ಮಾಸ್ಕೋ: ಆಸ್ಪತ್ರೆಯ ಕಿಟಕಿಯಿಂದ ಬಿದ್ದು ರಷ್ಯಾದ ತೈಲ ಸಂಸ್ಥೆ ಅಧ್ಯಕ್ಷ ರವಿಲ್ ಮಗನೋವ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಧ್ಯಕ್ಷ ರವಿಲ್ ಮಗನೋವ್ ಅವರು ತೀವ್ರ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಷ್ಯಾದ ಇಂಧನ ಸಂಸ್ಥೆ ಲುಕೋಯಿಲ್ ಗುರುವಾರ ತಿಳಿಸಿತ್ತು. ಇದನ್ನೂ ಓದಿ: ಏಳು ತಿಂಗಳಿಂದ ಸಂಬಳ ನೀಡಿಲ್ಲ – ಉದ್ಯೋಗಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
Advertisement
Advertisement
ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರವಿಲ್ ಮಗನೋವ್ ನಿಧನರಾಗಿದ್ದಾರೆ. ಅವರ ನಿಧನಕ್ಕೆ ವಿಷಾದಿಸುತ್ತೇವೆ ಎಂದು ಲುಕೋಯಿಲ್ ಸಂಸ್ಥೆ ಸಂತಾಪ ಸೂಚಿಸಿದೆ.
Advertisement
ಫೆಬ್ರವರಿಯಲ್ಲಿ ರಷ್ಯಾ ತನ್ನ ಸೈನ್ಯವನ್ನು ಉಕ್ರೇನ್‌ಗೆ ಕಳುಹಿಸಿ ದಾಳಿ ನಡೆಸಲಾರಂಭಿಸಿತು. ಈ ದಾಳಿಗೆ ಪಾಶ್ಚಿಮಾತ್ಯ ಅನೇಕ ರಾಷ್ಟ್ರಗಳು ಸೇರಿದಂತೆ ರಷ್ಯಾ ಶಾಂತಿಪ್ರಿಯರು ವಿರೋಧ ವ್ಯಕ್ತಪಡಿಸಿದರು. ದಾಳಿ ಕೊನೆಗೊಳಿಸಲು ಕರೆ ನೀಡಿದ ಕೆಲವು ಪ್ರಮುಖ ರಷ್ಯಾದ ಕಂಪನಿಗಳಲ್ಲಿ ಲುಕೋಯಿಲ್ ಕೂಡ ಒಂದಾಗಿದೆ. ಇದನ್ನೂ ಓದಿ: ಗೋ ಮೂತ್ರದಲ್ಲಿ ಸ್ನಾನ ಮಾಡೋದು ನೀವೇ ಅಲ್ವಾ- ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ನಿಂದನೆ
Advertisement
ಮಾಸ್ಕೋದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಯ ಆರನೇ ಮಹಡಿಯ ಕಿಟಕಿಯಿಂದ ಹೊರಗೆ ಬಿದ್ದು ಮಗನೋವ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಗನೋವ್ 1954 ರಲ್ಲಿ ಜನಿಸಿದರು. ಅವರು 1993 ರಿಂದ ಲುಕೋಯಿಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 2020ರಲ್ಲಿ ಅವರು ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.