– ಪಾಕಿಸ್ತಾನವನ್ನ ನಂಬೋಕೆ ಆಗಲ್ಲ; ಮಾಜಿ ಸಚಿವ
ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿಗೆ (Pahalgam Terrorist Attack) ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು. ಇದಕ್ಕೆ ನಮ್ಮೆಲ್ಲರ ಬೆಂಬಲ ಇದೆ ಅಂತ ಮಾಜಿ ಸಚಿವ ಕಾಂಗ್ರೆಸ್ ನಾಯಕ ಆರ್.ವಿ ದೇಶಪಾಂಡೆ (RV Deshpande) ತಿಳಿಸಿದ್ದಾರೆ.
ಬೆಂಗಳೂರಿನ ಡಿಸಿಎಂ ಡಿಕೆಶಿ ನಿವಾಸದ ಬಳಿ ಭಾರತ-ಪಾಕಿಸ್ತಾನ (India-Pakistan) ನಡುವಿನ ಸಂಘರ್ಷದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕದನ ವಿರಾಮ ಒಪ್ಪಂದ ಆದ ನಂತರ ಪಾಕಿಸ್ತಾನ ಸೇನೆ ಗೊತ್ತಿದ್ದೂ ಉದ್ದೇಶ ಪೂರ್ವಕವಾಗಿ ಭಾರತದ ಮೇಲೆ ಫೈರಿಂಗ್ ಮಾಡಿದೆ. ಕದನ ವಿರಾಮ ಉಲ್ಲಂಘನೆ (Ceasefire Violation) ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನತೆಯಿಂದ ಬಂದ್ ಆಗಿದ್ದ 32 ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭ
ನಮ್ಮ 3 ಸೇನಾಪಡೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ತಕ್ಕ ಉತ್ತರ ಕೊಟ್ಟಿದೆ. ಆದರೂ ಪಾಕಿಸ್ತಾನ ಪ್ರತಿ ಬಾರಿ ಅಧಿಕಪ್ರಸಂಗ ತನ ಮಾಡ್ತಿದೆ. ಮೈಮೇಲೆ ಹಾಕಿಕೊಂಡು ಬೇರೆ ಬೇರೆ ದೇಶದ ಸಹಾಯ ಪಡೆದುಕೊಳ್ತಿದೆ. ಭಾರತ ಸರ್ಕಾರದ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರ ಸರ್ಕಾರದ ನಿರ್ಣಯವನ್ನ ನಾನು ಮೆಚ್ಚುತ್ತೇನೆ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಲಷ್ಕರ್ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನಾಧಿಕಾರಿಗಳು ಭಾಗಿ – ಭಾರತ ತೀವ್ರ ಆಕ್ಷೇಪ
ಮುಂದುವರಿದು… ಪಾಕಿಸ್ತಾನದ ಹೇಳಿಕೆಯನ್ನ ನಂಬೋಕೆ ಆಗೊಲ್ಲ. ಪಹಲ್ಗಾಮ್‌ನಲ್ಲಿ 28 ಜನ ಅಮಾಯಕರನ್ನ ಹತ್ಯೆ ಮಾಡಿದ್ರು. ಆ ಹತ್ಯೆಗೆ ಇನ್ನೂ ಸೇಡು ತೆಗೆದುಕೊಳ್ಳಬೇಕು. ಭಾರತ ಸರ್ಕಾರ, ಸೇನೆ ಉತ್ತಮ ಕೆಲಸ ಮಾಡ್ತಿದ್ದಾರೆ, ಅದನ್ನ ಮೆಚ್ಚಬೇಕು. ಈಗಾಗಲೇ ನಮ್ಮ ಸೇನೆ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದೆ. ನಾವೆಲ್ಲಾ ಭಾರತೀಯರು ಪಕ್ಷಾತೀತವಾಗಿ ಒಗ್ಗಟ್ಟಾಗಿ ಸೇನೆ ಹಿಂದೆ ನಿಲ್ಲಬೇಕು ಎಂದು ಕರೆ ಕೊಟ್ಟರು.
ಇನ್ನೂ 1971ರ ಮಾದರಿಯಲ್ಲಿ ಪಾಕಿಸ್ತಾನವನ್ನ 2 ಭಾಗ ಮಾಡಬೇಕು ಎಂಬ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಂತಹ ಪರಿಸ್ಥಿತಿ ಇಲ್ಲ. ಎರಡು ಭಾಗ ಮಾಡೋ ಸಾಧ್ಯತೆ ಇಲ್ಲ. ಇದೆಲ್ಲ ಸುಳ್ಳು ಸುದ್ದಿ. ಯಾರು ಕಿವಿಗೊಡಬಾರದು ಎಂದು ಹೇಳಿದರು. ಇದನ್ನೂ ಓದಿ: ಭಾರತ-ಪಾಕ್ ʻಕದನ-ವಿರಾಮʼ ಮಾತುಕತೆ – ಇಂದು ಎರಡೂ ದೇಶಗಳ ಡಿಜಿಎಂಒಗಳ ಸಭೆ