ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವುದು ರಷ್ಯಾದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ. ರಷ್ಯಾದ ಸೂಪರ್ ಮಾರುಕಟ್ಟೆಗಳಲ್ಲಿ ಸಕ್ಕರೆಗಾಗಿ ಜನರು ಪರಸ್ಪರ ಕಿತ್ತಾಡುತ್ತಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಉಕ್ರೇನ್ ವಿರುದ್ಧದ ಯುದ್ಧದ ಪರಿಣಾಮ ಆರ್ಥಿಕ ಕುಸಿತದಿಂದಾಗಿ ದೇಶದ ಕೆಲವು ಮಳಿಗೆಗಳು ಪ್ರತಿ ಗ್ರಾಹಕನಿಗೆ 10 ಕೆ.ಜಿ. ಸಕ್ಕರೆ ಕೊಳ್ಳಲು ಮಿತಿಯನ್ನು ವಿಧಿಸಿವೆ. 2015ರ ನಂತರ ರಷ್ಯಾದಲ್ಲಿ ವಾರ್ಷಿಕ ಹಣದುಬ್ಬರವು ಗರಿಷ್ಠ ಮಟ್ಟವನ್ನು ತಲುಪಿರುವುದರಿಂದ ಸಕ್ಕರೆಯ ಬೆಲೆ ಗಗನಕ್ಕೇರಿದೆ. ಇದನ್ನೂ ಓದಿ: ಆರ್ಥಿಕ ಅವನತಿಯತ್ತ ಶ್ರೀಲಂಕಾ – ಸಕ್ಕರೆ, ಬೇಳೆಗೆ ಚಿನ್ನದ ಬೆಲೆ, 1 ಟೀಗೆ 100 ರೂ.
Advertisement
Advertisement
ಶಾಪ್‌ಗಳಲ್ಲಿ ಗುಂಪುಗೂಡಿರುವ ಜನರು, ಸಕ್ಕರೆ ಪೊಟ್ಟಣಗಳಿಗಾಗಿ ಪರಸ್ಪರ ಕಿತ್ತಾಡುತ್ತಿರುವುದು ಹಾಗೂ ಒಬ್ಬರ ಮೇಲೊಬ್ಬರು ಮುಗಿಬಿದ್ದು ಪೊಟ್ಟಣಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ನಡೆಸುತ್ತಿರುವುದರಿಂದ ಸಾಮಾನ್ಯ ಜನತೆ ಎದುರಿಸುತ್ತಿರುವ ತೊಂದರೆಯನ್ನು ಈ ವೀಡಿಯೋ ಪ್ರತಿಬಿಂಬಿಸಿದೆ.
Advertisement
Сахарные бои в Мордоре продолжаются pic.twitter.com/hjdphblFNc
— 10 квітня (@buch10_04) March 19, 2022
Advertisement
ರಷ್ಯಾದ ಸರ್ಕಾರಿ ಅಧಿಕಾರಿಗಳು, ಸಕ್ಕರೆ ಕೊರತೆ ಇಲ್ಲ ಎಂದು ಹೇಳಿದ್ದಾರೆ. ಗ್ರಾಹಕರು ಅಂಗಡಿಗಳಲ್ಲಿ ಖರೀದಿಸುವ ಭೀತಿಯಿಂದ ಬಿಕ್ಕಟ್ಟು ಹುಟ್ಟುತ್ತಿದೆ ಎಂದು ತಿಳಿಸಿದ್ದಾರೆ. ಆದರೂ ಸರ್ಕಾರವು ದೇಶದಿಂದ ಸಕ್ಕರೆ ರಫ್ತಿನ ಮೇಲೆ ತಾತ್ಕಾಲಿಕ ನಿಷೇಧ ವಿಧಿಸಿದೆ. ಇದನ್ನೂ ಓದಿ: ಉಕ್ರೇನ್ ಯುದ್ಧದ ನಡುವೆಯೇ ಸುದ್ದಿಯಾಗ್ತಿದ್ದಾರೆ ಪುಟಿನ್ ಗರ್ಲ್‌ಫ್ರೆಂಡ್- ಯಾರೀಕೆ?
ಸಕ್ಕರೆಯ ಬೆಲೆಯು ಶೇ.31ರಷ್ಟು ಹೆಚ್ಚಾಗಿದೆ. ಆದರೆ ಪಾಶ್ಚಿಮಾತ್ಯ ನಿರ್ಬಂಧಗಳಿಂದಾಗಿ ಇತರೆ ಉತ್ಪನ್ನಗಳು ಸಹ ದುಬಾರಿಯಾಗಿವೆ. ಕಾರುಗಳು, ಗೃಹೋಪಯೋಗಿ ವಸ್ತುಗಳು ಮತ್ತು ಟಿ.ವಿ ಮೊದಲಾದ ವಿದೇಶದಿಂದ ಆಮದು ಮಾಡುತ್ತಿದ್ದ ಸರಕುಗಳ ಕೊರತೆ ಉಂಟಾಗಿದೆ. ಬೆಲೆಗಳು ದೇಶದಾದ್ಯಂತ ಏರುತ್ತಿರುವುದರಿಂದ ನಾಗರಿಕರು ಇದರ ಎದುರಿಸುತ್ತಿದ್ದಾರೆ.