ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾರತ ಸೇರಿದಂತೆ 4 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿ ಅದೇಶ ಹೊರಡಿಸಿದ್ದಾರೆ.
Advertisement
ಭಾರತ, ಜರ್ಮನಿ, ಜೆಕ್‍ಗಣರಾಜ್ಯ, ನಾರ್ವೆ ಮತ್ತು ಹಂಗೇರಿ ದೇಶಗಳ ರಾಯಭಾರಿಗಳನ್ನು ಝೆಲೆನ್ಸ್ಕಿ ವಜಾಗೊಳಿಸಿರುವ ಬಗ್ಗೆ ಅಧಿಕೃತವಾಗಿ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಆದರೆ ಯಾವ ಕಾರಣಕ್ಕೆ ವಜಾಗೊಳಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: ಹೆತ್ತ ತಾಯಿಯ ಕತ್ತು ಸೀಳಿ ಕೊಂದು, ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಗ
Advertisement
Advertisement
ಈ ಹಿಂದೆ ರಷ್ಯಾ, ಉಕ್ರೇನ್ ವಿರುದ್ಧ ಯುದ್ಧ ಸಾರಿದಾಗ ಉಕ್ರೇನ್‍ಗೆ ಅಂತಾರಾಷ್ಟ್ರೀಯ ಬೆಂಬಲ ಮತ್ತು ಮಿಲಿಟರಿ ಸಹಾಯವನ್ನು ಹೆಚ್ಚಿಸಲು ಝೆಲೆನ್ಸ್ಕಿ ತನ್ನ ರಾಜತಾಂತ್ರಿಕರ ಬಳಿ ಮನವಿಮಾಡಿಕೊಂಡಿದ್ದರು. ಆದರೆ ಈ ವೇಳೆ ಯಾವುದೇ ನೆರವು ಸಿಕ್ಕಿರಲಿಲ್ಲ. ಆದರೂ ರಷ್ಯಾದೊಂದಿಗೆ ನಿರಂತವಾಗಿ ಯುದ್ಧ ಮಾಡಿ ದೇಶವನ್ನು ಉಳಿಸಿಕೊಳ್ಳಲು ಉಕ್ರೇನ್ ಹೋರಾಡುತ್ತಿದೆ. ಯುದ್ಧ ನಡೆಯುತ್ತಿರುವಂತೆ ಶಕ್ತಿಶಾಲಿ ರಾಕೆಟ್ ಲಾಂಚರ್‌ಗಳನ್ನು ಒಳಗೊಂಡಂತೆ ಕೈವ್‍ಗೆ ಹೊಸ ಮಿಲಿಟರಿ ನೆರವು ನೀಡುವುದಾಗಿ ಯುನೈಟೆಡ್ ಸ್ಟೇಟ್ಸ್ ಭರವಸೆ ನೀಡಿದೆ. ಇದನ್ನೂ ಓದಿ: ಶ್ರೀಲಂಕಾದ ಪ್ರಧಾನಿ ರನೀಲ್ ವಿಕ್ರಮಸಿಂಘೆ ಮನೆಗೆ ಬೆಂಕಿ, ವಾಹನಗಳು ಜಖಂ – ಹೊಸ ಸರ್ಕಾರ ರಚನೆಗೆ ಅಸ್ತು
Advertisement
ಇತ್ತ ರಷ್ಯಾದ ಪಡೆಗಳು ಯುದ್ಧ ಮುಮದುವರಿಸಿದ್ದು ಉಕ್ರೇನ್‍ನ ಪೂರ್ವ ಡೊನೆಟ್ಸ್ಕ್ ಪ್ರದೇಶದ ಮೇಲೆ ನಿರಂತರ ಶೆಲ್ ದಾಳಿಯನ್ನು ಮುಂದುವರಿಸಿದೆ. ನೆರೆಯ ಲುಗಾನ್ಸ್ಕ್ ಪ್ರದೇಶದ ನಗರಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಮುಂದಾಗಿದ್ದ ವೇಳೆ ಉಕ್ರೇನ್ ಸಮರ್ಥವಾಗಿ ಎದುರಿಸಿ ರಷ್ಯಾ ಪಡೆಯನ್ನು ಹಿಮ್ಮೆಟ್ಟಿಸಿದೆ. ರಷ್ಯಾ ಈಗ ಸಂಪೂರ್ಣ ಡೊನ್ಬಾಸ್ ಪ್ರದೇಶದ ಮೇಲೆ ತನ್ನ ಹಿಡಿತವನ್ನು ಬಲಪಡಿಸಲು ಮುಂದಾಗಿದೆ. ಈ ನಡುವೆ ಉಕ್ರೇನ್ ಈವರೆಗೆ 37,200 ರಷ್ಯಾ ಸೈನಿಕರನ್ನು ಹೊಡೆದುರುಳಿಸುವುದಾಗಿ ತಿಳಿಸಿದೆ.