Russia Ukraine War | ಮೇ 8ರಿಂದ 10ರ ವರೆಗೆ ಕದನ ವಿರಾಮ – ಉಲ್ಲಂಘಿಸಿದ್ರೆ ದಾಳಿ ಎಚ್ಚರಿಕೆ ಕೊಟ್ಟ ರಷ್ಯಾ

Public TV
1 Min Read
Russia Ukraine 1

– ತಹಾವ್ವುರ್ ರಾಣಾ 12 ದಿನಗಳ ಕಾಲ ಎನ್‌ಐಎ ಕಸ್ಟಡಿ

ಮಾಸ್ಕೋ/ಕೈವ್‌: ಉಕ್ರೇನ್ ವಿರುದ್ಧ 2 ವರ್ಷಗಳಿಂದ ನಡೆಯುತ್ತಿರುವ ಯುದ್ಧಕ್ಕೆ (Russia Ukraine War) ರಷ್ಯಾ ಅಧ್ಯಕ್ಷ ಪುಟಿನ್ 3 ದಿನ ಕದನ ವಿರಾಮ ಘೋಷಿಸಿದ್ದಾರೆ.

80ನೇ ಸೇನಾ ವಿಜಯೋತ್ಸವ ಹಿನ್ನೆಲೆಯಲ್ಲಿ ಮೇ 8ರಿಂದ 10ರ ವರೆಗೆ 3 ದಿನ ಕದನ ವಿರಾಮ ಪ್ರಕಟಿಸಿದ್ದಾರೆ. ಇನ್ನು, ಉಕ್ರೇನ್ ವಶ ಪಡಿಸಿಕೊಂಡಿದ್ದ ಪಶ್ಚಿಮ ರಷ್ಯಾದ ಕುರ್ಸ್ಕ್ ಪ್ರಾಂತ್ಯವನ್ನು ಮರುವಶ ಮಾಡಿಕೊಂಡಿದ್ದಾಗಿ ರಷ್ಯಾ ಹೇಳಿದೆ.

ಈ ಮಧ್ಯೆ, ಈ ವಿಚಾರವಾಗಿ ರಷ್ಯಾಗೆ ಸೇನಾ ಬೆಂಬಲ ನೀಡಿದ್ದಾಗಿ ಉತ್ತರ ಕೊರಿಯಾ ಅಧಿಕೃತವಾಗಿ ಹೇಳಿದೆ.

tahawwur rana photo

ತಹಾವ್ವುರ್ ರಾಣಾ 12 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ:
ಇನ್ನೂ 26/11 ಮುಂಬೈ ದಾಳಿಯ ಸೂತ್ರಧಾರ ತಹಾವ್ವೂರ್‌ ರಾಣಾನನ್ನು ಎನ್‌ಐಎ 12 ದಿನ ಕಸ್ಟಡಿಗೆ ಪಡೆದಿದೆ. ಎನ್‌ಐಎ ಜಡ್ಜ್ ಮುಂದೆ ಹಾಜರು ಪಡಿಸಿದ್ದ ಅಧಿಕಾರಿಗಳು 18 ದಿನ ವಶಕ್ಕೆ ಕೇಳಿದ್ದರು. ಎನ್‌ಐಎ ಪರವಾಗಿ ದಯಾನ್ ಕೃಷ್ಣನ್, ಪಬ್ಲಿಕ್ ಪ್ರಾಸಿಕ್ಯೂಟರ್ ನರೇಂದ್ರ ಮನ್ ವಾದಿಸಿದರು.

ಘಟನೆ ಸಂಭವಿಸಿದ 17 ವರ್ಷಗಳು ಆಗಿದೆ. ಹಾಗಾಗಿ, ಆರೋಪಿಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಮಹಜರು ಮಾಡಬೇಕಿದೆ ಅಂತ ವಾದಿಸಿದರು. ರಾಣಾ ಪರ ವಕೀಲ ಪಿಯುಶ್ ಸಚ್ದೇವ್ ವಕಾಲತು ವಹಿಸಿದ್ದಾರೆ.

Share This Article