ಕೀವ್: ರಷ್ಯಾ- ಉಕ್ರೇನ್ ನಡುವಿನ ಸಂಘರ್ಷಕ್ಕೆ ಇಂದು 5ನೇ ದಿನ. ಕಾರ್ಕಿವ್, ಕೀವ್ ನಗರಗಳನ್ನ ವಶಕ್ಕೆ ಪಡೆಯಲು ರಷ್ಯಾ ಸೇನೆ ತೀವ್ರ ಕಸರತ್ತು ನಡೆಸುತ್ತಿದ್ದು, ರಷ್ಯಾ ಸೇನೆಗೆ, ಉಕ್ರೇನ್ ಸೇನೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಆದರೂ ಪಟ್ಟು ಬಿಡದ ಉಕ್ರೇನ್ ಸೇನೆಯು ರಷ್ಯಾ ಸೈನಿಕರನ್ನು ಸದೆಬಡೆಯುತ್ತಿದೆ. ಈ ಮಧ್ಯೆ ವಿದ್ಯಾಭ್ಯಾಸಕ್ಕೆ ತೆರಳಿದ ವಿದ್ಯಾರ್ಥಿಗಳು ತಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸುವಂತೆ ಭಯ, ಆತಂಕದಿಂದಲೇ ವೀಡಿಯೋ ಮಾಡಿಕೊಂಡು ಅಳಲು ತೋಡಿಕೊಳ್ಳುತ್ತಿದ್ದಾರೆ.
Advertisement
ಉತ್ತರ ಪ್ರದೇಶ ವಿದ್ಯಾರ್ಥಿನಿ ಗರ್ವಾಮಿಶ್ರ ವೀಡಿಯೋ ಮಾಡಿ ಕಣ್ಣೀರು ಹಾಕಿದ್ದಾಳೆ. ನನಗೆ ಅನ್ನಿಸುತ್ತಿದೆ ನಮಗೆ ಇಲ್ಲಿ ಯಾವುದೇ ಸಹಾಯ ಸಿಗುವುದಿಲ್ಲ. ಭಾರತೀಯ ರಾಯಭಾರಿ ಕಚೇರಿಗೆ ಕರೆ ಮಾಡುತ್ತಿದ್ದೇವೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ: ಉಕ್ರೇನ್ ಜನರ ಸಹಾಯಕ್ಕೆ ನಿಂತ ಇಸ್ಕಾನ್‍ಗೆ ಭಾರೀ ಮೆಚ್ಚುಗೆ
Advertisement
Advertisement
ಪ್ರತಿ ದಿನ ರಾತ್ರಿ ಬಂಕರ್ ಒಳಗೆ ನುಗ್ಗಲು ರಷ್ಯಾ ಸೈನಿಕರು ಯತ್ನಿಸುತ್ತಿದ್ದಾರೆ. ಗೇಟ್ ಒಡೆದು ಹಂಗಾಮ ಮಾಡ್ತಿದ್ದಾರೆ. ಇಲ್ಲಿಂದ ರೈಲು, ಕಾರಿನಲ್ಲಿ ಪೊಲೆಂಡ್ ಗಡಿಗೆ ತಲುಪಲು ಯತ್ನಿಸಿದವರ ಮೇಲೆ ಹಲ್ಲೆಗಳಾಗಿದೆ, ನಾಪತ್ತೆಯಾಗಿದ್ದಾರೆ. ರಷ್ಯಾ ಸೈನಿಕರು ಫೈರಿಂಗ್ ಮಾಡಿದ್ದಾರೆ. ಭಾರತೀಯ ವಿದ್ಯಾರ್ಥಿನಿಯರನ್ನು ಅಪಹರಿಸಿದ್ದಾರೆ. ಅವರನ್ನು ಎಲ್ಲಿಗೆ ಕರೆದೊಯ್ದಿದ್ದಾರೆ, ಏನು ಮಾಡಿದ್ದಾರೆ ಎಂಬುದು ತಿಳಿದಿಲ್ಲ. ವಿದ್ಯಾರ್ಥಿಗಳ ಬಗ್ಗೆಯೂ ಮಾಹಿತಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!
Advertisement
ರುಮೇನಿಯಾ ಗಡಿಯಲ್ಲೂ ಸೈನಿಕರು ಹಲ್ಲೆ ಮಾಡುತ್ತಿದ್ದಾರೆ. ಮೋದಿ ಜೀ, ಯೋಗಿ ಜೀ ಯಾರಿದ್ದೀರಿ. ನಮ್ಮನ್ನು ಕಾಪಾಡಿ. ನಮನ್ನು ರಕ್ಷಣೆ ಮಾಡುತ್ತಾರೆಂಬ ಭರವಸೆ ಇಲ್ಲ. ನಮಗಿಲ್ಲಿ ಏನಾಗುತ್ತೋ ಗೊತ್ತಿಲ್ಲ. ಯಾರಿದ್ದೀರಿ..? ಎಲ್ಲಿದ್ದೀರಿ..? ದಯಮಾಡಿ ನಮ್ಮನ್ನು ಕಾಪಾಡಿ. ಭಾರತೀಯ ಸೇನೆಯನ್ನು ಕಳುಹಿಸಿ ನಮ್ಮನ್ನು ರಕ್ಷಿಸಿ. ನಾವು ಬದುಕುತ್ತಿವೋ, ಸಾಯುತ್ತಿವೋ ಗೊತ್ತಿಲ್ಲ. ದಯಮಾಡಿ.. ದಯಮಾಡಿ ನಮ್ಮನ್ನು ರಕ್ಷಿಸಿ. ಭಾರತೀಯ ರಾಯಭಾರಿ ನಮ್ಮ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಜೈಹಿಂದ್, ಜೈ ಭಾರತ್ ಎಂದು ಹೇಳುತ್ತಾ ಕಣ್ಣೀರು ಸುರಿಸಿ ರಕ್ಷಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.