲಾಭದಲ್ಲಿ ನಡೆಯುತ್ತಿದೆ. ಲಾಭದಿಂದ ನಡೆಯೋ ಸಂಸ್ಥೆಯನ್ನ ಯಾಕೆ ಮುಚ್ಚೋಣ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು
Advertisement
ಕಾಂಗ್ರೆಸ್ ನಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೋ ವಿಚಾರವಾಗಿ ಮಾತನಾಡಿದ ಅವರು, 7-8 ವರ್ಷಗಳಿಂದ ನಾವು ಅಧಿವೇಶನ ನೋಡುತ್ತಿದ್ದೇನೆ. ವಿರೋಧ ಪಕ್ಷದವರು ಇರೋದು ವಿರೋಧ ಮಾಡೋಕೆ. ವಿರೋಧ ಮಾಡೋದು ಬಿಟ್ಟು ಸಾರ್ವಜನಿಕ ಕುಂದು ಕೊರತೆ ಸರ್ಕಾರದ ಗಮನಕ್ಕೆ ತಂದು ಅದಕ್ಕೆ ಪರಿಹಾರ ಕೊಡಿಸೋ ಕೆಲಸ ವಿಪಕ್ಷ ಮಾಡಲಿ. ಇತ್ತೀಚೆಗೆ ಅಧಿವೇಶನದಲ್ಲಿ ಸಾರ್ವಜನಿಕ ವಿಷಯಗಳು ಚರ್ಚೆ ಆಗ್ತಿಲ್ಲ. ಈ ಬಗ್ಗೆ ನಾವು ಅರ್ಥ ಮಾಡಿಕೊಂಡು ಚರ್ಚೆ ಮಾಡಬೇಕು. ಬೆಳಗಾವಿ ಅಧಿವೇಶನ ಈ ಭಾಗದ ಸಮಸ್ಯೆ ಪರಿಹಾರಕ್ಕೆ ಮಾಡ್ತಿರೋದು. ಹೀಗಾಗಿ ವಿಪಕ್ಷಗಳು ವಿರೋಧ ಮಾಡೋದು ಬಿಟ್ಟು ಸಾರ್ವಜನಿಕ ವಿಷಯಗಳ ಬಗ್ಗೆ ಚರ್ಚೆ ಮಾಡಲಿ ಎಂದು ತಿರುಗೇಟು ನೀಡಿದರು.
40% ಸರ್ಕಾರ ಎಂಬ ಕಾಂಗ್ರೆಸ್ ಆರೋಪ ಬಗ್ಗೆ ಮಾತನಾಡಿದ ಅವರು, 40% ಸರ್ಕಾರ ಅಂತ ಯಾರು ಸಾಬೀತು ಮಾಡಿದ್ದಾರೆ. ಯಾರ ಕಾಲದಲ್ಲಿ ಎಷ್ಟು ಇತ್ತು ಅಂತ ಎಲ್ಲರಿಗೂ ಗೊತ್ತಿದೆ. ಸುಮ್ಮನೆ ಆರೋಪ ಮಾಡಿದ್ರೆ ಆಗುತ್ತಾ ಸಾಬೀತು ಮಾಡಬೇಕು. ಸುಮ್ಮನೆ ಪ್ರಧಾನಿಗೆ ಪತ್ರ ಬರೆದರೆ ಆಗೊಲ್ಲ. ವಿಪಕ್ಷಗಳು ಏನೇ ಆರೋಪ ಮಾಡಲಿ, ದಾಖಲಾತಿ ಬಿಡುಗಡೆ ಮಾಡಲಿ. ನಾವು ಎಲ್ಲದ್ದಕ್ಕೂ ಸಿದ್ಧರಾಗಿದ್ದೇವೆ. ಕಾಂಗ್ರೆಸ್ ಏನು ಆರೋಪ ಮಾಡಿದ್ರು ಅದಕ್ಕೆ ಉತ್ತರ ಕೊಡೋದು ಸರ್ಕಾರ 100% ಸಿದ್ಧವಾಗಿದೆ. ಸುಮ್ಮನೆ ಆರೋಪ ಮಾಡಿದ್ರೆ ಒಪ್ಪಲು ಸಾಧ್ಯವಿಲ್ಲ. ಚರ್ಚೆ ಮಾಡಲಿ ಸರ್ಕಾರ ಸಮರ್ಥವಾಗಿ ಉತ್ತರ ನೀಡುತ್ತೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪರೀಕ್ಷೆ ಬರೆದು ಬರುತ್ತಿದ್ದ ನಾಲ್ವರು ವಿದ್ಯಾರ್ಥಿಗಳ ಮೇಲೆ ಚಾಕು ಇರಿತ