ಮಾಸ್ಕೋ: ಉಕ್ರೇನ್ ಮೇಲಿನ ದಾಳಿಯನ್ನು ವಿಶ್ವದ ಇತರ ದೇಶಗಳು ಮಾತ್ರವಲ್ಲದೇ ರಷ್ಯಾ ಕೂಡಾ ವಿರೋಧಿಸುತ್ತಿದೆ. ಯುದ್ಧ ಘೋಷಿಸಿದ ದೇಶದ ಒಳಗಿನವರೇ ಅಧ್ಯಕ್ಷನ ವಿರುದ್ಧ ಟೀಕೆ ಮಾಡಿದ್ದಾರೆ. ರಷ್ಯಾದ ಸಾಮಾನ್ಯ ಜನರು, ಕ್ರೀಡಾ ಪಟುಗಳು ಸೆಲೆಬ್ರಿಟಿಗಳು ಎನ್ನದೇ ಬಹುತೇಕ ಜನರು ಯುದ್ಧ ಬೇಡ ಎಂದೇ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯಾರ ಮಾತನ್ನೂ ಕೇಳದೇ ಯುದ್ಧವನ್ನು ಮುಂದುವರಿಸುತ್ತಿರುವಾಗ ರಷ್ಯಾದ ಉದ್ಯಮಿಯೊಬ್ಬರು ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಯುದ್ಧ ವಿರೋಧಿ ರಷ್ಯನ್ನರ ಬಂಧನ- ಪುಟಿನ್ ರಷ್ಯಾದವನಲ್ಲ ಎಂದ ನಾವೆಲ್ನಿ
Advertisement
Advertisement
ರಷ್ಯಾದ ಮಾಸ್ಕೋ ಮೂಲದ ಉದ್ಯಮಿ ಅಲೆಕ್ಸ್ ಕೋನನಿಖಿನ್ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದಾರೆ. ಪುಟಿನ್ ಅವರನ್ನು ರಷ್ಯಾದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಯುದ್ಧ ಅಪರಾಧಿ ಎಂದು ಬಂಧಿಸಿದ ಅಧಿಕಾರಿಗೆ ನಾನು 10 ಲಕ್ಷ ಡಾಲರ್(7.5 ಕೋಟಿ ರೂ.) ನೀಡುವುದಾಗಿ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 7000 ರಷ್ಯಾ ಯೋಧರ ಸಾವು: ಉಕ್ರೇನ್ ಅಧ್ಯಕ್ಷ
Advertisement
ಪುಟಿನ್ ರಷ್ಯಾದ ಅಧ್ಯಕ್ಷನಲ್ಲ. ಅವರು ವಿಶೇಷ ಕಾರ್ಯಾಚರಣೆಯ ಭಾಗವಾಗಿ ರಷ್ಯಾದಲ್ಲಿ ಅನೇಕ ಅಪಾರ್ಟ್‍ಮೆಂಟ್ ಹಾಗೂ ಕಟ್ಟಡಗಳನ್ನು ಧ್ವಂಸ ಮಾಡಿದ್ದಾರೆ. ಇದಾದ ಬಳಿಕ ಚುನಾವಣೆಗಳನ್ನೂ ನಡೆಸಿಲ್ಲ. ಸಂವಿಧಾನವನ್ನು ಹಾಳುಮಾಡಿದ್ದಾರೆ. ತಮ್ಮ ವಿರೋಧಿಗಳನ್ನೂ ಕೊಂದಿದ್ದಾರೆ ಎಂದು ಬರೆದಿದ್ದಾರೆ.