ಅದು 2022, ಫೆಬ್ರವರಿ 24ರ ಸಂದರ್ಭ. ಇಡೀ ಜಗತ್ತೇ ಬೆಚ್ಚಿ ಬೀಳುವಂತಹ ಘೋಷಣೆಯೊಂದನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Volodymyr Zelensky) ಮಾಡಿದರು. ಉಕ್ರೇನ್ ಮೇಲೆ ಯುದ್ಧ ನಡೆಸುವುದಾಗಿ ಘೋಷಿಸಿ ಬಿಟ್ಟರು. ಎರಡು ಮಹಾಯುದ್ಧಗಳ ಭೀಕರತೆಗೆ ನಲುಗಿ ಶಾಂತಿಯ ಮಂತ್ರ ಜಪಿಸುತ್ತಿದ್ದ ವಿಶ್ವಕ್ಕೆ, ಈ ಘೋಷಣೆ ನಿಜಕ್ಕೂ ನುಂಗಲಾರದ ತುತ್ತಾಯಿತು. ವಿಶ್ವಯುದ್ಧಗಳಿಂದಾದ ಸಾವು-ನೋವು, ಆರ್ಥಿಕ ಪ್ರಕ್ಷುಬ್ಧತೆ, ದೇಶ ದೇಶಗಳ ನಡುವಿನ ಕಂದಕ, ವೈಮನಸ್ಸಿನ ಗಾಯದ ಗುರುತು ಇನ್ನೂ ಮಾಡಿಲ್ಲ. ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುತ್ತಲೇ ಇದ್ದಾರೆ. ಇಂತಹ ಹೊತ್ತಿನಲ್ಲಿ ಪುಟಿನ್ (Vladimir Putin) ನಿರ್ಧಾರ ಭೂವಾಸಿಗಳಿಗೆ ಮತ್ತೆ ಸಂಕಷ್ಟ ತಂದಿಟ್ಟಿದೆ.
ಉಕ್ರೇನ್ ಮೇಲೆ ರಷ್ಯಾ (Ukraine-Russia) ನಡೆಸುತ್ತಿರುವ ಯುದ್ಧಕ್ಕೆ 18 ತಿಂಗಳು ತುಂಬಿದೆ. ರಷ್ಯಾದ ಆಕ್ರಮಣದಿಂದ ಹತ್ತಾರು ಸಾವಿರ ಜನರ ಮಾರಣಹೋಮವಾಗಿದೆ. ಲಕ್ಷಾಂತರ ಜನರು ಗಂಟುಮೂಟೆ ಕಟ್ಟಿಕೊಂಡು ನೆಲೆ ಇಲ್ಲದಂತೆ ಅಲೆಮಾರಿಗಳಾಗಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ಪ್ರಪಂಚದಾದ್ಯಂತ ಆರ್ಥಿಕ ಪ್ರಕ್ಷುಬ್ಧತೆ ತಲೆದೋರಿದೆ. 2ನೇ ಮಹಾಯುದ್ಧದ (World War 2) ನಂತರ ಯೂರೋಪ್‌ನಲ್ಲಿ ಎಂದೂ ಕಂಡಿರದ ಮಟ್ಟದಲ್ಲಿ ಅಪಾರ ಸಾವು-ನೋವು ಈ ಯುದ್ಧದಲ್ಲಿ ಆಗಿದೆ ಎಂದು ವಿಶ್ಲೇಷಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಯಾವ ಪ್ರಧಾನಿಯೂ 5 ವರ್ಷ ಪೂರೈಸಿಲ್ಲ – ಕಾರಣಗಳೇನು?
Advertisement
Advertisement
ಎರಡನೇ ಮಹಾಯುದ್ಧದ ಭೀಕರತೆ
1939ರಿಂದ 1945 ರ ವರೆಗೆ ನಡೆದ ಜಾಗತಿಕ ಅನೇಕ ದೇಶಗಳನ್ನೊಳಗೊಂಡ ಯುದ್ಧ ಎರಡನೇ ಮಹಾಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆದ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ (ಜರ್ಮನಿ, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕ) ಹಾಗೂ ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಬರೋಬ್ಬರಿ 70 ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ್ದ ಈ ಯುದ್ಧದಲ್ಲಿ 6 ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಮನುಕುಲದ ಇತಿಹಾಸದಲ್ಲೇ ಇದು ಅತಿ ಹೆಚ್ಚು ಸಾವು-ನೋವಾದ ಯುದ್ಧ.
Advertisement
ಯುದ್ಧದಿಂದ ರಷ್ಯಾ ಮತ್ತು ಉಕ್ರೇನ್ ಎರಡೂ ರಾಷ್ಟ್ರಗಳಲ್ಲಿ ಎಷ್ಟು ಸಾವು-ನೋವಾಗಿದೆ? ಯುದ್ಧದಲ್ಲಿ ಮನೆ ಕಳೆದುಕೊಂಡು ಎಷ್ಟು ಜನ ವಲಸೆ ಹೋಗಿದ್ದಾರೆ? ಉಕ್ರೇನ್ ಹಾಗೂ ರಷ್ಯಾದ ಮೇಲೆ ಯುದ್ಧ ಯಾವ ರೀತಿಯ ಪರಿಣಾಮ ಬೀರಿದೆ? ಈ ಯುದ್ಧದಿಂದ ಜಾಗತಿಕವಾಗಿ ಉಂಟಾದ ಬಿಕ್ಕಟ್ಟೇನು? ಉಕ್ರೇನ್‌ಗೆ ಒದಗಿ ಬಂದ ನೆರವು ಮೊದಲಾದ ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
Advertisement
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಡಿದವರೆಷ್ಟು?
ಎರಡನೆಯ ಮಹಾಯುದ್ಧದ ನಂತರ ಯೂರೋಪ್‌ನಲ್ಲಿ ಕಂಡುಬರದ ಮಟ್ಟದಲ್ಲಿ ಈ ಯುದ್ಧವು ಸಾವನ್ನು ಉಂಟುಮಾಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ (OHCHR) ಪ್ರಕಾರ, ಜುಲೈ ಅಂತ್ಯದ ವೇಳೆಗೆ 9,000 ಕ್ಕೂ ಹೆಚ್ಚು ನಾಗರಿಕರು ಹತ್ಯೆಯಾಗಿದ್ದಾರೆ. 16,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದಾಖಲಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವಾಗಿದೆ. ಆ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಯುದ್ಧದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಸಂಖ್ಯೆ ಎರಡೂ ಸೇರಿ 5,00,000 ದಷ್ಟಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದನ್ನೂ ಓದಿ: AsiaCup ಟೂರ್ನಿಯಲ್ಲಿ ಭಾರತದ್ದೇ ಮೇಲುಗೈ – ಗೆದ್ದವರು, ಬಿದ್ದವರ ಕಥೆ
1,12,000 ರಷ್ಯಾದ ಸೈನಿಕರು ಸಾವಿಗೀಡಾಗಿದ್ದಾರೆ. 1,70,000 ದಿಂದ 1,80,000 ವರೆಗೆ ಸೈನಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಬೆಂಬಲಿಸುವ ಯುನೈಟೆಡ್ ಸ್ಟೇಟ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್‌ನಲ್ಲಿ 70,000 ದಿಂದ 1,00,000 ವರೆಗೆ ಸೈನಿಕರು ಹತರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಮೆರಿಕದ ಅಂಕಿ ಅಂಶಗಳನ್ನು ರಷ್ಯಾ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅಂಕಿಅಂಶದಲ್ಲಿ ಹೆಚ್ಚಿನ ಸಂಖ್ಯೆಯನ್ನು ತೋರಿಸಲಾಗಿದೆ. ಪ್ರಚಾರಕ್ಕಾಗಿ ಯುಎಸ್ ಹೀಗೆ ಮಾಡುತ್ತಿದೆ ಎಂದು ರಷ್ಯಾ ಅಧಿಕಾರಿಗಳು ಆರೋಪಿಸಿದ್ದಾರೆ.
ಸ್ಥಳಾಂತರ ಆದವರೆಷ್ಟು?
2022 ರ ಆಕ್ರಮಣದಿಂದ, ಲಕ್ಷಾಂತರ ಉಕ್ರೇನಿಯನ್ನರು ತಮ್ಮ ಮನೆಗಳಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. 4.1 ಕೋಟಿಯಷ್ಟು ಜನಸಂಖ್ಯೆಯನ್ನು ಉಕ್ರೇನ್ ರಾಷ್ಟ್ರ ಹೊಂದಿದೆ. 1.7 ಕೋಟಿಯಷ್ಟು ಜನರಿಗೆ ತುರ್ತು ಮಾನವೀಯ ನೆರವಿನ ಅಗತ್ಯವಿದೆ. 50 ಲಕ್ಷಕ್ಕೂ ಹೆಚ್ಚು ಮಂದಿ ಉಕ್ರೇನ್ ನಿರಾಶ್ರಿತರು ಯೂರೋಪ್‌ನಾದ್ಯಂತ ಆಶ್ರಯ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್ ಪರಿಸ್ಥಿತಿ ಹೇಗಿದೆ?
ಯುದ್ಧ ಪ್ರಾರಂಭವಾದಾಗಿನಿಂದಲೂ ರಷ್ಯಾವು ಉಕ್ರೇನ್‌ನ 11 ಪ್ರತಿಶತದಷ್ಟು ಭೂಪ್ರದೇಶವನ್ನು ವಶಪಡಿಸಿಕೊಂಡಿದೆ. ಈ ಭೂಪ್ರದೇಶದ ಅಮೆರಿಕದ ರಾಜ್ಯಗಳಾದ ಮೆಸ್ಸಾಚುಸೆಟ್ಸ್, ನ್ಯೂ ಹ್ಯಾಂಪ್‌ಶೈರ್ ಮತ್ತು ಕನೆಕ್ಟಿಕಟ್‌ಗೆ ಸಮಾನವಾಗಿದೆ ಎಂದು ಹಾರ್ವರ್ಡ್ ಕೆನಡಿ ಸ್ಕೂಲ್‌ನಲ್ಲಿರುವ ಬೆಲ್ಫರ್ ಸೆಂಟರ್ ವರದಿಯಲ್ಲಿ ತಿಳಿಸಿದೆ. 2014 ರಲ್ಲಿ ಉಕ್ರೇನ್‌ನಿಂದ ಕ್ರಿಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿತ್ತು. ಒಟ್ಟಾರೆ ರಷ್ಯಾ ಈಗ ಉಕ್ರೇನ್‌ನ ಸುಮಾರು 17.5% ಭೂಭಾಗವನ್ನು ನಿಯಂತ್ರಿಸುತ್ತಿದೆ. ಇದು ಸುಮಾರು 41,000 ಚದರ ಮೈಲಿಗಳು (106,000 ಚದರ ಕಿಮೀ) ಇದೆ. ಇದನ್ನೂ ಓದಿ: Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್
ಉಕ್ರೇನ್ ತನ್ನ ಕರಾವಳಿಯ ಒಂದು ಭಾಗವನ್ನು ಕಳೆದುಕೊಂಡಿದೆ. ಅದರ ಆರ್ಥಿಕತೆಯು ದುರ್ಬಲಗೊಂಡಿದೆ. ಹೋರಾಟದಿಂದ ಕೆಲವು ನಗರಗಳು ಪಾಳುಭೂಮಿಗಳಾಗಿ ಮಾರ್ಪಟ್ಟಿವೆ. ಉಕ್ರೇನ್‌ನ ಆರ್ಥಿಕತೆಯು 2022 ರಲ್ಲಿ 30% ರಷ್ಟು ಕುಸಿತ ಕಂಡಿದೆ. ಈ ವರ್ಷ 1% ರಿಂದ 3% ರಷ್ಟು ಬೆಳೆಯುವ ಮುನ್ಸೂಚನೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ವಿಶ್ಲೇಷಿಸಿದೆ.
ರಷ್ಯಾದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ?
ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧದ ಅಸ್ತ್ರವನ್ನು ಹೂಡಿವೆ. ಇದರಿಂದ ರಷ್ಯಾದ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಟ್ಟಂತಾಗಿದೆ. ರಷ್ಯಾವು ಮಿಲಿಟರಿಗೆ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಇದರಿಂದ ಇತರೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. 2022 ರಲ್ಲಿ ರಷ್ಯಾ ಆರ್ಥಿಕತೆಯು 2.1% ನಷ್ಟು ಕುಸಿತ ಕಂಡಿತ್ತು. ಈ ವರ್ಷ 1.5% ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿ ಮಾಡಿದೆ.
ಯುದ್ಧದ ಮಧ್ಯಾವಧಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ನಿರ್ಗಮನ, ಮಾನವ ಬಂಡವಾಳದ ನಷ್ಟ, ಜಾಗತಿಕ ಹಣಕಾಸು ಮಾರುಕಟ್ಟೆಗಳಿಂದ ಸಂಪರ್ಕ ಕಡಿತದಿಂದ ರಷ್ಯಾದ ಆರ್ಥಿಕತೆಯು ಕುಂಠಿತಗೊಂಡಿದೆ ಎಂದು IMF ವಕ್ತಾರ ಜೂಲಿ ಕೊಜಾಕ್ ಕಳೆದ ತಿಂಗಳು ಹೇಳಿದ್ದರು. ಈ ಅವಧಿಯಲ್ಲಿ ರಷ್ಯಾದಲ್ಲಿ ಉತ್ಪಾದನೆಯು ಯುದ್ಧ ಪೂರ್ವದಲ್ಲಿದ್ದ ಪ್ರಮಾಣಕ್ಕಿಂತ 7 ಪ್ರತಿಶತದಷ್ಟು ಕಡಿಮೆಯಾಗಿದೆ ಎನ್ನಲಾಗಿದೆ. ರಷ್ಯಾ ತನ್ನ 2023 ರ ರಕ್ಷಣಾ ವೆಚ್ಚದ ಗುರಿಯನ್ನು 100 ಶತಕೋಟಿ ಡಾಲರ್‌ಗಿಂತ ಹೆಚ್ಚು ಹೊಂದಿದೆ. ಎಲ್ಲಾ ಸಾರ್ವಜನಿಕ ವೆಚ್ಚದ ಮೂರನೇ ಒಂದು ಭಾಗವನ್ನು ಮಿಲಿಟರಿಗಾಗಿಯೇ ವಿನಿಯೋಗಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಇದನ್ನೂ ಓದಿ: ಅದಾನಿ ಷೇರು ಶಾರ್ಟ್ ಸೆಲ್ಲಿಂಗ್, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?
ಜಾಗತಿಕ ಹಣದುಬ್ಬರ, ಆಹಾರ ಬಿಕ್ಕಟ್ಟು
ರಷ್ಯಾದ ಆಕ್ರಮಣ ಮತ್ತು ಪಾಶ್ಚಿಮಾತ್ಯ ನಿರ್ಬಂಧಗಳು ಗೊಬ್ಬರ, ಗೋಧಿ, ಲೋಹಗಳ ಬೆಲೆಗಳಲ್ಲಿ ಏರಿಕೆಗೆ ಕಾರಣವಾಯಿತು. ಈ ಯುದ್ಧವು ಹಣದುಬ್ಬರದ ಅಲೆ ಮತ್ತು ಜಾಗತಿಕ ಆಹಾರ ಬಿಕ್ಕಟ್ಟನ್ನು ಉತ್ತೇಜಿಸಿತು. ಸೌದಿ ಅರೇಬಿಯಾದ ನಂತರ ರಷ್ಯಾ ವಿಶ್ವದ ಎರಡನೇ ಅತಿದೊಡ್ಡ ತೈಲ ರಫ್ತುದಾರ. ಅಷ್ಟೇ ಅಲ್ಲ ನೈಸರ್ಗಿಕ ಅನಿಲ, ಗೋಧಿ, ಸಾರಜನಕ ಗೊಬ್ಬರ ಮತ್ತು ಪಲ್ಲಾಡಿಯಂನ ರಫ್ತುದಾರ ಕೂಡ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಸ್ವಲ್ಪ ಕಾಲದ ನಂತರ, ಅಂತಾರಾಷ್ಟ್ರೀಯ ತೈಲ ಬೆಲೆಗಳು 2008 ರ ದಾಖಲೆಗಳನ್ನೂ ಮೀರಿ ಗರಿಷ್ಠ ಮಟ್ಟಕ್ಕೆ ಏರಿತು.
ಪಾಶ್ಚಾತ್ಯ ರಾಷ್ಟ್ರಗಳಿಂದ ಉಕ್ರೇನ್‌ಗೆ ಒದಗಿಬಂದ ನೆರವು
ಯುನೈಟೆಡ್ ಸ್ಟೇಟ್ಸ್ ಉಕ್ರೇನ್‌ಗೆ ಇದುವರೆಗೆ 43 ಶತಕೋಟಿಗೂ ಹೆಚ್ಚು ಡಾಲರ್ ಭದ್ರತಾ ನೆರವನ್ನು ನೀಡಿದೆ. ಇದರಲ್ಲಿ ಸ್ಟಿಂಗರ್ ವಿಮಾನ-ವಿರೋಧಿ ವ್ಯವಸ್ಥೆಗಳು, ಜಾವೆಲಿನ್ ಆಂಟಿ-ಆರ್ಮರ್ ಸಿಸ್ಟಮ್‌ಗಳು, 155mm ಹೊವಿಟ್ಜರ್‌ಗಳು ಮತ್ತು ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಮತ್ತು ಪರಮಾಣು ದಾಳಿಯಿಂದ ರಕ್ಷಿಸುವ ಉಪಕರಣಗಳು ಸೇರಿವೆ. ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಒಕ್ಕೂಟ, ಬ್ರಿಟನ್, ಜರ್ಮನಿ ಮತ್ತು ಜಪಾನ್ ದೇಶಗಳು ಉಕ್ರೇನ್‌ಗೆ ಅಪಾರ ಬೆಂಬಲ ನೀಡಿವೆ. ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸುತ್ತಿರುವುದರಿಂದ ಯುದ್ಧ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ರಷ್ಯಾ ಆರೋಪಿಸಿದೆ.
Web Stories