ಅಧಿಕಾರಿಗಳು ಉತ್ತರ ಭಾರತದ ವಿದ್ಯಾರ್ಥಿಗಳ ಮೇಲೆ ಹೆಚ್ಚು ಒಲವು ತೋರಿದ್ದಾರೆ. ಸ್ಥಳಾಂತರದ ಸಂದರ್ಭದಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಕೆಲವು ದಕ್ಷಿಣ ಭಾರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಉತ್ತರ ಭಾರತದ ವಿದ್ಯಾರ್ಥಿಗಳ ಪರವಾಗಿದ್ದು, ನಮ್ಮ ಹೆಸರನ್ನು ಸ್ಥಳಾಂತರದ ಪಟ್ಟಿಯಿಂದ ಅಳಿಸಿದ್ದಾರೆ. ಹಾಗೂ ಕೇರಳದ ವಿದ್ಯಾರ್ಥಿಗಳಿಗಾಗಿ ಏರ್ಪಾಡು ಮಾಡಲಾಗಿದ್ದ ವಿಮಾನವನ್ನೂ ರದ್ದು ಮಾಡಿ, ಬದಲಾಯಿಸಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆಯನ್ನು ಧ್ವಂಸಗೊಳಿಸಿದ ರಷ್ಯಾ ಸೇನೆ
Advertisement
Advertisement
ತಮಿಳು ಮೂಲದ ವಿದ್ಯಾರ್ಥಿಯೊಬ್ಬ ನಾವು ವಿಮಾನಕ್ಕಾಗಿ 24-48 ಗಂಟೆಗಳ ಕಾಲ ಕಾದಿದ್ದೇವೆ. ಆದರೂ ಅಂದು ಬೆಳಗ್ಗೆ ಬಂದಿದ್ದ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡಿದ್ದಾರೆ. ನಮ್ಮ ಹೆಸರನ್ನು ಅಳಿಸಿ ಆ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಇನ್ನೊಬ್ಬ ವಿದ್ಯಾರ್ಥಿ ನಮ್ಮನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದಿದ್ದರು. ನಾವು ಮಾರ್ಚ್ 1 ರಂದು ಗಡಿ ತಲುಪಿದ್ದೆವು. ಮಾರ್ಚ್ 2 ರಂದು ವಿಮಾನವನ್ನು ನಿಗದಿಪಡಿಸಬೇಕಿತ್ತು. ಆದರೆ ಅದು ಆಗಿರಲಿಲ್ಲ ಎಂದರು. ಇದನ್ನೂ ಓದಿ: ಮನ್ ಕಿ ಬಾತ್ ನಾರಿ ಶಕ್ತಿ ಸಂಭ್ರಮದ ವೀಡಿಯೋ ಶೇರ್ ಮಾಡಿದ ಮೋದಿ
Advertisement
ಪೋಲೆಂಡ್‌ನಲ್ಲಿ ಕೇರಳದ 15 ವಿದ್ಯಾರ್ಥಿಗಳಿಗಾಗಿ ಒಂದು ವಿಮಾನ ನಿಗದಿಪಡಿಸಲಾಗಿತ್ತು. ಆದರೆ ಅವರು ಕೇರಳದ ವಿದ್ಯಾರ್ಥಿಗಳಿಗೆ ತಿಳಿಸದೇ ಆ ವಿಮಾನವನ್ನು ರದ್ದುಗೊಳಿಸಿದ್ದರು. ಬದಲಿಗೆ ಉತ್ತರ ಭಾರತದ ವಿದ್ಯಾರ್ಥಿಗಳನ್ನು ಆ ವಿಮಾನದಲ್ಲಿ ಕೂರಿಸಿದ್ದರು. ಇದರಿಂದ ಕೇರಳ ಮೂಲದ ವಿದ್ಯಾರ್ಥಿಗಳೂ ಆಕ್ರೋಶಗೊಂಡಿದ್ದರು ಎಂದಿದ್ದಾರೆ.