– ಚಿತ್ರ ಬಿಡುಗಡೆ ಮಾಡಿದ ನಾಸಾ
ಮಾಸ್ಕೋ: ಚಂದ್ರನ (Moon) ಅಂಗಳಕ್ಕೆ ರಷ್ಯಾ (Russia) ಕಳುಹಿಸಿದ್ದ ಲೂನಾ-25 (Luna-25) ಮಿಷನ್ ವಿಫಲವಾಗಿ ಅಪ್ಪಳಿಸಿದ ಪರಿಣಾಮವಾಗಿ ಚಂದ್ರನ ಮೇಲ್ಮೈನಲ್ಲಿ ಕುಳಿಯಾಗಿದೆ ಎಂದು ಚಿತ್ರವೊಂದನ್ನು ಬಿಡುಗಡೆ ಮಾಡಿ ನಾಸಾ (NASA) ಹೇಳಿದೆ.
Advertisement
ಭಾರತ ಉಡ್ಡಯನ ಮಾಡಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಇಳಿಯುವ ಮೊದಲೇ ತಾನು ಲ್ಯಾಂಡ್ ಆಗಬೇಕು ಎಂದು ರಷ್ಯಾ ಲೂನಾ-25 ನೌಕೆ ಕಳುಹಿಸಿತ್ತು. ಆದರೆ ರಷ್ಯಾದ ಚಂದ್ರಯಾನ ಮಿಷನ್ ವಿಫಲವಾಯಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ಗೆ ಮುಂದಾಗಿದ್ದ ರಷ್ಯಾದ ನೌಕೆ ವಿಫಲವಾಗಿ ಚಂದ್ರನ ಮೇಲೆ ಅಪ್ಪಳಿಸಿತ್ತು. ಇದನ್ನೂ ಓದಿ: ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ಇಸ್ರೋ ಮುಖ್ಯಸ್ಥ
Advertisement
Advertisement
ಯುಎಸ್ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ನ ಲೂನಾರ್ ರೆಕಾನೈಸೆನ್ಸ್ ಆರ್ಬಿಟರ್ (LRO) ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಲ್ಲಿ ಹೊಸ ಕುಳಿಯನ್ನು ಪತ್ತೆ ಮಾಡಿದೆ. ಅದು ರಷ್ಯಾದ ಲೂನಾ-25 ಮಿಷನ್ನ ಪ್ರಭಾವದ ಸ್ಥಳ ಎಂದು ತೀರ್ಮಾನಿಸಿದೆ.
Advertisement
ಈ ಹೊಸ ಕುಳಿಯು ಸುಮಾರು 10 ಮೀಟರ್ ವ್ಯಾಸವನ್ನು ಹೊಂದಿದೆ ಎಂದು ನಾಸಾ ಹೇಳಿದೆ. ಹೊಸ ಕುಳಿಯು ಲೂನಾ-25 ಅಂದಾಜು ಪ್ರಭಾವದ ಬಿಂದುವಿಗೆ ಹತ್ತಿರವಾಗಿದೆ. ಹೀಗಾಗಿ ಕುಳಿಯು ನೈಸರ್ಗಿಕ ಪ್ರಭಾವದ ಬದಲಿಗೆ ರಷ್ಯಾದ ನೌಕೆಯಿಂದ ಆಗಿರಬಹುದು ಎಂದು LRO ತಂಡವು ಹೇಳಿದೆ. ಇದನ್ನೂ ಓದಿ: ನಾಳೆ ಆದಿತ್ಯ ಎಲ್ 1 ಉಡಾವಣೆ – ಸೂರ್ಯನ ಅಧ್ಯಯನಕ್ಕೆ ಹೇಗೆ ಸಿದ್ಧವಾಗಿದೆ ಇಸ್ರೋ?
47 ವರ್ಷಗಳ ಬಳಿಕ ರಷ್ಯಾವು ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಲೂನಾ-25 ನೌಕೆಯನ್ನು ಉಡಾವಣೆ ಮಾಡಿತ್ತು. ಆದರೆ ನೌಕೆಯು ಆಗಸ್ಟ್ 19 ರಂದು ವಿಫಲವಾಯಿತು. ಅದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯಿಂದ ನಿಯಂತ್ರಣ ಕಳೆದುಕೊಂಡು ಚಂದ್ರನಿಗೆ ಅಪ್ಪಳಿಸಿತು. ಲೂನಾ-25 ನೌಕೆ ವಿಫಲವಾಗಲು ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸಲು ಆಯೋಗವೊಂದನ್ನು ರಚಿಸಲಾಗಿದೆ ಎಂದು ರಷ್ಯಾ ಈಚೆಗೆ ಹೇಳಿತ್ತು.
Web Stories