ಬೆಂಗಳೂರು: ತಪ್ಪು ಮಾಡಿದವರಿಗೆ ಶಿಕ್ಷೆನೇ ಅಂತ್ಯವಲ್ಲ ಎಂದು ಕನ್ನಡದ ಖ್ಯಾತ ನಟ ನಿರ್ದೇಶಕ ಎಸ್ ನಾರಾಯಣ್ ಹೇಳಿದರು.
ಹಣ ವಂಚನೆ ಪ್ರಕರಣದ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ವಂಚನೆ ಸಂಬಂಧ ಕಳೆದ ಎರಡು ವರ್ಷಗಳ ಹಿಂದೆ ದೂರು ಕೊಡಲಾಗಿತ್ತು. ಆರೋಪಿತರು ನ್ಯಾಯಾಲಯದಿಂದ ಜಾಮೀನು ಪಡೆದು ಓಡಾಟ ಆರಂಭಿಸಿದರು. ಮೋಸ ಮಾಡಿದವರ ಜೊತೆ ಕೂತು ಮಾತನಾಡಿದಾಗ ಮೋಸ ಮಾಡಿದ ಹಣ ಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ
Advertisement
Advertisement
ಈಗಾಗಲೇ ಶೇಕಡಾ 25 ಲಕ್ಷ ರೂ. ಹಣವನ್ನು ಕೊಟ್ಟಿದ್ದಾರೆ. ಉಳಿದ ಹಣ ಕೊಡುತ್ತಿದ್ದಾರೆ. ವಂಚಕರು ಇನ್ನುಳಿದ ಹಣವನ್ನು ಕೂಡ ಕೊಡುವ ವಿಶ್ವಾಸವಿದೆ. ಅವರೆಲ್ಲರೂ ನಿರಂತರ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆನೇ ಅಂತ್ಯ ಅಲ್ಲ. ತಪ್ಪು ಆಗಿರುವುದನ್ನು ತಿದ್ದಿಕೊಂಡಾಗ ಅವರಿಗೆ ಒಂದು ಅವಕಾಶ ಕೊಡಬೇಕು. ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಏನಿದು ಪ್ರಕರಣ..?
ಎಸ್. ನಾರಾಯಣ್ ಸೇರಿದಂತೆ ಅಶೋಕ್ ಸೇಠ್, ಫಾರೂಕ್ ಪಾಷಾ, ಅನಂತ್ ಅಯ್ಯಸ್ವಾಮಿ, ರಾಜೇಂದ್ರ ಪ್ರಸಾದ್ ಸೇರಿ ಐವರು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ಸಿನಿಮಾದಲ್ಲಿ ಹಿರಿಯ ನಟ ಅಭಿಜಿತ್ ಕೂಡ ನಟಿಸಿದ್ದು, ಉಳಿದ ನಿರ್ಮಾಪಕರನ್ನು ನಾರಾಯಣ್ ಅವರಿಗೆ ಪರಿಚಯ ಮಾಡಿಸಿದ್ದರು. ಹಣವಿಲ್ಲದೆ ಸಿನಿಮಾ ನಿಂತ ಸಮಯದಲ್ಲಿ ನಾರಾಯಣ್ ಅವರು ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ ಒಂದು ಸೈಟ್ ಮೇಲೆ ಫಾರೂಕ್‍ಗೆ ಸಾಲ ಕೊಡಿಸಿದ್ದರು. ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ
ನಾರಾಯಣ್ ಅವರು ಮಗನ ಹೆಸರಲ್ಲಿ 1ಕೋಟಿ 56 ಲಕ್ಷ ಲೋನ್‍ಗೆ ದಾಖಲೆ ನೀಡಿ ಬಂದ ಹಣವನ್ನು ಸಿನಿಮಾಗೆ ಹಾಕಿದ್ದರು. ಆದರೆ ಫಾರೂಕ್, ನಾರಾಯಣ್ ಅವರಿಗೆ ತಿಳಿಯದಂತೆ ಎರಡು ಕೋಟಿ ಐದು ಲಕ್ಷ ಲೋನ್ ಮಂಜೂರು ಮಾಡಿಸಿ ವಂಚನೆ ಮಾಡಿದ್ದನು. ಜೊತೆಗೆ ಬಿಡಿಎಗೆ ಸಂಬಂಧಿಸಿದ ಸೈಟ್ ಅನ್ನು ನಕಲಿ ದಾಖಲೆ ಸೃಷ್ಟಿಸಿ ಹೆಚ್ಚಿನ ಲೋನ್ ಪಡೆದು ನಿವೇಶನ ಮಾಲೀಕ ಬೈಯ್ಯಣ್ಣ ಎಂಬವರ ಅಕೌಂಟಿಗೆ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿತ್ತು.